ಹಾವೇರಿ: ಜಿಲ್ಲೆಯಲ್ಲಿಂದು ಸ್ಟಾಪ್ ನರ್ಸ್ ಸೇರಿದಂತೆ 10 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 54ಕ್ಕೆ ಏರಿಕೆಯಾಗಿದೆ.
ಜಿಲ್ಲೆಯ ಸವಣೂರು ಪಟ್ಟಣದ 23 ವರ್ಷದ ಗರ್ಭಿಣಿ ಮಹಿಳೆಯ (P-8699) ಪ್ರಾಥಮಿಕ ಸಂಪರ್ಕದಿಂದ ಏಳು ಜನರಿಗೆ ಸೋಂಕು ತಗುಲಿದೆ. ಹಾನಗಲ್ ತಾಲೂಕಿನ ಶಿವಪುರ, ಕುಂಟನಹೊಸಳ್ಳಿ ಹಾಗೂ ಚಿಕ್ಕೇರಿಹೊಸಳ್ಳಿ ಗ್ರಾಮಗಳ ತಲಾ ಒಬ್ಬರಲ್ಲಿ ಸೋಂಕು ದೃಢಪಟ್ಟಿದೆ.
ಸವಣೂರು ಪಟ್ಟಣದ ಗರ್ಭಿಣಿ ಮಹಿಳೆಗೆ ಜೂನ್ 21ರಂದು ಕೊರೊನಾ ಸೋಂಕು ದೃಢಪಟ್ಟಿತ್ತು.