ETV Bharat / state

Haveri Theft Case: ಮೊದಲು ಲಾರಿ ಕದ್ರು.. ಬಳಿಕ 87 ಲಕ್ಷ ರೂ. ಮೌಲ್ಯದ ಗುಟ್ಕಾ ಕದ್ದೊಯ್ದಿದ್ದ ನಾಲ್ವರು ಆರೋಪಿಗಳು ಅಂದರ್ - ಹಾವೇರಿ ಎಸ್ಪಿ ಶಿವಕುಮಾರ್ ಗುಣಾರೆ

87 ಲಕ್ಷ ರೂ. ಮೌಲ್ಯದ ಗುಟ್ಕಾ ಕಳ್ಳತನ ಮಾಡಿದ್ದ ಆರೋಪಿಗಳನ್ನು ಹಾವೇರಿ ಜಿಲ್ಲೆಯ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 1 ಕೋಟಿ ರೂ. ಮೌಲ್ಯದ ವಿವಿಧ ವಸ್ತುಗಳು ಹಾಗೂ ವಾಹನಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

Haveri SP Sivakumar Gunare
Gutka Theft Case: 87 ಲಕ್ಷ ರೂ. ಮೌಲ್ಯದ ಗುಟ್ಕಾ ಕಳ್ಳತನ ಮಾಡಿದ್ದ ನಾಲ್ವರು ಆರೋಪಿಗಳು ಅಂದರ್
author img

By

Published : Jun 21, 2023, 4:57 PM IST

ಹಾವೇರಿ ಎಸ್ಪಿ ಶಿವಕುಮಾರ್ ಗುಣಾರೆ ಮಾಹಿತಿ ನೀಡಿದರು.

ಹಾವೇರಿ: ಜಿಲ್ಲೆಯ ಪೊಲೀಸರು ಭರ್ಜರಿ ಬೇಟೆಯಾಡಿದ್ದಾರೆ. ಲಾರಿ ಕದ್ದು, ಅದೇ ಲಾರಿಯಲ್ಲಿ 87 ಲಕ್ಷ ರೂಪಾಯಿ ಮೌಲ್ಯದ ಗುಟ್ಕಾ ಕಳ್ಳತನ ಮಾಡಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರು ಮೈಸೂರು ಜಿಲ್ಲೆ ಭುಗತಗಲ್ಲಿಯಲ್ಲಿ ಹಾಲಿ ವಾಸವಾಗಿದ್ದ ರಾಜಸ್ಥಾನದ ಮೂಲದವರು. ಭಗವಾನ್ ರಾಮ್(23), ರತ್ನಾರಾಮ್ (23), ಧಾನಾರಾಮ್ (25) ಹಾಗೂ ಅರ್ಜುನ್ (27) ಬಂಧಿತರು ಎಂದು ಗುರುತಿಸಲಾಗಿದೆ.

87 ಲಕ್ಷ ರೂ. ಮೌಲ್ಯದ ಗುಟ್ಕಾ ಬಾಕ್ಸ್‌ ಕಳ್ಳತನ: ಪ್ರಕರಣದಲ್ಲಿ ಭಾಗಿಯಾಗಿದ್ದ ಇನ್ನೂ ಎರಡರಿಂದ ಮೂವರು ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಈ ಕೇಸ್​ ಕುರಿತು ಮಾತನಾಡಿದ ಹಾವೇರಿ ಎಸ್ಪಿ ಶಿವಕುಮಾರ್ ಗುಣಾರೆ ಅವರು, ''ಆರೋಪಿಗಳು ತಮ್ಮ ಸುಳಿವು ಸಿಗದಂತೆ ತೀವ್ರ ಎಚ್ಚರಿಕೆ ವಹಿಸಿದ್ದರು. ಆರೋಪಿತರು ಜೂನ್ 9ರಂದು ಬ್ಯಾಡಗಿ ಎಪಿಎಂಸಿಯಲ್ಲಿ ಲಾರಿ ಕಳ್ಳತನ ಮಾಡಿದ್ದರು. ನಂತರ ಅದೇ ದಿನ ರಾತ್ರಿ ರಾಣೆಬೆನ್ನೂರು ಶಹರದ ಗೋದಾಮಿನಲ್ಲಿ ಸುಮಾರು 87 ಲಕ್ಷ ರೂಪಾಯಿ ಮೌಲ್ಯದ ಗುಟ್ಕಾ ಬಾಕ್ಸ್‌ಗಳನ್ನು ಕಳ್ಳತನ ಮಾಡಿದ್ದರು.

