ETV Bharat / state

ಹಾವೇರಿಗೂ ವಕ್ಕರಿಸಿದ ಸೋಂಕು: 32 ವರ್ಷದ ವ್ಯಕ್ತಿಯ ವರದಿ ಪಾಸಿಟಿವ್ - corona positivie case in haveri

ಇಲ್ಲಿವರೆಗೆ ಯಾವುದೇ ಭಯವಿಲ್ಲದೆ ಹಸಿರು ವಲಯದಲ್ಲಿದ್ದ​ ಹಾವೇರಿ ಜಿಲ್ಲೆಯಲ್ಲಿ ಇಂದು ಮೊದಲ ಕೊರೊನಾ ಪಾಸಿಟಿವ್​ ಪ್ರಕರಣ ಪತ್ತೆಯಾಗಿದೆ.

corona positivie case in haveri
ಹಾವೇರಿ ಜಿಲ್ಲೆಯಲ್ಲಿ ಕೊರೊನಾ ಪತ್ತೆ
author img

By

Published : May 4, 2020, 12:42 PM IST

ಹಾವೇರಿ: ಸವಣೂರು ಮೂಲದ ವ್ಯಕ್ತಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಹಾವೇರಿ ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ತಿಳಿಸಿದ್ದಾರೆ.

ಹಾವೇರಿ ಜಿಲ್ಲೆಯಲ್ಲಿ ಕೊರೊನಾ ಪತ್ತೆಯಾಗಿರುವ ಬಗ್ಗೆ ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

ಏಪ್ರಿಲ್​ 28 ರಂದು ಮುಂಬೈನಿಂದ ಲಾರಿಯಲ್ಲಿ ಸವಣೂರಿಗೆ ಆಗಮಿಸಿದ್ದ ವ್ಯಕ್ತಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಮುಂಬೈನಿಂದ ಬಂದಾತ ಮನೆಯಲ್ಲಿಯೇ ಹೋಂ​ ಕ್ವಾರಂಟೈನ್​ನಲ್ಲಿದ್ದ. ಏಪ್ರಿಲ್ 29 ರಂದು ಆರೋಗ್ಯ ಇಲಾಖೆ ಈತನ ಗಂಟಲ ದ್ರವ ಸ್ಯಾಂಪಲ್ಸ್ ಲ್ಯಾಬ್‌ಗೆ ಕಳುಹಿಸಿತ್ತು. ಈತನೊಂದಿಗೆ ಬಂದಿದ್ದ ಇನ್ನೂ ಇಬ್ಬರ ಥ್ರೋಟ್ ಸ್ವ್ಯಾಬ್ ಸ್ಯಾಂಪಲ್ಸ್​ ಕೂಡ ಲ್ಯಾಬ್ ಟೆಸ್ಟ್​​ಗೆ ಕಳುಹಿ ಸಲಾಗಿತ್ತು.

ಇದೀಗ ಒಬ್ಬನಲ್ಲಿ ಸೋಂಕು ದೃಢಪಟ್ಟಿದ್ದು, ಇನ್ನಿಬ್ಬರ ದ್ವಿತೀಯ ವರದಿಗಾಗಿ ಜಿಲ್ಲಾಡಳಿತ ಕಾಯುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.