ETV Bharat / state

ಸರ್ಕಾರದ 5 ಸಾವಿರ ರೂಪಾಯಿ ಸಹಾಯಧನಕ್ಕೆ ಹಾವೇರಿ ಕ್ಷೌರಿಕರ ಸಂತಸ

ಲಾಕ್​​ಡೌನ್ ಜಾರಿಯಾದ ಬಳಿಕ ಆಟೋ ಚಾಲಕರು ಹಾಗೂ ಕ್ಷೌರಿಕರು ಸೇರಿದಂತೆ ಹಲವರು ಸಂಕಷ್ಟಕ್ಕೆ ಸಿಲುಕಿದ್ದರು. ಇದೀಗ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಕ್ಷೌರಿಕರಿಗೆ ಸಹಾಯಧನವಾಗಿ 5 ಸಾವಿರ ರೂಪಾಯಿ ಘೋಷಣೆ ಮಾಡಿದ್ದಾರೆ. ಈ ಹಿನ್ನೆಲೆ ಹಾವೇರಿಯ ಕ್ಷೌರಿಕರು ಸರ್ಕಾರದ ನಿರ್ಧಾರಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.

Haveli hairdressers are happy with Announcement of 5 thousand rupees
ಸರ್ಕಾರದ 5 ಸಾವಿರ ರೂಪಾಯಿ ಸಹಾಯ ಧನಕ್ಕೆ ಹಾವೇರಿ ಕ್ಷೌರಿಕರ ಸಂತಸ
author img

By

Published : May 6, 2020, 8:03 PM IST

ಹಾವೇರಿ: ಸರ್ಕಾರ ನಮಗೆ 5 ಸಾವಿರ ರೂಪಾಯಿ ಸಹಾಯಧನ ಘೋಷಣೆ ಮಾಡಿರುವುದು ಸಂತಸ ತಂದಿದೆ ಅಂತ ಕ್ಷೌರಿಕರು ಸಂತಸ ವ್ಯಕ್ತಪಡಿಸಿದ್ದಾರೆ.

ಲಾಕ್​ಡೌನ್ ವೇಳೆ ಅಂಗಡಿ ಮುಂಗಟ್ಟು ಬಂದ್ ಮಾಡಿದ್ದರಿಂದ ಅದಾಯವಿಲ್ಲದಂತಾಗಿದೆ. ಬಾಡಿಗೆ ಕಟ್ಟಲು ಹಣವಿರಲಿಲ್ಲ. ಸರ್ಕಾರದ ಈ ನಿರ್ಧಾರದಿಂದ ನಮ್ಮ ಆರ್ಥಿಕ ಸಮಸ್ಯೆ ಸ್ವಲ್ಪ ಮಟ್ಟಿಗೆ ನಿವಾರಣೆಯಾಗಲಿದೆ ಎಂದು ನಿರಾಳರಾದರು.

ಸರ್ಕಾರದ 5 ಸಾವಿರ ರೂಪಾಯಿ ಸಹಾಯ ಧನಕ್ಕೆ ಹಾವೇರಿ ಕ್ಷೌರಿಕರ ಸಂತಸ

ಇದೇ ವೇಳೆ ಸರ್ಕಾರ ನಮಗೆ ಮೆಡಿಕಲ್ ಕಿಟ್​​​​ ವಿತರಿಸಿದ್ದರೆ ಚೆನ್ನಾಗಿರುತ್ತಿತ್ತು ಎಂದು‌ ಕ್ಷೌರಿಕರು ತಿಳಿಸಿದ್ದಾರೆ. ಹಾವೇರಿಯಲ್ಲಿ ಹಡಪದ ಅಪ್ಪಣ್ಣ ಸಮಾಜ ಮತ್ತು ಸವಿತಾ ಸಮಾಜದ 50 ಸಾವಿರ ಜನರಿದ್ದಾರೆ. ಸಿಎಂ ಯಡಿಯೂರಪ್ಪನವರ ಈ ಕಾರ್ಯ ಕೊಂಚ ನೆಮ್ಮದಿ ನೀಡಿದಂತಾಗಿದೆ ಎಂದು ಕ್ಷೌರಿಕರು ಸಂತಸ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.