ETV Bharat / state

ಯುವಕನಿಗೆ ರಾಜ್ಯದ ಮುಖ್ಯಮಂತ್ರಿ ಸ್ಥಾನ ದೊರೆಯಲಿದೆ : ಕಾರ್ಣಿಕ ನುಡಿದ ಗೊರವಪ್ಪ ನಾಗಪ್ಪ ಉರ್ಮಿ‌

ಕಾರ್ಣಿಕೋತ್ಸವ ಹಿನ್ನೆಲೆಯಲ್ಲಿ ರಾಣಿಬೆನ್ನೂರು ತಾಲೂಕಿನ ದೇವರಗುಡ್ಡದ ಮಾಲತೇಶ ಗಂಗಮ್ಮದೇವಸ್ಥಾನಗಳಲ್ಲಿ ವಿಶೇಷ ಅಲಂಕಾರ ಮಾಡಲಾಗಿತ್ತು.

ಕಾರ್ಣಿಕ ನುಡಿದ ಗೊರವಪ್ಪ ನಾಗಪ್ಪ ಉರ್ಮಿ‌
ಕಾರ್ಣಿಕ ನುಡಿದ ಗೊರವಪ್ಪ ನಾಗಪ್ಪ ಉರ್ಮಿ‌
author img

By

Published : Oct 4, 2022, 7:13 PM IST

Updated : Oct 4, 2022, 10:43 PM IST

ಹಾವೇರಿ: ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ದೇವರಗುಡ್ಡ ಗ್ರಾಮದ ಮಾಲತೇಶ ದೇವರ ಕಾರ್ಣಿಕೋತ್ಸವ ಮಂಗಳವಾರದಂದು ಸಂಜೆ ನಡೆಯಿತು. ಸುಮಾರು 20 ಅಡಿ ಬಿಲ್ಲನ್ನೇರಿದ ಗೊರವಪ್ಪ ಕಾರ್ಣಿಕ ನುಡಿದು ಬಿಲ್ಲಿನಿಂದ ಕೆಳಗೆ ದುಮುಕಿದ್ದಾರೆ. ಆಕಾಶದೆತ್ತರದ ಗುಡ್ಡಕ್ಕೆ ಶಿಸು ಏರೀತಲೇ ಪರಾಕ್ ಎಂದು ಗೊರವಪ್ಪ ನಾಗಪ್ಪ ಕೆಳಗೆ ದುಮುಕುತ್ತಿದ್ದಂತೆ ಭಕ್ತರು ನೆಲಕ್ಕೆ ತಾಗದಂತೆ ಗೊರವಪ್ಪ ನಾಗಪ್ಪನನ್ನ ಹಿಡಿದರು.

ದೇವಸ್ಥಾನದ ಪ್ರಧಾನ ಅರ್ಚಕ ಸಂತೋಷ್​ ಭಟ್​ ಅವರು ಕಾರಣೀಕವನ್ನು ವಿಶ್ಲೇಷಿಸಿದ್ದಾರೆ

ಗೊರಪ್ಪನ ದೇಹ ಯಾವ ಕಡೆ ಬೀಳುತ್ತೆ, ತಲೆ ಯಾವ ಕಡೆ ಬೀಳುತ್ತೆ ಎಂದು ನೋಡಲಾಗುತ್ತದೆ. ಆ ಕಡೆ ಒಳ್ಳೆಯ ಬೆಳೆ ಮಳೆಯಾಗುತ್ತೆ ಎಂದು ಭಕ್ತರು ನಂಬುತ್ತಾರೆ. ಕಾರ್ಣಿಕವಾಗುತ್ತಿದ್ದಂತೆ ಭಕ್ತರು ಪ್ರಸ್ತುತ ಕಾರ್ಣಿಕದ ಅರ್ಥವನ್ನ ವಿಶ್ಲೇಷಿಸಿದರು. ಸಣ್ಣ ಸಣ್ಣ ರೈತರು ಸಹ ಉತ್ತಮವಾದ ಬೆಳೆ ಬೆಳೆಯುತ್ತಾರೆ. ಯುವ ರಾಜಕಾರಣಿಗಳಿಗೆ ಹೆಚ್ಚಿನ ಅವಕಾಶ ಸಿಗಲಿದೆ. ಯುವಕನಿಗೆ ರಾಜ್ಯದ ಮುಖ್ಯಮಂತ್ರಿ ಸ್ಥಾನ ದೊರೆಯಲಿದೆ ಎಂದು ಭಕ್ತರು ಕಾರ್ಣಿಕದ ವಿಶ್ಲೇಷಣೆ ಮಾಡಿದರು.

