ETV Bharat / state

ಸ್ವಾಮೀಜಿಗಳಿಂದ ಮಠದ ಭಕ್ತರಿಗೆ ಊರೋಟಾ - ಸಿಂದಗಿ ಮಠ

ಸ್ವಾಮೀಜಿಗಳು ಭಕ್ತ ಸಮೂಹವನ್ನೇ ಬರಮಾಡಿ ಪ್ರಸಾದ ವಿತರಿಸಿದ ಅಪರೂಪದ ಕ್ಷಣಕ್ಕೆ ಹಾವೇರಿಯ ಸಿಂದಗಿ ಮಠ ಸಾಕ್ಷಿಯಾಯಿತು.

ಸ್ವಾಮೀಜಿಗಳಿಂದ ಮಠದ ಭಕ್ತರಿಗೆ ಊರೋಟಾ
author img

By

Published : Mar 18, 2019, 12:52 PM IST

ಹಾವೇರಿ:ವೀರಶೈವ ಪರಂಪರೆಯಲ್ಲಿ ಭಕ್ತರು ಸ್ವಾಮೀಜಿಗಳನ್ನು ಮನೆಗೆ ಕರೆದು ಪ್ರಸಾದ (ಭಿನ್ನ) ಮಾಡಿಸುತ್ತಾರೆ. ಆದರೆ ಮಠದ ಸ್ವಾಮೀಜಿಗಳೇ ಭಕ್ತರನ್ನ ಮಠಕ್ಕೆ ಕರೆದು ಪ್ರಸಾದ ನೀಡುವ ಸಂಪ್ರದಾಯ ಹಾವೇರಿಯ ಸಿಂದಗಿ ಮಠದಲ್ಲಿದೆ.

ಸಿಂದಗಿ ಮಠ ಮಠಾಧೀಶರನ್ನು ತಯಾರಿಸುವ ಪಾಠ ಶಾಲೆ. ಶಾಂತವಿರೇಶ್ವರ ಶ್ರೀಗಳು ಕೆಲ ದಶಕಗಳ ಹಿಂದೆ ಇಲ್ಲಿ ಪಾಠ ಶಾಲೆ ಆರಂಭಿಸಿದ್ದರು. ಇಲ್ಲಿ ವ್ಯಾಸಂಗ ಮಾಡುವವರು ದಿನನಿತ್ಯ ನಗರದಲ್ಲಿ ನಡೆಯುವ ಹಲವು ಸಂಸ್ಕಾರಗಳಿಗೆ ಹೋಗಿ ಅಲ್ಲಿ ಭಿನ್ನ ಸ್ವೀಕರಿಸಿ ಬರುತ್ತಾರೆ. ಈ ರೀತಿ ಭಕ್ತರಿಂದ ಭಿನ್ನ ಸ್ವೀಕರಿಸಿ ಬರುವ ಸ್ವಾಮೀಜಿಗಳು ನಗರದ ಭಕ್ತರನ್ನು ಮಠಕ್ಕೆ ಊಟಕ್ಕೆ ಬರುವಂತೆ ಯಾಕೆ ಅಹ್ವಾನಿಸಬಾರದು ಎಂಬ ಚಿಂತನೆಶಾಂತವಿರೇಶ್ವರರು ನಡೆಸಿದ್ದರಂತೆ. ಅದರಂತೆ ವರ್ಷದ ಒಂದು ದಿನ ನಗರದ ಭಕ್ತರನ್ನ ಸಿಂದಗಿ ಮಠದ ಭಕ್ತರು ಮಠಕ್ಕೆ ಅಹ್ವಾನಿಸಿ ಅವರಿಗೆ ಊಟ ನೀಡುತ್ತಾರೆ. ಇದಕ್ಕೆ ಸ್ಥಳೀಯವಾಗಿ ಊರೋಟಾ ಎಂದೇ ಕರೆಯಲಾಗುತ್ತದೆ.

