ETV Bharat / state

ಹಾವೇರಿ: ನಿರ್ಮಾಣವಾಗಿ 2 ವರ್ಷ ಕಳೆದರೂ ರೈತರಿಗೆ ಉಪಯೋಗವಾಗದ ಸೈಲೋ ಘಟಕ - ​ ETV Bharat Karnataka

ರೈತರು ಬೆಳೆದ ದವಸ-ಧಾನ್ಯಗಳನ್ನು ಸಂಗ್ರಹಿಸಿಡಲು ಸೈಲೋ ಘಟಕಗಳನ್ನು ನಿರ್ಮಾಣ ಮಾಡಲಾಗಿದೆ.

ಸೈಲೋ ಘಟಕ
ಸೈಲೋ ಘಟಕ
author img

By ETV Bharat Karnataka Team

Published : Oct 27, 2023, 8:33 PM IST

ರೈತರಿಂದ ದೂರ ಉಳಿದ ಸೈಲೋ ಘಟಕ

ಹಾವೇರಿ: ರೈತರು ತಲೆತಲಾಂತರಗಳಿಂದ ತಾವು ಬೆಳೆದ ಧಾನ್ಯಗಳ ಸಂಗ್ರಹಕ್ಕಾಗಿ ಬಳಕೆ ಮಾಡುತ್ತಿದ್ದ ಹಗೆವುಗಳ ರೀತಿ ಕಾರ್ಯ ನಿರ್ವಹಿಸಲು ಹಾವೇರಿ ಎಪಿಎಂಸಿಯ ಜಾನುವಾರು ಮಾರುಕಟ್ಟೆಯಲ್ಲಿ ಸರ್ಕಾರ ಸೈಲೋ ಘಟಕ ನಿರ್ಮಾಣ ಮಾಡಿದೆ. ಆದರೆ ಕೃಷಿ ಮಾರಾಟ ಇಲಾಖೆಯ ನಿರ್ಲಕ್ಷ್ಯದಿಂದ ಈ ಘಟಕಗಳು ಉಪಯೋಗವಾಗುತ್ತಿಲ್ಲ ಎಂದು ರೈತರು ಆರೋಪಿಸಿದ್ದಾರೆ.

ಘಟಕ ಆರಂಭವಾಗಿರುವ ಕುರಿತಂತೆ ಘಟಕದ ಬಗ್ಗೆ ಅಧಿಕಾರಿಗಳು ಯಾವುದೇ ಮಾಹಿತಿ ನೀಡಿಲ್ಲ. ಈ ಘಟಕ ಇಲ್ಲಿದೆ ಎಂದೂ ಎಷ್ಟೋ ರೈತರಿಗೆ ಗೊತ್ತೇ ಇಲ್ಲ. ಒಬ್ಬ ರೈತ ಬಹಳ ಅಂದರೆ ನೂರು ಕ್ವಿಂಟಲ್ ಮೆಕ್ಕೆಜೋಳ ಬೆಳೆಯಬಹುದು. 200 ಮೆಟ್ರೆಕ್ ಟನ್ ಮೆಕ್ಕೆಜೋಳ ಬೆಳೆಯುವ ರೈತರು ಹಾವೇರಿ ಜಿಲ್ಲೆಯಲ್ಲಿಲ್ಲ. ಹಲವು ರೈತರು ಸೇರಿ 200 ಮೆಟ್ರೆಕ್ ಟನ್ ಮೆಕ್ಕೆಜೋಳವನ್ನು ಸೈಲೋದಲ್ಲಿ ಸಂರಕ್ಷಿಸಿಡಲು ಸಾಧ್ಯವಿಲ್ಲ.

ಈ ಕುರಿತಂತೆ ಅಧಿಕಾರಿಗಳನ್ನು ಕೇಳಿದರೆ, ರೈತರಿಗೆ ಪತ್ರಿಕೆಗಳಲ್ಲಿ ಮಾಹಿತಿಯ ಪ್ರಚಾರ ನೀಡಲಾಗಿದೆ. ಆದರೆ ರೈತರು ಇಲ್ಲಿ ದವಸ- ಧಾನ್ಯ ಇಡಲು ಉತ್ಸಾಹ ತೋರಿಸುತ್ತಿಲ್ಲ ಎಂದರು.

