ETV Bharat / state

ರಾಜ್ಯದಲ್ಲಿ ಅಭಿವೃದ್ಧಿಯನ್ನೇ ಸ್ತಬ್ಧ ಮಾಡಲಾಗಿದೆ : ಮಾಜಿ ಸಿಎಂ ಬಸವರಾಜ ಬೊಮ್ಮಾಯಿ - ಗ್ಯಾರಂಟಿ ಯೋಜನೆ

ಡಿಸಿಎಂ ಡಿಕೆಶಿ ಹಾಗೂ ಸಿಎಂ ಸಿದ್ದರಾಮಯ್ಯರ ನಡುವಿನ ಸಿಎಂ ಪೈಪೋಟಿ ಆಡಳಿತದ ಮೇಲೆ ಕೆಟ್ಟ ಪರಿಣಾಮ ಬೀರಿದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆರೋಪಿಸಿದರು.

ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ
author img

By ETV Bharat Karnataka Team

Published : Aug 28, 2023, 5:24 PM IST

Updated : Aug 28, 2023, 9:23 PM IST

ಬಸವರಾಜ ಬೊಮ್ಮಾಯಿ ಹೇಳಿಕೆ

ಹಾವೇರಿ: ಬಹುಮತ ಪಡೆದ ಸರ್ಕಾರ ಯಾವ ರೀತಿ ಆಡಳಿತ ಮಾಡಬೇಕೋ ಆ ರೀತಿ ಕಾಂಗ್ರೆಸ್​ ಸರ್ಕಾರ ಕೆಲಸ ಮಾಡುತ್ತಿಲ್ಲ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ನಗರ ಶಿರಡಿ ಸಾಯಿಬಾಬಾ ನೂತನ ದೇವಸ್ಥಾನಕ್ಕೆ ಭೇಟಿ ನೀಡಿ ರಾಜ್ಯ ಸರ್ಕಾರ ನೂರು ದಿನ ಪೂರೈಸಿರುವ ಕುರಿತು ಮಾತನಾಡಿದ ಅವರು, ಮುಂದಿನ ಒಂದು ವರ್ಷ ಯಾವುದೇ ಅಭಿವೃದ್ಧಿ ಆಗದ ಹಾಗೆ ಅಭಿವೃದ್ಧಿಯನ್ನೇ ಸ್ತಬ್ಧ ಮಾಡಿಬಿಟ್ಟಿದ್ದಾರೆ. ರಾಜ್ಯದಲ್ಲಿ ಅಭಿವೃದ್ಧಿಯ ಯಾವುದೇ ಲಕ್ಷಣ ಕಾಣ್ತಾ ಇಲ್ಲ. ರಸ್ತೆಗೆ ಹಿಡಿ ಮಣ್ಣು ಹಾಕುವುದುಕ್ಕೂ ಆಗ್ತಾ ಇಲ್ಲ ಎಂದು ಬೊಮ್ಮಾಯಿ ವಾಗ್ದಾಳಿ ನಡೆಸಿದರು.

ರಾಜ್ಯದಲ್ಲಿ ಬರಗಾಲದ ಛಾಯೆ ಇದೆ, ಬರಗಾಲ ಘೋಷಣೆ ಮಾಡುತ್ತೇವೆ ಎಂದು ಜೂನ್, ಜುಲೈನಲ್ಲಿ ಹೇಳಿದರು. ಇದುವರೆಗೂ ಬರಗಾಲ ಘೋಷಣೆ ಮಾಡಿಲ್ಲ. ರಾಜ್ಯದಲ್ಲಿ ಭ್ರಷ್ಟಾಚಾರ ತುಂಬಿ ತುಳುಕ್ತಾ ಇದೆ, ಗುತ್ತಿಗೆದಾರರಿಗೆ ಬಿಲ್ ಕೊಡೋದಕ್ಕೂ ಸಹಿತ ಕಮಿಷನ್ ಪಡೆಯಲಾಗ್ತಿದೆ. ಇಲಾಖೆಗಳಲ್ಲಿ ಕಮಿಷನ್ ದಂಧೆ ಹೆಚ್ಚಾಗ್ತಾ ಇದೆ. ಡಿಸಿಎಂ ಡಿ ಕೆ ಶಿವಕುಮಾರ ಹಾಗೂ ಸಿಎಂ ಸಿದ್ದರಾಮಯ್ಯರ ನಡುವಿನ ಸಿಎಂ ಪೈಪೋಟಿ ಆಡಳಿತದ ಮೇಲೆ ಕೆಟ್ಟ ಪರಿಣಾಮ ಬೀರಿದೆ ಎಂದು ಮಾಜಿ ಸಿಎಂ ಆರೋಪಿಸಿದರು.

