ಹಾವೇರಿ : ಆದಾಯದಲ್ಲಿ ಚೇತರಿಕೆ ಕಂಡರೆ ಇಂಧನ ಬೆಲೆ ಇಳಿಕೆ ಬಗ್ಗೆ ಚರ್ಚೆ ಮಾಡ್ತೀವಿ ಎಂಬ ಸಿಎಂ ಬೊಮ್ಮಾಯಿ ಹೇಳಿಕೆಗೆ ವಿಪಕ್ಷ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಹಾನಗಲ್ನ ಮಾಸಣಕಟ್ಟಿ ಗ್ರಾಮದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಅವರು, ಇಂಧನ ದರ ಇಳಿಕೆ ಮಾಡುವ ಚಿಂತನೆ ಹೇಳಿಕೆ ಎಲೆಕ್ಷನ್ ಸ್ಟಂಟ್. ಚುನಾವಣೆಗೋಸ್ಕರ ಹೇಳಿರುವ ಮಾತಿದು.
ಪೆಟ್ರೋಲ್, ಡೀಸೆಲ್ ಬೆಲೆ ಜಾಸ್ತಿ ಮಾಡಿದಾರಲ್ಲ?. ಸರ್ಕಾರಕ್ಕೆ ಈಗಾಗಲೇ ಆದಾಯ ಬಂದಿದೆ. ಇತ್ತೀಚೆಗೆ ಒಂದು ವಾರದ ಹಿಂದೆ ವರದಿ ಬಂದಿದೆ. ಸೆಪ್ಟಂಬರ್‌ನಿಂದ ಇತ್ತೀಚಿನವರೆಗೆ 9,000 ಕೋಟಿ ರೂ. ತೆರಿಗೆ ಸಂಗ್ರಹವಾಗಿದೆ. ತೈಲ ಬೆಲೆ ಜಾಸ್ತಿ ಆಗಿರುವುದಕ್ಕೆ ಸರ್ಕಾರದ ಆದಾಯ ಜಾಸ್ತಿ ಆಗಿದೆ ಎಂದರು.
ಸಂಗೂರು ಫ್ಯಾಕ್ಟರಿಗೆ ಅಧ್ಯಕ್ಷ ಯಾರಾಗಿದ್ರಪ್ಪಾ?: ಸಂಗೂರು ಫ್ಯಾಕ್ಟರಿ ನುಂಗಿ ನೀರು ಕುಡಿದಿದ್ದು ಕಾಂಗ್ರೆಸ್ನವರು ಎಂಬ ಬಿಜೆಪಿಗರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಸಂಗೂರು ಫ್ಯಾಕ್ಟರಿಗೆ ಅಧ್ಯಕ್ಷ ಯಾರಾಗಿದ್ರಪ್ಪಾ?. ಯಾಕೆ ಸುಳ್ಳು ಹೇಳ್ತಿದ್ದಾರೆ?. ಸುಳ್ಳು ಹೇಳಬಾರದು. ಉದಾಸಿ ಅಧ್ಯಕ್ಷ, ಸಜ್ಜನರ್ ಉಪಾಧ್ಯಕ್ಷ ಆಗಿರಲಿಲ್ಲವಾ?. ಅವರ ಕಾಲದಲ್ಲಿ ಶುಗರ್ ಫ್ಯಾಕ್ಟರಿ ಮುಳುಗಿ ಹೋಯಿತು. ಮತ್ತೆ ಇದಕ್ಕೆ ಕಾಂಗ್ರೆಸ್ ಹೇಗೆ ಕಾರಣ? ಎಂದು ಪ್ರಶ್ನಿಸಿದರು.
ಯಾರನ್ನ ಓಲೈಕೆ ಮಾಡ್ತಿದೀನಂತೆ?: ಆರ್ಎಸ್ಎಸ್ ಬಗ್ಗೆ ಮಾತನಾಡಿ ಯಾರನ್ನ ಸಿದ್ದರಾಮಯ್ಯ ಓಲೈಕೆ ಮಾಡ್ತಿದ್ದಾರೆ ಗೊತ್ತಿಲ್ಲ ಎಂಬ ಸಿಎಂ ಹೇಳಿಕೆ ವಿಚಾರಕ್ಕೆ, ಯಾರನ್ನ ಓಲೈಕೆ ಮಾಡ್ತಿದೀನಂತೆ?. ಅವರು ಆರ್ಎಸ್ಎಸ್ ಹಿಡಿತದಲ್ಲಿದರಲ್ಲ. ಅವರನ್ನ ಓಲೈಕೆ ಮಾಡುತ್ತಿದ್ದೇನೆ ಎಂದು ವ್ಯಂಗ್ಯವಾಡಿದರು. ಸಿದ್ದರಾಮಯ್ಯ ಬುರುಡೆ ರಾಮಯ್ಯ ಎಂಬ ಬಿಜೆಪಿ ಟ್ವೀಟ್ ವಿಚಾರದ ಬಗ್ಗೆ ಮಾತನಾಡಿ, ನಾನು ಹೇಳಿದ್ನಲ್ಲಪಾ. ಸುಳ್ಳು ಹೇಳ್ತಾ ಇದಿನಾ?, ಸತ್ಯ ಹೇಳ್ತಿದಿನಾ? ನೀವೇ ಪರಿಶೀಲಿಸಿ ಎಂದರು.
ಇದನ್ನೂ ಓದಿ: ರಾಜ್ಯದಲ್ಲಿ ತೆರಿಗೆ ಕಡಿತ ಮಾಡಿ, ಪೆಟ್ರೋಲ್ ದರ ಇಳಿಕೆ: ಸಿಎಂ ಭರವಸೆ