ಇದರ ನಿರ್ವಹಣೆ ವೆಚ್ಚವನ್ನು ಅಧಿಕಾರಿಗಳು ತೆಗೆದುಕೊಳ್ಳುತ್ತಿದ್ದಾರೆ ಎಂದು ರೈತ ಸುರೇಶ ಛಲವಾದಿ ಎಂಬವರು ದೂರಿದರು. ಸೈಲೋ ಘಟಕ ಸಂಪೂರ್ಣವಾಗಿ ನಿರುಪಯುಕ್ತವಾಗಿದೆ. ಇದರಿಂದ ರೈತರಿಗೆ ಎಳ್ಳಷ್ಟೂ ಲಾಭವಿಲ್ಲ. ಸರ್ಕಾರ ಇದರ ಬದಲು ಯಾವುದಾದರೂ ಕೆರೆಕಟ್ಟೆಗಳಲ್ಲಿ ನೀರು ತುಂಬಿಸಿದ್ದರೆ ಬರಗಾಲದ ಈ ದಿನಗಳಲ್ಲಿ ರೈತರಿಗೆ ಉಪಯೋಗವಾಗುತ್ತಿತ್ತು. ಅದನ್ನು ಬಿಟ್ಟು ಈ ರೀತಿ ಸೈಲೋ ಘಟಕ ನಿರ್ಮಿಸಿದ್ದು, ಹಣ ವ್ಯಯವಾಗುತ್ತಿದೆ. ಸರ್ಕಾರ ಆದಷ್ಟು ಬೇಗ ಇದನ್ನು ರೈತರಿಗೆ ಅನುಕೂಲವಾಗುವಂತೆ ಆರಂಭಿಸಬೇಕು. ಇಲ್ಲದಿದ್ದರೆ ಇದನ್ನು ತೆಗೆದುಕೊಂಡು ಬೇರೆ ಎಲ್ಲಿಯಾದರೂ ಸ್ಥಾಪನೆ ಮಾಡಬೇಕು ಎಂದು ರೈತ ಶಿವಯೋಗಿ ಹೊಸಗೌಡ್ರ ಆಗ್ರಹಿಸಿದರು.

2016-17ನೇ ಸಾಲಿನ ಅಯವ್ಯಯದ ಮೂಲಕ 185 ಲಕ್ಷ ರೂಪಾಯಿ ಅಂದಾಜು ವೆಚ್ಚದಲ್ಲಿ ಸೈಲೋ ಘಟಕ ನಿರ್ಮಿಸಲು ಯೋಜನೆ ರೂಪಿಸಿತ್ತು. ಅದರಂತೆ ಬೆಂಗಳೂರಿನ ಶ್ರೀ ಬೆಲ್ಟೆಕ್ ಇಂಜಿನಿಯರಿಂಗ್ ಸಲ್ಯೂಶನ್ಸ್ ಗುತ್ತಿಗೆ ಪಡೆದು ಈ ಘಟಕವನ್ನು ಸುಮಾರು 211 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲು ಮುಂದಾಯಿತು. 15-12-2021 ರಲ್ಲಿ ಸೈಲೂ ಘಟಕ ನಿರ್ಮಿಸಿ ಕೃಷಿ ಮಾರಾಟ ಇಲಾಖೆಗೆ ಹಸ್ತಾಂತರಿಸಿತು. ಸುಮಾರು 200 ಮೆಟ್ರಿಕ್ ಸಾಮರ್ಥ್ಯದ 5 ಘಟಕಗಳನ್ನು ನಿರ್ಮಿಸಲಾಗಿದ್ದು, ರೈತರು ಇಲ್ಲಿ 1 ಸಾವಿರ ಮೆಟ್ರಿಕ್ ಟನ್ ಧಾನ್ಯಗಳನ್ನು ಸಂರಕ್ಷಿಸಿಡಬಹುದು. ಆದರೆ ಘಟಕ ನಿರ್ಮಿಸಿ ಎರಡು ವರ್ಷವಾದರೂ ಸಹ ಇಲ್ಲಿ ರೈತರು ತಮ್ಮ ದವಸ-ಧಾನ್ಯಗಳನ್ನು ಸಂರಕ್ಷಿಸಿಟ್ಟಿಲ್ಲ.

ಹಗೆವು ಎಂದರೇನು?: ಈ ಹಿಂದೆ ರೈತರು ತಾವು ಬೆಳೆದ ಧಾನ್ಯಗಳ ಸಂಗ್ರಹಕ್ಕಾಗಿ ಮನೆಯ ಮುಂದೆ ಅಥವಾ ಹಿತ್ತಲುಗಳಲ್ಲಿ ಹಗೆವು ಎಂಬುದನ್ನು ಮಾಡಿಕೊಳ್ಳುತ್ತಿದ್ದರು. ಹಗೆವುಗಳಲ್ಲಿ ವರ್ಷಪೂರ್ತಿ ತಾವು ಬೆಳೆದ ಧಾನ್ಯಗಳನ್ನು ಸಂಗ್ರಹಿಸಿಡುತ್ತಿದ್ದರು. ತಮಗೆ ಅವಶ್ಯವಿದ್ದಾಗ ಹಗೆವುಗಳಿಂದ ಧಾನ್ಯಗಳನ್ನು ಹೊರತೆಗೆದು ಮಾರಾಟ ಮಾಡುತ್ತಿದ್ದರು.

ಇದನ್ನೂ ಓದಿ: ನಮ್ಮ ಮೆಟ್ರೋ ಎರಡನೇ ಹಂತದ ಕಾಮಗಾರಿ: ನೂರು ದಿನಗಳಲ್ಲಿ 718 ಮೀಟರ್ ಸುರಂಗ ಕೊರೆದು ಹೊರಬಂದ "ಟಿಬಿಎಂ ರುದ್ರ"....

ETV Bharat Logo

Copyright © 2025 Ushodaya Enterprises Pvt. Ltd., All Rights Reserved.