ರಾಣೆಬೆನ್ನೂರು: ಆಟೋ ಮೊಬೈಲ್ ಭಾಗಗಳನ್ನು ಶೇಖರಣೆ ಮಾಡಿಟ್ಟ ಅಂಗಡಿಗೆ ಆಕಸ್ಮಿಕವಾಗಿ ಬೆಂಕಿ ಬಿದ್ದು ಲಕ್ಷಾಂತರ ರೂಪಾಯಿ ಹಾನಿಯಾಗಿದೆ.
ರಾಣೆಬೆನ್ನೂರಿನ ಮೃತ್ಯುಂಜಯ ನಗರದ ಒಂದನೇ ಕ್ರಾಸ್ನಲ್ಲಿರುವ ಪೂಜಾ ಆಟೋ ಮೊಬೈಲ್ ಅಂಗಡಿಗೆ ಸೇರಿದ ಗೋದಾಮಿಗೆ ಬೆಂಕಿ ತಗುಲಿದೆ. ಸುಮಾರು ಎರಡು ಗಂಟೆಗಳ ಕಾಲ ಅಗ್ನಿಶಾಮಕ ದಳ ಬೆಂಕಿ ನಿಯಂತ್ರಿಸುವ ಕಾರ್ಯ ಮಾಡಿತು. ಘಟನೆಯಲ್ಲಿ ಲಕ್ಷಾಂತರ ಮೌಲ್ಯದ ವಸ್ತುಗಳನ್ನು ಬೆಂಕಿಗಾಹುತಿಯಾಗಿದ್ದು, ಸುಮಾರು ಇಪ್ಪತ್ತು ಲಕ್ಷ ಹಾನಿಯಾಗಿದೆ.
ಬ್ಯಾಂಕ್ಗೆ ಹಬ್ಬಿದ ಬೆಂಕಿ:
ಪೂಜಾ ಆಟೋ ಮೊಬೈಲ್ ಗೋದಾಮಿನ ಪಕ್ಕದಲ್ಲಿದ್ದ ಬ್ಯಾಂಕ್ ಆಫ್ ಬರೋಡದ ಕಟ್ಟಡಕ್ಕೂ ಬೆಂಕಿ ಆವರಿಸಿ ಕೆಲ ಕಾಲ ಆತಂಕ ಮೂಡಿಸಿತ್ತು. ಬೆಂಕಿ ಬಿದ್ದ ಹಿನ್ನೆಲೆಯಲ್ಲಿ ಬ್ಯಾಂಕ್ ಬಂದ್ ಮಾಡಲಾಯಿತು.