ETV Bharat / state

ಕೊರೊನಾ ಭೀತಿ: ಶಾಬ್​​​- ಎ- ಬರಾತ್​​ ಆಚರಣೆ ಮಾಡದಂತೆ ಪೊಲೀಸರ ಮನವಿ - Corona panic

ನಗರದ ಶಹರ ಠಾಣೆಯಲ್ಲಿ ನಗರಸಭಾ ಸದಸ್ಯರು ಹಾಗೂ ಮುಸ್ಲಿಂ ಮುಖಂಡರ ನೇತೃತ್ವದಲ್ಲಿ ಏರ್ಪಡಿಸಿದ್ದ ಕೊರೊನಾ ವೈರಸ್ ಮುಂಜಾಗೃತ ಸಭೆಯಲ್ಲಿ ಮಾತನಾಡಿ ಸುರೇಶ್​, ದೇಶದಾದ್ಯಂತ ಲಾಕ್​​ಡೌನ್​ ಜಾರಿಯಾಗಿದ್ದು, ಎಲ್ಲಾ ಕಡೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಆದ್ದರಿಂದ ದಯಮಾಡಿ ರಾಣೆಬೆನ್ನೂರು ಮುಸ್ಲಿಂ ಬಾಂಧವರು ಶಾಬ್​-ಎ-ಬರಾತ್​​ ಜಾಗರಣೆ ಕಾರ್ಯಕ್ರಮವನ್ನು ಕೈ ಬೀಡಬೇಕು ಎಂದು ಮನವಿ ಮಾಡಿದರು.

Corona panic: police request not to perform Shab-a-barat
ಕೊರೊನಾ ಭೀತಿ: ಶಾಬ್​​​-ಎ-ಬರಾತ್​​ ಆಚರಣೆ ಮಾಡದಂತೆ ಪೊಲೀಸರ ಮನವಿ
author img

By

Published : Apr 7, 2020, 7:48 PM IST

ರಾಣೆಬೆನ್ನೂರು (ಹಾವೇರಿ): ಏ.09 ರಂದು ಮುಸ್ಲಿಂ ಸಮುದಾಯದ ಶಾಬ್​​​-ಎ-ಬರಾತ್​​ ಹಬ್ಬದ ಸಮಯದಲ್ಲಿ ಮಸೀದಿಯಲ್ಲಿ ಆಚರಣೆ ಮಾಡುವ ಜಾಗರಣೆ ಕಾರ್ಯಕ್ರಮ ಕೈಬಿಡುವಂತೆ ಡಿವೈಎಸ್​ಪಿ ಟಿ.ವಿ.ಸುರೇಶ ಮುಸ್ಲಿಂ ಮುಖಂಡರಿಗೆ ಮನವಿ ಮಾಡಿದರು.

ನಗರದ ಶಹರ ಠಾಣೆಯಲ್ಲಿ ನಗರಸಭಾ ಸದಸ್ಯರು ಹಾಗೂ ಮುಸ್ಲಿಂ ಮುಖಂಡರ ನೇತೃತ್ವದಲ್ಲಿ ಏರ್ಪಡಿಸಿದ್ದ ಕೊರೊನಾ ವೈರಸ್ ಮುಂಜಾಗೃತ ಸಭೆಯಲ್ಲಿ ಮಾತನಾಡಿ ಸುರೇಶ್​, ದೇಶಾದ್ಯಂತ ಲಾಕ್​​ಡೌನ್​ ಜಾರಿಯಾಗಿದ್ದು, ಎಲ್ಲ ಕಡೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಆದ್ದರಿಂದ ದಯಮಾಡಿ ರಾಣೆಬೆನ್ನೂರು ಮುಸ್ಲಿಂ ಬಾಂಧವರು ಜಾಗರಣೆ ಕಾರ್ಯಕ್ರಮವನ್ನು ಕೈ ಬೀಡಬೇಕು ಎಂದು ಮನವಿ ಮಾಡಿದರು

ಇನ್ನೂ ನಗರಸಭಾ ಸದಸ್ಯ ಮಲ್ಲಿಕಾರ್ಜುನ ಅಂಗಡಿ ಮಾತನಾಡಿ, ಧರ್ಮ ದೊಡ್ಡದಲ್ಲ ನಮಗೆಲ್ಲಾ ಮನುಷ್ಯ ಜೀವನ ದೊಡ್ಡದಾಗಿದೆ. ರಾಣೆಬೆನ್ನೂರು ನಗರದಲ್ಲಿ ಈವರೆಗೂ ಕೂಡ ಒಂದು ಕೊರೊನಾ ವೈರಸ್ ಪತ್ತೆಯಾಗಿಲ್ಲ. ತಾವುಗಳು ಈ ವೈರಸ್ ಮಟ್ಟಹಾಕಲು ಸಹಕಾರ ನೀಡಬೇಕು ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.