ಹಾವೇರಿ: ಕೊರೊನಾ ಲಸಿಕೆ ಬರುತ್ತಿದ್ದಂತೆ ಮೊದಲು ಕೊರೊನಾ ವಾರಿಯರ್ಸ್ಗೆ ಲಸಿಕೆ ನೀಡಲಾಗುವುದು. ನಂತರ ವಯೋಮಾನದ ಅನುಸಾರ ಲಸಿಕೆ ನೀಡಲಾಗುವುದು ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.
ಜಿಲ್ಲೆಯ ರಟ್ಟಿಹಳ್ಳಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕೊರೊನಾ ಲಸಿಕೆ ನೀಡಲು ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ರಾಜ್ಯದಲ್ಲಿ ಫೆಬ್ರವರಿ ತಿಂಗಳ ಆರಂಭದ ವೇಳೆಗೆ ಕೊರೊನಾ ಲಸಿಕೆ ನೀಡುವುದು ಬಹುತೇಕ ಖಚಿತ. ಲಸಿಕೆ ನೀಡುವ ಜೊತೆ ಜೊತೆಗೆ ಅದರ ಪರಿಣಾಮಗಳ ಬಗ್ಗೆ ಸಹ ಗಮನ ನೀಡಲಾಗುವುದು ಎಂದು ಸಚಿವರು ತಿಳಿಸಿದರು.
ರೈತರ ಪರವಾಗಿ ಹೋರಾಟಕ್ಕೆ ಕುಳಿತಿರುವ ಬಿ.ಡಿ.ಹಿರೇಮಠ ಜೊತೆ ಮಾತುಕತೆ ನಡೆಸಿ ಮಾತನಾಡಿದ ಅವರು, ಹಿರೇಮಠ ತಮ್ಮ ಕೋರಿಕೆಗೆ ಸ್ಪಂದಿಸಿದ್ದಾರೆ. ಅವರ ಮೊದಲ ಹಂತದ ಬೇಡಿಕೆಯನ್ನು ಈಡೇರಿಸಿದ್ದೇವೆ. ಅವರ ಎರಡನೇ ಬೇಡಿಕೆ ಕುರಿತಂತೆ ಸಿಎಂ ಯಡಿಯೂರಪ್ಪ ಜೊತೆ ಮಾತನಾಡಿ ಅಂತಿಮ ತಿರ್ಮಾನ ಕೈಗೊಳ್ಳುವುದಾಗಿ ತಿಳಿಸಿದರು. ಬಿ.ಡಿ. ಹಿರೇಮಠ ತಮ್ಮ ಹೋರಾಟದಿಂದ ಹಿಂದೆ ಸರಿಯುವ ವಿಶ್ವಾಸವಿದೆ ಎಂದು ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದರು.
ಇದನ್ನೂ ಓದಿ: ಕೋವಿಡ್ ಸೋಂಕಿತ ಎರಡು ವರ್ಷದ ಬಾಲಕ ಆಸ್ಪತ್ರೆಯಲ್ಲೇ ಭಾಂಗ್ರಾ ಡ್ಯಾನ್ಸ್..