ರಾಜ್ಯದ ಜಲವನ್ನು ಕಾಪಾಡುವುದರಲ್ಲಿ ವಿಫಲರಾಗಿದ್ದಾರೆ. ನೀರಾವರಿ ಯೋಜನೆಗಳು ಸ್ತಬ್ಧವಾಗಿವೆ, ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಡಿದೆ.
ಕೊಲೆ ಸುಲಿಗೆ ದಿನ ನಿತ್ಯ ನಡೆಯುತ್ತಿವೆ. ಕಾಂಗ್ರೆಸ್ ಸರ್ಕಾರ ರಾಜ್ಯದ ಜನರ ನಿರೀಕ್ಷೆಗಳನ್ನು ನೂರು ದಿನಗಳಲ್ಲಿ ಹುಸಿ ಮಾಡಿದೆ ಎಂದು ಆರೋಪಿಸಿದರು. ಮಾಜಿ ಸಚಿವ ಶಂಕರ್ ಪಾಟೀಲ್​ ಮುನೇನಕೊಪ್ಪ ಪ್ರೆಸ್​ಮೀಟ್ ವಿಚಾರ ಕುರಿತಂತೆ ಮಾತನಾಡಿ, ಸೋತಿರುವ ಸಂದರ್ಭದಲ್ಲಿ ಬಹಳಷ್ಟು ವಿಚಾರಗಳು ಹೊರಗಡೆ ಬರ್ತಾ ಇವೆ. ಕುಳಿತುಕೊಂಡು ಸಮಾಧಾನ ಪಡಿಸುವ ಶಕ್ತಿ ನಮಗಿದೆ ಎಂದು ಬೊಮ್ಮಾಯಿ ಹೇಳಿದ್ರು.

ಮುಂದುವರೆದು ಮಾತನಾಡಿ, ಕಾಂಗ್ರೆಸ್​ನವರು ಲೋಕಸಭಾ ಚುನಾವಣೆಯಲ್ಲಿ 20, 21 ಕ್ಷೇತ್ರ ಗೆಲ್ತೀವಿ ಅಂತಿದ್ದಾರೆ. ಆದರೆ ಅವರ ಬಳಿ ಕ್ಯಾಂಡಿಡೇಟ್ ಗಳೇ ಇಲ್ಲ. ಹೀಗಾಗಿ ನಮ್ಮವರನ್ನು ಆಪರೇಷನ್ ಮಾಡುವ ದುಸ್ಥಿತಿ ಅವರಿಗೆ ಬಂದಿದೆ. ರೇಣುಕಾಚಾರ್ಯ ಕಾಂಗ್ರೆಸ್ ಸೇರುತ್ತಾರೆ ಎಂಬ ಚರ್ಚೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಈಗಾಗಲೇ ವರಿಷ್ಟರು ಇದರ ಬಗ್ಗೆ ಎಲ್ಲವನ್ನೂ ಗಮನಿಸಿದ್ದಾರೆ. ಈ ಬಗ್ಗೆ ಅವರೊಂದಿಗೆ ಮತನಾಡಲಾಗುತ್ತದೆ ಎಂದು ಹೇಳಿದರು.

