ETV Bharat / state

ಹಾವೇರಿ ಗೋಲಿಬಾರ್​ಗೆ​ ಇಂದಿಗೆ 12 ವರ್ಷ.. ಶಾಶ್ವತ ಪರಿಹಾರಕ್ಕಾಗಿ ಮನವಿ - Farmer Martyrdom Day Celebration In Haveri

ದಿನದಿಂದ ದಿನಕ್ಕೆ ರೈತರ ಸಮಸ್ಯೆಗಳು ಹೆಚ್ಚಾಗುತ್ತಿವೆ. ಸರ್ಕಾರಗಳು ರೈತರನ್ನ ನಿರ್ಲಕ್ಷ್ಯಿಸುತ್ತಿವೆ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ರೈತರು ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸುವಂತೆ ತಹಶೀಲ್ದಾರ್ ಶಂಕರ್​ ಅವರಿಗೆ ಮನವಿ ಪತ್ರ ಸಲ್ಲಿಸಿದರು.

Farmer Martyrdom Day Celebration In Haveri
ಮನವಿ ಪತ್ರ ಸಲ್ಲಿಸಿದ ರೈತ ಮುಖಂಡರು
author img

By

Published : Jun 10, 2020, 5:53 PM IST

ಹಾವೇರಿ : ಅಂದು ಬಿತ್ತನೆ ಬೀಜ,ಗೊಬ್ಬರಕ್ಕಾಗಿ ಬೀದಿಗಿಳಿದ ರೈತನ ಎದೆಗೆ ಗುಂಡಿಕ್ಕಿದ ದಿನವಿದು. ಆ ಘಟನೆ ನಡೆದು ಇದೀಗ 12 ವರ್ಷ. ಈ ಹಿನ್ನೆಲೆಯಲ್ಲಿ ನಗರದಲ್ಲಿ ರೈತ ಸಂಘಟನೆಗಳು ಹುತಾತ್ಮ ರೈತ ದಿನ ಆಚರಿಸಿದರು. ರೈತ ಹುತಾತ್ಮ ಸ್ಮಾರಕಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಲಾಯಿತು.

ಹಾವೇರಿ ಗೋಲಿಬಾರ್​ಗೆ​ ಇಂದಿಗೆ 12 ವರ್ಷ..

ಈ ಸಂದರ್ಭದಲ್ಲಿ ಮಾತನಾಡಿದ ರೈತ ಮುಖಂಡರು, ಆಳುವ ಸರ್ಕಾರಗಳು ರೈತ ವಿರೋಧಿ ನೀತಿ ಅನುಸರಿಸುತ್ತಿವೆ ಎಂದು ಆರೋಪಿಸಿದರು. ದಿನದಿಂದ ದಿನಕ್ಕೆ ರೈತರ ಸಮಸ್ಯೆಗಳು ಹೆಚ್ಚಾಗುತ್ತಿವೆ. ಸರ್ಕಾರಗಳು ರೈತರನ್ನ ನಿರ್ಲಕ್ಷ್ಯಿಸುತ್ತಿವೆ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ರೈತರು ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸುವಂತೆ ತಹಶೀಲ್ದಾರ್ ಶಂಕರ್​ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.