ETV Bharat / state

ಮೀಸಲಾತಿ ವಿಚಾರದಲ್ಲಿ ಸಿಎಂ ಬೊಮ್ಮಾಯಿ ಮೂರು ಬಾರಿ ಮಾತು ಕೊಟ್ಟು, ತಪ್ಪಿದ್ದಾರೆ: ಜಯಮೃತ್ಯುಂಜಯಶ್ರೀ - ಸಿಎಂ ಬಸವರಾಜ್ ಬೊಮ್ಮಾಯಿ ಶಿಗ್ಗಾವಿ ನಿವಾಸದ ಮುಂದೆ ಒಂದು ದಿನದ ಪ್ರತಿಭಟನೆ

ಸಿಎಂ ಬಸವರಾಜ ಬೊಮ್ಮಯಿ ಮೂರು ಬಾರಿ ಸಹ ಅವರು ಮಾತು ತಪ್ಪಿದ್ದಾರೆ. ಹೀಗಾಗಿ ಮೀಸಲಾತಿ ಹೋರಾಟ ಮತ್ತೆ ಪ್ರಾರಂಭ ಮಾಡಲಾಗುತ್ತದೆ. ಹೋರಾಟದ ಭಾಗವಾಗಿ ಜೂನ್ 27 ರಂದು ಸಿಎಂ ಬಸವರಾಜ್ ಬೊಮ್ಮಾಯಿ ಶಿಗ್ಗಾವಿ ನಿವಾಸದ ಮುಂದೆ ಒಂದು ದಿನದ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ. ಎಂದು ಬಸವ ಜಯಮೃತ್ಯುಂಜಯ ಶ್ರೀ ತಿಳಿಸಿದ್ದಾರೆ.

Basava Jayamritunjayasree, speaking in Haveri
ಹಾವೇರಿಯಲ್ಲಿ ಮಾತನಾಡಿದ ಬಸವ ಜಯಮೃತ್ಯುಂಜಯಶ್ರೀ
author img

By

Published : May 29, 2022, 10:15 PM IST

ಹಾವೇರಿ: ಸಿಎಂ ಬಸವರಾಜ ಬೊಮ್ಮಾಯಿ ಪಂಚಮಸಾಲಿ ಸಮುದಾಯಕ್ಕೆ 2 ಎ ಮೀಸಲಾತಿ ನೀಡುವ ಕುರಿತಂತೆ ಮೂರು ಬಾರಿ ಮಾತು ಕೊಟ್ಟಿದ್ದರು. ಆದರೆ ಮೂರು ಬಾರಿಯೂ ಸಹ ಅವರು ಮಾತು ತಪ್ಪಿದ್ದಾರೆ. ಹೀಗಾಗಿ ಮೀಸಲಾತಿ ಹೋರಾಟ ಮತ್ತೆ ಪ್ರಾರಂಭ ಮಾಡಲಾಗಿದೆ ಎಂದು ಕೂಡಲಸಂಗಮದ ಪಂಚಮಸಾಲಿಪೀಠದ ಬಸವ ಜಯಮೃತ್ಯುಂಜಯ ಶ್ರೀಗಳು ತಿಳಿಸಿದ್ದಾರೆ.

ಹಾವೇರಿಯಲ್ಲಿ ಮಾತನಾಡಿದ ಅವರು, ಈ ಕುರಿತಂತೆ ತಮ್ಮ ಸಮಾಜಕ್ಕೆ ನಾವು ಮಾತು ಕೊಟ್ಟಿದ್ದೆವು. ಅದರಂತೆ ಮತ್ತೆ ಹೋರಾಟ ಆರಂಭಿಸಿದ್ದೇವೆ. ಹೋರಾಟದ ಭಾಗವಾಗಿ ಜೂನ್ 27 ರಂದು ಸಿಎಂ ಬಸವರಾಜ ಬೊಮ್ಮಾಯಿ ಶಿಗ್ಗಾವಿ ನಿವಾಸದ ಮುಂದೆ ಒಂದು ದಿನದ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ. ಅಂದು ಮುಂಜಾನೆ 9 ರಿಂದ ಸಂಜೆ ನಾಲ್ಕು ಗಂಟೆಯವರೆಗೆ ಧರಣಿ ಸತ್ಯಾಗ್ರಹ ನಡೆಸಲಾಗುತ್ತದೆ. ಮುಂಜಾನೆ 9 ಗಂಟೆಗೆ ಶಿಗ್ಗಾವಿಯ ಚೆನ್ನಮ್ಮ ವೃತ್ತದಿಂದ ಬೊಮ್ಮಾಯಿ ಮನೆ ಅವರಿಗೆ ಬೃಹತ್ ಮೆರವಣಿಗೆ ನಡೆಸುವುದಾಗಿ ಶ್ರೀಗಳು ತಿಳಿಸಿದರು.

