ಹಾವೇರಿ: ಮೃತಪಟ್ಟ ಹಾವೇರಿಯ ಗುತ್ತಲ ಗ್ರಾಮದ ವೃದ್ಧನೋರ್ವನ ಅಂತ್ಯಕ್ರಿಯೆ ನಡೆಸಿದ ಬಳಿಕ ಆತನಿಗೆ ಕೊರೊನಾ ಸೋಂಕಿರುವ ಆತಂಕಕಾರಿ ವಿಷಯ ಬೆಳಕಿಗೆ ಬಂದಿದೆ.
70 ವರ್ಷದ ವೃದ್ಧ ಅನಾರೋಗ್ಯದಿಂದ ಬಳಲುತ್ತಿದ್ದರಿಂದ ಜಿಲ್ಲಾಸ್ಪತ್ರೆಯಲ್ಲಿ ಜುಲೈ 1ರಂದು ಚಿಕಿತ್ಸೆ ಪಡೆದಿದ್ದ. ಆರೋಗ್ಯದಲ್ಲಿ ತೀವ್ರ ಏರುಪೇರಾಗಿದ್ದರಿಂದ ಗಂಟಲು ದ್ರವ ಪಡೆದ ವೈದ್ಯರು, ಕಿಮ್ಸ್ಗೆ ಸೇರಿಸಿದ್ದರು.
ಆದರೆ, ವೃದ್ಧ ಭಾನುವಾರ ರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದ. ಈ ಹಿನ್ನೆಲೆಯಲ್ಲಿ ಗುತ್ತಲದಲ್ಲಿ ಸೋಮವಾರ ಬೆಳಗ್ಗೆ ಸಹಜ ಸಾವಿನಂತೆ ಅಂತ್ಯಕ್ರಿಯೆ ನಡೆಸಲಾಗಿತ್ತು. ಆದರೆ ಸಂಜೆ ಮೃತನ ಗಂಟಲು ದ್ರವ ಮಾದರಿಯ ಫಲಿತಾಂಶ ಪಾಸಿಟಿವ್ ಬಂದಿದೆ. ಇದರಿಂದ ಅಂತ್ಯಕ್ರಿಯೆಗೆ ಬಂದಿದ್ದವರಿಗೆ ಆತಂಕ ಶುರುವಾಗಿದೆ.