ಕಾರ್ಣಿಕ ನುಡಿದ ಗೊರವಪ್ಪ ನಾಗಪ್ಪ ಉರ್ಮಿ‌

ದೇವರಗುಡ್ಡದ ಕಾರ್ಣಿಕೋತ್ಸವ: ಈ ಕುರಿತಂತೆ ಮಾತನಾಡಿದ ದೇವಸ್ಥಾನದ ಅರ್ಚಕ ಸಂತೋಷ್ ಭಟ್, ಯುವಕನಿಗೆ ರಾಜ್ಯದ ಸಿಎಂ ಸ್ಥಾನ ಸಿಗಲಿದೆ ಎಂದು ಕಾರ್ಣಿಕೋತ್ಸವವನ್ನ ಅರ್ಥೈಸಿದರು. ಪ್ರತಿ ವರ್ಷ ಆಯುಧ ಪೂಜೆ ದಿನ ದೇವರಗುಡ್ಡದ ಕಾರ್ಣಿಕೋತ್ಸವ ನಡೆಯುತ್ತದೆ. ಮೈಲಾರದ ಕಾರ್ಣಿಕ ಮುಂಗಾರು ಮಳೆಯ ಭವಿಷ್ಯವಾಣಿ ಎಂದು ನಂಬಿದರೆ, ದೇವರಗುಡ್ಡದ ಕಾರ್ಣಿಕೋತ್ಸವವನ್ನ ಹಿಂಗಾರಿನ ಭವಿಷ್ಯವಾಣಿ ಎಂದು ನಂಬಲಾಗುತ್ತದೆ. ಈ ಭವಿಷ್ಯವಾಣಿಯನ್ನ ಮೈಲಾರಲಿಂಗೇಶ್ವರನೇ ಗೊರವಪ್ಪನಿಗೆ ನುಡಿಸುತ್ತಾನೆ ಎಂದು ಭಕ್ತರು ನಂಬುತ್ತಾರೆ.

ಮುಳ್ಳಿನ ಪವಾಡ: ಇನ್ನು ಕಾರ್ಣಿಕೋತ್ಸವ ಕೇಳಲು ರಾಜ್ಯದ ವಿವಿಧೆಡೆಯಿಂದ ಸಹಸ್ರಾರು ಭಕ್ತರು ಆಗಮಿಸಿದ್ದರು. ಕಾರ್ಣಿಕೋತ್ಸವ ಹಿನ್ನೆಲೆಯಲ್ಲಿ ದೇವರಗುಡ್ಡದ ಮಾಲತೇಶ ಗಂಗಮ್ಮದೇವಸ್ಥಾನಗಳಲ್ಲಿ ವಿಶೇಷ ಅಲಂಕಾರ ಮಾಡಲಾಗಿತ್ತು. ದೇವಸ್ಥಾನದಲ್ಲಿ ಮುಂಜಾನೆಯಿಂದಲೇ ವಿವಿಧ ಅಭಿಷೇಕ ಪೂಜಾ ಕೈಂಕರ್ಯಗಳನ್ನ ನಡೆಸಲಾಯಿತು. ಆಯುಧ ಪೂಜೆ ದಿನ ಇಲ್ಲಿ ಕಾರ್ಣಿಕೋತ್ಸವ ನಡೆದರೆ ಮರುದಿನ ಪವಾಡಗಳು ನಡೆಯುತ್ತವೆ. ಕಂಚಾವೀರರು ಮುಳ್ಳಿನ ಪವಾಡ, ಸರಪಳಿ ಪವಾಡ, ಗೂಟದ ಪವಾಡ ಸೇರಿದಂತೆ ವಿವಿಧ ಪವಾಡಗಳನ್ನ ಮಾಡುವ ಮೂಲಕ ದೇವರಿಗೆ ನಮನ ಸಲ್ಲಿಸುತ್ತಾರೆ.

ಓದಿ: ಮೈಲಾರಲಿಂಗೇಶ್ವರ ಕಾರ್ಣಿಕ ನುಡಿಯುತ್ತಿದ್ದ ಗೊರವಯ್ಯ ಮಾಲತೇಶಪ್ಪ ಇನ್ನಿಲ್ಲ..

Last Updated : Oct 4, 2022, 10:43 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.