ಕೂಡಲಸಂಗಮದ ಪಂಚಮಸಾಲಿಪೀಠದ ಬಸವ ಜಯಮೃತ್ಯುಂಜಯಶ್ರೀ

ಈಗಾಗಲೇ ಪಂಚಮಸಾಲಿ ಸಮುದಾಯದ ಹಲವು ಹೋರಾಟಗಳಿಗೆ ಚಾಲನೆ ನೀಡಿರುವ ಸಮುದಾಯದ ಹೋರಾಟಕ್ಕಾಗಿ ಮಂತ್ರಿ ಸ್ಥಾನ ಕಳೆದುಕೊಂಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಸಿಎಂ ನಿವಾಸದ ಮುಂದಿನ ಧರಣಿ ಸತ್ಯಾಗ್ರಹಕ್ಕೆ ಚಾಲನೆ ನೀಡಲಿದ್ದಾರೆ ಎಂದು ಕೂಡಲಶ್ರೀಗಳು ತಿಳಿಸಿದರು. ಅಂದಿನ ಕಾರ್ಯಕ್ರಮಕ್ಕೆ ಮಾಜಿ ಶಾಸಕರಾದ ವಿನಯ್​ ಕುಲಕರ್ಣಿ, ವಿಜಿಯಾನಂದ ಕಾಶಪ್ಪನವರ್, ಮತ್ತು ಹೆಚ್.ಎಸ್.ಶಿವಶಂಕರ್ ಸಹ ಪಾಲ್ಗೊಳ್ಳಲಿದ್ದಾರೆ.

ಪ್ರತಿ ಬಾರಿ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಶಥ 50 ರ ಮೇಲೆ ಮೀಸಲಾತಿ ಕೊಡಲು ಬರುವುದಿಲ್ಲ ಎಂದು ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ನಾವು ಈಗಾಗಲೇ ಇರುವ ಮೀಸಲಾತಿಯಲ್ಲಿಯೇ ಸೇರಿಸುವಂತೆ ಕೇಳುತ್ತಿದ್ದೇವೆಯೇ ಹೊರತು ಪ್ರತ್ಯೇಕ ಮೀಸಲಾತಿಯಲ್ಲ. ನಾವು ಸಿಎಂ ಬೊಮ್ಮಾಯಿಯವರನ್ನ ಪಟೇಲರಿಗಿಂತ ಹೆಚ್ಚು ನಂಬಿದ್ದೆವು. ಆದರೆ ಅವರು ಇತ್ತೀಚೆಗೆ ಮೀಸಲಾತಿ ಬಗ್ಗೆ ಮೌನ ವಹಿಸಿದ್ದರಿಂದ ಮತ್ತೆ ಹೋರಾಟ ಆರಂಭಿಸಿದಾಗಿ ತಿಳಿಸಿದರು.

ಇದನ್ನೂ ಓದಿ: ಮಳಲಿ ವಿವಾದ: ಮಸೀದಿ ಆಡಳಿತ ಸಮಿತಿಯೊಂದಿಗೆ ವಿಶ್ವ ಹಿಂದೂ ಪರಿಷತ್, ಶಾಸಕರ ಸಭೆ

ಸಿಎಂ ನಿವಾಸ ಮುಂದೆ ಪ್ರತಿಭಟನೆ ಮಾಡಿದ ನಂತರ ಬೆಂಗಳೂರಿನಲ್ಲಿ 25 ಲಕ್ಷ ಜನರನ್ನ ಸೇರಿಸಿ ಬೃಹತ್ ಪ್ರತಿಭಟನೆ ನಡೆಸುತ್ತೇವೆ. ಸಿಎಂ ಬಸವರಾಜ್ ಬೊಮ್ಮಾಯಿ ಮೀಸಲಾತಿ ನೀಡಿದರೆ ಅವರಿಗೆ ಕಲ್ಲುಸಕ್ಕರೆ ತುಲಾಭಾರ ಮಾಡುತ್ತೇವೆ. ಇಲ್ಲದಿದ್ದರೇ ಹೋರಾಟ ಮುಂದುವರೆಸುತ್ತೇವೆ ಎಂದು ಶ್ರೀಗಳು ತಿಳಿಸಿದರು. 2022 ರಲ್ಲಿ ಮೀಸಲಾತಿ ಪಡೆದೆ ತೀರುತ್ತೇವೆ ಎಂಬ ಸಂಕಲ್ಪವನ್ನ ಮಾಡಿರುವದಾಗಿ ಶ್ರೀಗಳು ಘೋಷಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.