ಕಳ್ಳತನಕ್ಕೆ ಯಾವುದೇ ಮೊಬೈಲ್ ಸೇರಿದಂತೆ ಇತರೆ ಸುಳಿವುಗಳನ್ನು ನೀಡದೇ ಆರೋಪಿಗಳು ಈ ಕೃತ್ಯ ಎಸಗಿದ್ದರು. ಅಷ್ಟೇ ಅಲ್ಲದೇ ವಾಹನಗಳ ನಂಬರ್ ಪ್ಲೇಟ್​ ಅನ್ನು ಬದಲಿಸಿ ವಾಹನ ಚಲಾಯಿಸಿದ್ದರು. ಕಳ್ಳತನ ಮಾಡಿದ್ದ ಗುಟ್ಕಾಗಳನ್ನು ಚೆನ್ನೈಗೆ ತೆಗೆದುಕೊಂಡು ಹೋಗಿ ಮಾರಾಟ ಮಾಡಲು ಮುಂದಾಗಿದ್ದರು. ಅಲ್ಲದೇ ಅದರಲ್ಲಿ 27 ಲಕ್ಷ ರೂಪಾಯಿ ಮೌಲ್ಯದ ಗುಟ್ಕಾ ಮಾರಾಟ ಮಾಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

1 ಕೋಟಿ ರೂ. ಮೌಲ್ಯದ ವಿವಿಧ ವಸ್ತುಗಳು, ವಾಹನಗಳು ವಶಕ್ಕೆ: ''ಅತ್ಯಂತ ಯೋಜನೆಬದ್ಧವಾಗಿ ಯಾವುದೇ ಸುಳಿವು ಸಹ ಲಭಿಸದಂತೆ ಆರೋಪಿಗಳು ಕೃತ್ಯ ಎಸಗಿದ್ದರು. ಅಲ್ಲದೇ ಇವರ ಟಾರ್ಗೆಟ್ ಕೇವಲ ಗುಟ್ಕಾ ಕಳ್ಳತನ ಮಾಡುವುದೇ ಆಗಿತ್ತು. ಈ ರೀತಿ ಕಳ್ಳತನ ಮಾಡಿದ ಗುಟ್ಕಾಗಳನ್ನು ತಮಿಳುನಾಡು ಸೇರಿದಂತೆ ಆಂಧ್ರಪ್ರದೇಶದಲ್ಲಿ ಮಾರಾಟ ಮಾಡುತ್ತಿದ್ದರು. ಆರೋಪಿಗಳಿಂದ ಸುಮಾರು 1 ಕೋಟಿ ರೂ. ಮೌಲ್ಯದ ವಿವಿಧ ವಸ್ತುಗಳು, ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. 60 ಲಕ್ಷ ರೂ. ಮೌಲ್ಯದ ಗುಟ್ಕಾ, 15 ಲಕ್ಷ ರೂ. ಮೌಲ್ಯದ ಲಾರಿ, 11 ಲಕ್ಷ ರೂ. ಮೌಲ್ಯದ ಮಿನಿ ಗೂಡ್ಸ್ ವಾಹನ ಮತ್ತು 14 ಲಕ್ಷ ರೂ. ಮೌಲ್ಯದ ಕಾರ್ ಸೇರಿದಂತೆ ವಿವಿಧ ವಸ್ತುಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸ್​ ವರಿಷ್ಠಾಧಿಕಾರಿ ಶಿವಕುಮಾರ್​ ಗುಣಾರೆ ವಿವರಿಸಿದ್ದಾರೆ.

ಪ್ರಕರಣ ನಡೆಯುತ್ತಿದ್ದಂತೆ ಹಾವೇರಿ ಎಸ್ಪಿ ಶಿವಕುಮಾರ್ ಗುಣಾರೆ, ರಾಣೆಬೆನ್ನೂರು ಡಿವೈಎಸ್ಪಿ, ಸಿಪಿಐ ಸೇರಿದಂತೆ ವಿವಿಧ ಸಿಬ್ಬಂದಿಯ ವಿಶೇಷ ತಂಡ ರಚಿಸಿದ್ದರು. ತೀವ್ರ ಸವಾಲಾಗಿದ್ದ ಪ್ರಕರಣವನ್ನು ಪೊಲೀಸರು ಕೊನೆಗೂ ಪತ್ತೆ ಹಚ್ಚಿದ್ದಾರೆ. ವಿಶೇಷ ತಂಡಕ್ಕೆ ಅಭಿನಂದನೆ ಸಲ್ಲಿಸಿದ ಎಸ್ಪಿ ಅವರು, ನಗದು ಬಹುಮಾನ ಘೋಷಣೆ ಮಾಡಿದ್ದಾರೆ.

ಇದನ್ನೂ ಓದಿ: Bengaluru crime: ನೈಟ್ ಸೆಕ್ಯುರಿಟಿ ಗಾರ್ಡ್ ಮೇಲೆ ಮಾರಣಾಂತಿಕ ಹಲ್ಲೆ.. ಮಾಜಿ ಸಿಎಂ ನಿವಾಸದ ಕೂಗಳತೆ ದೂರದಲ್ಲೇ ಪುಡಿರೌಡಿಯ ಹಾವಳಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.