ಬಳಿಕ ಗ್ಯಾರಂಟಿ ಯೋಜನೆಗಳಿಂದ ಸರ್ಕಾರದ ವಿವಿಧ ಯೋಜನೆಗಳಿಗೆ ಅನುದಾನ ಕೊರತೆಯಾಗಿರುವ ವಿಷಯದ ಬಗ್ಗೆ ಮಾತನಾಡಿ, ಈಗಾಗಲೇ ಸರ್ಕಾರಿ ನೌಕರರ ಸಂಬಳ ಸರಿಯಾಗಿ ಬರ್ತಾ ಇಲ್ಲ. ಸಾರಿಗೆ ನೌಕರರ ಸಂಬಳ ಕೂಡಾ ಆಗ್ತಾ ಇಲ್ಲ. ಕರೆಂಟ್ ಬಿಲ್​ ಕೂಡ ಹೆಚ್ಚಳ ಮಾಡಿದ್ದಾರೆ. ರೈತರಿಗೆ ಸರಿಯಾಗಿ ಕರೆಂಟ್ ಕೊಡ್ತಾ ಇಲ್ಲ. ಮುಂದಿನ ದಿನಗಳಲ್ಲಿ ನೀರಿನ ಕ್ಷಾಮ ಹಾಗೂ ವಿದ್ಯುತ್ ಕ್ಷಾಮವನ್ನು ರಾಜ್ಯ ಎದುರಿಸಲಿದೆ ಎಂದು ಆತಂಕ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಎಷ್ಟು ರೈತರ ಆತ್ಮಹತ್ಯೆ ಆಗಿದೆ, ಅದರಲ್ಲಿ ಅರ್ದದಷ್ಟು ನಮ್ಮ ಹಾವೇರಿ ಜಿಲ್ಲೆಯಲ್ಲಿ ಆಗಿರೋದು ದುರಂತ ಎಂದು ಬೊಮ್ಮಾಯಿ ಬೇಸರ‌ ವ್ಯಕ್ತಪಡಿಸಿದರು.

ಸಿಎಂ ಜಿಲ್ಲೆಗೆ ಬಂದು ಹೋದರೂ ಯಾವುದೇ ಸಹಾಯ ಸಹಕಾರ, ಆತ್ಮಸ್ಥೈರ್ಯ ರೈತರಿಗೆ ಸಿಕ್ಕಿಲ್ಲ, ರೈತರನ್ನು ಈ ಸರ್ಕಾರ ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿದೆ. ಎರಡು ಮೂರು ಬಾರಿ ಬಿತ್ತನೆ ಮಾಡಿದರೂ ಬೆಳೆ ಕೈಗೆ ಬಂದಿಲ್ಲ. ಸರಿಯಾದ ಸಮಯಕ್ಕೆ ಸಾಲ ಸಿಗ್ತಿಲ್ಲ, ಸಾಲ ವಸೂಲಾತಿ ಮತ್ತೆ ಪ್ರಾರಂಭವಾಗಿದೆ. ಈ ಎಲ್ಲಾ ಕಾರಣಕ್ಕಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ತಿದ್ದಾರೆ. ರೈತ ವಿರೋಧಿ, ಅಭಿವೃದ್ಧಿ ವಿರೋಧಿ ಜೊತೆಗೆ ಮಾನವೀಯತೆ ಕಳೆದುಕೊಂಡಿರೋ ಸರ್ಕಾರವಾಗಿದೆ ಎಂದು ಬೊಮ್ಮಾಯಿ ಆರೋಪಿಸಿದರು.

ಇದನ್ನೂ ಓದಿ: ಸಚಿವನಾಗುವ ಕನಸು ಈಡೇರಿಲ್ಲ, ಇದೇ ವಿಧಿಯಾಟ : ಬೇಸರ ಹೊರಹಾಕಿದ ಶಾಸಕ ಪುಟ್ಟರಂಗಶೆಟ್ಟಿ

Last Updated : Aug 28, 2023, 9:23 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.