ಹಾವೇರಿ: ಕೊರೊನಾ ಸೋಂಕು ದೃಢಪಟ್ಟಿದ್ದ ನಾಲ್ವತ್ತು ವರ್ಷದ ವ್ಯಕ್ತಿ ಗುಣಮುಖವಾದ ಹಿನ್ನೆಲೆಯಲ್ಲಿ ಇಂದು ಜಿಲ್ಲೆಯ ಕೋವಿಡ್-19 ಆಸ್ಪತ್ರೆಯಿಂದ ಆ ವ್ಯಕ್ತಿಯನ್ನು ಬಿಡುಗಡೆ ಮಾಡಲಾಯಿತು.
ಮೇ 5ರಂದು ಕೊರೊನಾ ಸೋಂಕು ದೃಢಪಟ್ಟಿದ್ದರಿಂದ ಕೋವಿಡ್-19 ಆಸ್ಪತ್ರೆಗೆ ದಾಖಲಾಗಿದ್ದು, ರೋಗಿ ಸಂಖ್ಯೆ P-672 ನೀಡಲಾಗಿತ್ತು. ಇದೀಗ ಗುಣಮುಖ ಆಗಿ ವರದಿ ನೆಗೆಟಿವ್ ಬಂದಿದ್ದರಿಂದ ಇಂದು ಜಿಲ್ಲಾಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು. ಆಸ್ಪತ್ರೆ ಸಿಬ್ಬಂದಿ ಹೂ ಕೊಟ್ಟು, ಚಪ್ಪಾಳೆ ತಟ್ಟಿ ವ್ಯಕ್ತಿಗೆ ಹಾರೈಸಿದರು.
ಅಂಬ್ಯುಲೆನ್ಸ್ ಮೂಲಕ ಮನೆಗೆ ಕಳಿಸಿದ ಆರೋಗ್ಯ ಇಲಾಖೆ ಸಿಬ್ಬಂದಿ, ವ್ಯಕ್ತಿಗೆ ಹೋಂ ಕ್ವಾರಂಟೈನ್ನಲ್ಲಿ ಇರುವಂತೆ ತಿಳಿಸಿದರು. ವ್ಯಕ್ತಿ ಬಿಡುಗಡೆಯಿಂದಾಗಿ ಜಿಲ್ಲೆಯಲ್ಲಿನ ಕೊರೊನಾ ಪೀಡಿತರ ಸಂಖ್ಯೆ ಆರರಿಂದ ಐದಕ್ಕೆ ಇಳಿದಂತಾಗಿದೆ.