ಸ್ವಾಮೀಜಿಗಳಿಂದ ಮಠದ ಭಕ್ತರಿಗೆ ಊರೋಟಾ

ಮನೆ ಮನೆಗೆ ತೆರಳುವ ಸ್ವಾಮೀಜಿಗಳು ಮಠದಲ್ಲಿ ಇಂತಹ ದಿನ ಊರೋಟಾ ಇದೆ ಎಂದು ತಿಳಿಸಿ ಮಠಕ್ಕೆ ಬರುವಂತೆ ಮನವಿ ಮಾಡುತ್ತಾರೆ. ಮಠಕ್ಕೆ ಅಹ್ವಾನಿಸಿದ ಸ್ವಾಮೀಜಿ ತಾವೇ ಅಹಾರ ತಯಾರಿಸಿ ತಾವೇ ಭಕ್ತರಿಗೆ ಉಣಬಡಿಸುತ್ತಾರೆ. ಅಷ್ಟೇ ಅಲ್ಲದೇ, ಭಕ್ತರು ಉಂಡ ತಟ್ಟೆಗಳನ್ನು ಸಹ ಸ್ವಾಮೀಜಿಗಳೇ ತೊಳೆಯುತ್ತಾರೆ. ಈ ಕಾರ್ಯಕ್ಕೆ ಪಾಠ ಶಾಲೆಯ ಹಿಂದಿನ ವಿದ್ಯಾರ್ಥಿಗಳು ಸಾಥ್ ನೀಡುತ್ತಾರೆ. ಹಾವೇರಿ ನಗರವಾಸಿಗಳು ವಟುಗಳನ್ನು ವರ್ಷಪೂರ್ತಿ ಸ್ವಾಮೀಜಿಗಳನ್ನಾಗಿ ನೋಡಿದರೆ, ಈ ದಿನ ಮಠದ ಸ್ವಾಮೀಜಿಗಳು ನಗರದ ಭಕ್ತರಲ್ಲಿ ಸ್ವಾಮೀಜಿಯನ್ನು ಕಾಣುತ್ತಾರೆ. ಇಂತಹ ಸಂಪ್ರದಾಯ ರಾಜ್ಯದಲ್ಲಿ ಎಲ್ಲಿಯೂ ಇಲ್ಲ ಎಂಬ ಅಭಿಪ್ರಾಯವನ್ನು ಸ್ವಾಮಿಜಿಗಳು ವ್ಯಕ್ತಪಡಿಸುತ್ತಾರೆ. ಕಲ್ಯಾಣದಲ್ಲಿನ ಮಹಾದಾಸೋಹ ಪ್ರತಿರೂಪದಂತಿರುವ ಈ ಊರೋಟದಲ್ಲಿ ಸಹಸ್ರಾರು ಸಂಖ್ಯೆಯ ಭಕ್ತರು ಪಾಲ್ಗೊಳ್ಳುವುದು ವಿಶೇಷ. ಮಠದ ಶಾಂತವಿರೇಶ್ವರ ಶ್ರೀಗಳ ಪುಣ್ಯ ಸ್ಮರಣೋತ್ಸವ ಆಚರಿಸುವ ದಿನಗಳಲ್ಲಿ ಈ ಸಂಪ್ರದಾಯ ಆಚರಿಸಿಕೊಂಡು ಬರಲಾಗುತ್ತಿದೆ.

Intro:Body:

6 video

KN_HVR_17032019_ENADU_SPL_DINNER_SHIVAKUMAR_SCRIPT

ವೀರಶೈವ ಪರಂಪರೆಯಲ್ಲಿ ಭಕ್ತರು ಸ್ವಾಮಿಜಿಗಳನ್ನ ಮನೆಗೆ ಕರೆದು ಪ್ರಸಾದ (ಭಿನ್ನ) ಮಾಡಿಸುತ್ತಾರೆ. ಆದರೆ ಮಠದ ಸ್ವಾಮಿಜಿಗಳೇ ಭಕ್ತರನ್ನ ಮಠಕ್ಕೆ ಕರೆದು ಪ್ರಸಾದ ನೀಡುವ ಸಂಪ್ರದಾಯ ಹಾವೇರಿಯ ಸಿಂದಗಿಮಠದಲ್ಲಿದೆ. ಇಲ್ಲಿಯ ಸಿಂದಗಿಮಠ ಮಠಾಧೀಶರನ್ನು ತಯಾರಿಸುವ ಪಾಠಶಾಲೆ. ಇಲ್ಲಿ ಶಾಂತವಿರೇಶ್ವರಶ್ರೀಗಳು ಕೆಲ ದಶಕಗಳ ಹಿಂದೆ ಇಲ್ಲಿ ಪಾಠಶಾಲೆ ಆರಂಭಿಸಿದ್ದಾರೆ. ಇಲ್ಲಿ ವ್ಯಾಸಂಗ ಮಾಡುವ ವಟುಗಳು ದಿನನಿತ್ಯ ನಗರದಲ್ಲಿ ನಡೆಯುವ ಹಲವು ಸಂಸ್ಕಾರಗಳಿಗೆ ಹೋಗಿ ಅಲ್ಲಿ ಭಿನ್ನ ಸ್ವೀಕರಿಸಿ ಬರುತ್ತಾರೆ. ಈ ರೀತಿ ಭಕ್ತರಿಂದ ಭಿನ್ನ ಸ್ವೀಕರಿಸಿ ಬರುವ ವಟುಗಳು ನಗರದ ಭಕ್ತರನ್ನು ಊಟಕ್ಕೆ ಮಠಕ್ಕೆ ಬರುವಂತೆ ಯಾಕೆ ಅಹ್ವಾನಿಸಬಾರದು ಎಂಬ ಚಿಂತನೆ  ಶಾಂತವಿರೇಶ್ವರರು ನಡೆಸಿದ್ದರಂತೆ. ಅದರಂತೆ ವರ್ಷದ ಒಂದು ದಿನ ನಗರದ ಭಕ್ತರನ್ನ ಸಿಂದಗಿಮಠದ ಭಕ್ತರು ಮಠಕ್ಕೆ ಅಹ್ವಾನಿಸಿ ಅವರಿಗೆ ಊಟ ನೀಡುತ್ತಾರೆ. ಇದಕ್ಕೆ ಸ್ಥಳೀಯವಾಗಿ ಊರೋಟಾ ಎಂದೇ ಕರೆಯಲಾಗುತ್ತದೆ. ಮನೆ ಮನೆಗೆ ತೆರಳುವ ವಟುಗಳು ಮಠದಲ್ಲಿ ಇಂತಹ ದಿನ ಊರೋಟಾ ಇದೆ ಎಂದು ತಿಳಿಸಿ ಮಠಕ್ಕೆ ಬರುವಂತೆ ಮನವಿ ಮಾಡುತ್ತಾರೆ. ಮಠಕ್ಕೆ ಅಹ್ವಾನಿಸಿದ ವಟುಗಳು ತಾವೇ ಅಹಾರ ತಯಾರಿಸಿ ತಾವೇ ಭಕ್ತರಿಗೆ ಊಟ ಬಡಿಸುತ್ತಾರೆ. ಅಷ್ಟೇ ಅಲ್ಲಾ ಭಕ್ತರು ಉಂಡ ತಟ್ಟೆಗಳನ್ನು ಸಹ ವಟುಗಳೇ ತೊಳೆಯುತ್ತಾರೆ. ಈ ವಟುಗಳ ಕಾರ್ಯಕ್ಕೆ ಪಾಠಶಾಲೆಯ ಹಿಂದಿನ ವಿದ್ಯಾರ್ಥಿಗಳು ಸಾಥ್ ನೀಡುತ್ತಾರೆ. ಹಾವೇರಿ ನಗರವಾಸಿಗಳು ವಟುಗಳನ್ನು ವರ್ಷಪೂರ್ತಿ ಸ್ವಾಮಿಜಿಗಳನ್ನಾಗಿ ನೋಡಿದರೆ ಈ ದಿನ ಮಠದ ಸ್ವಾಮಿಜಿಗಳು ನಗರದ ಭಕ್ತರಲ್ಲಿ ಸ್ವಾಮಿಜಿಯನ್ನ ಕಾಣುತ್ತಾರೆ. ಇಂತಹ ಸಂಪ್ರದಾಯ ರಾಜ್ಯದಲ್ಲಿ ಎಲ್ಲಿಯೂ ಇಲ್ಲ ಎಂಬ ಅಭಿಪ್ರಾಯವನ್ನ ಸ್ವಾಮಿಜಿಗಳು ವ್ಯಕ್ತಪಡಿಸುತ್ತಾರೆ. ಕಲ್ಯಾಣದಲ್ಲಿನ ಮಹಾದಾಸೋಹ ಪ್ರತಿರೂಪದಂತಿರುವ ಈ ಊರೋಟದಲ್ಲಿ ಸಹಸ್ಸಾರು ಸಂಖ್ಯೆಯ ಭಕ್ತರು ಪಾಲ್ಗೊಳ್ಳುವುದು ವಿಶೇಷ. ಮಠದ ಶಾಂತವಿರೇಶ್ವರಶ್ರೀಗಳ ಪುಣ್ಯಸ್ಮರಣೋತ್ಸವ ಆಚರಿಸುವ ದಿನಗಳಲ್ಲಿ ಈ ಸಂಪ್ರದಾಯ ಆಚರಿಸಿಕೊಂಡು ಬರಲಾಗುತ್ತಿದೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.