ETV Bharat / state

ನನ್ನ ಅವಧಿಯಲ್ಲಿ ಎಲ್ಲ ವರ್ಗಗಳ ಅಭಿವೃದ್ಧಿಗೆ ಭದ್ರ ಬುನಾದಿ ಹಾಕುವೆ: ಸಿಎಂ - ಹಾವೇರಿ ವಿಧಾನ ಪರಿಷತ್​ ಚುನಾವಣೆ ಪ್ರಚಾರ

ದೇವರ ಇಚ್ಛೆ ಮತ್ತು ಪಕ್ಷದ ಹಿರಿಯರ ತೀರ್ಮಾನದಿಂದ ನಾನು ಸಿಎಂ ಆದೆ. ನನ್ನ ಅವಧಿಯಲ್ಲಿ ಎಲ್ಲ ವರ್ಗಗಳ ಅಭಿವೃದ್ಧಿಗೆ ಭದ್ರ ಬುನಾದಿ ಹಾಕುತ್ತೇನೆ ಎಂದು ಸಿಎಂ ಭರವಸೆಯ ಮಾತುಗಳನ್ನಾಡಿದರು.

cm-basavaraj-bommai-haveri-council-campaign
ಸಿಎಂ ಬಸವರಾಜ್ ಬೊಮ್ಮಾಯಿ
author img

By

Published : Dec 7, 2021, 7:01 AM IST

ಹಾವೇರಿ: ನಾನು ಮುಖ್ಯಮಂತ್ರಿಯಾಗಬೇಕು ಎಂದು ಬಯಸಿರಲಿಲ್ಲ. ದೈವೇಚ್ಛೆ ಮತ್ತು ಪಕ್ಷದ ಹಿರಿಯರ ತೀರ್ಮಾನದಂತೆ ಮುಖ್ಯಮಂತ್ರಿಯಾದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

ಬ್ಯಾಡಗಿ ತಾಲೂಕಿನ ಕಾಗಿನೆಲೆಯಲ್ಲಿ ನಡೆದ ಸ್ಥಳೀಯ ಸಂಸ್ಥೆಯ ಪ್ರತಿನಿಧಿಗಳ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ನಾನು ಆಕಾಶ ನೋಡಿ ಆಡಳಿತ ನಡೆಸುವುದಿಲ್ಲ. ಬದಲಿಗೆ, ಭೂಮಿ ತಾಯಿ ನೋಡಿ ಆಡಳಿತ ನಡೆಸುತ್ತಿದ್ದೇನೆ ಎಂದರು.

ಪ್ರಸ್ತುತ ತಲಾವಾರು ಆದಾಯದಲ್ಲಿ ನಮ್ಮ ರಾಜ್ಯ 3ನೇ ಸ್ಥಾನದಲ್ಲಿದೆ. ಇದನ್ನು ಮೊದಲಿನ ಸ್ಥಾನಕ್ಕೆ ತರುವ ಗುರಿ ಇಟ್ಟುಕೊಂಡಿದ್ದೇನೆ. ಜನರು ಆರ್ಥಿಕವಾಗಿ ಸಬಲರಾದರೆ ರಾಜ್ಯ ಸಬಲವಾಗುತ್ತೆ. ಆದರೆ ರಾಜ್ಯ ಆರ್ಥಿಕ ಸಬಲರಾದರೆ ಜನರು ಆರ್ಥಿಕವಾಗಿ ಸಬಲಾಗುವುದಿಲ್ಲ. ಇದು ಕಾಂಗ್ರೆಸ್ ಸರ್ಕಾರದ ಆಡಳಿತ ನೋಡಿದರೆ ಗೊತ್ತಾಗುತ್ತೆ ಎಂದು ಹೇಳಿದರು.

ಕಾಂಗ್ರೆಸ್​ ಸರ್ಕಾರ 13 ಲಕ್ಷ ಮನೆ ನಿರ್ಮಿಸುವ ಯೋಜನೆ ರೂಪಿಸಿ ಹೋಯಿತು. ಆದರೆ ಅದಕ್ಕೆ ಹಣ ನೀಡಿದ್ದು ಬಿಜೆಪಿ ಸರ್ಕಾರ. ಅಲ್ಲದೆ ಬರುವ 18 ತಿಂಗಳಲ್ಲಿ ಐದು ಲಕ್ಷ ಮನೆ ನಿರ್ಮಿಸುವ ಭರವಸೆ ನೀಡಿದ ಸಿಎಂ, ಜನರ ಸಮಸ್ಯೆಗಳನ್ನು ಕೇಳಿ ಅಲ್ಲಿಯೇ ಪರಿಹರಿಸುವ ಸರ್ಕಾರ ಬೇಕು, ಅದು ನಿಜವಾದ ಸ್ವರಾಜ್ಯ ಎಂದು ಸಿಎಂ ಅಭಿಪ್ರಾಯಪಟ್ಟರು.

ಮಾಜಿ ಸಿಎಂ ಜಗದೀಶ ಶೆಟ್ಟರ್ ಮಾತನಾಡಿ, ತಮಗೆ ವಿಧಾನಸಭೆಯಲ್ಲಿ ಬಹುಮತವಿದೆ. ಆದರೆ ವಿಧಾನಪರಿಷತ್‌ನಲ್ಲಿ ಇಲ್ಲ. ಇದರಿಂದಾಗಿ ಮಹತ್ತರವಾದ ಮಸೂದೆ​ಗಳನ್ನು ಪಾಸ್ ಮಾಡಲು ಹಿನ್ನೆಡೆಯಾಗುತ್ತಿದೆ. ಅದಕ್ಕಾಗಿ ಬಿಜೆಪಿ ಅಭ್ಯರ್ಥಿಯನ್ನು ಜನಪ್ರತಿನಿಧಿಗಳು ಆರಿಸಿ ಕಳಿಸಿದರೆ ಅನುಕೂಲವಾಗುತ್ತದೆ ಎಂದರು.

ಕೃಷಿ ಸಚಿವ ಬಿ.ಸಿ.ಪಾಟೀಲ್ ಮಾತನಾಡಿ, ಕೋವಿಡ್ ಕಾರಣದಿಂದ ರಾಜ್ಯದಲ್ಲಿ ಹೊಸ ಮನೆ ನೀಡಲು ಆಗಿರಲಿಲ್ಲ. ಆದರೆ ಈಗ ಸರ್ಕಾರ 5 ಲಕ್ಷ ಮನೆ ನಿರ್ಮಾಣಕ್ಕೆ ಆದೇಶ ನೀಡಲಾಗಿದೆ. ಆದಷ್ಟು ಬೇಗ ಮನೆ ನಿರ್ಮಾಣಗೊಳ್ಳುತ್ತವೆ ಎಂದು ಭರವಸೆ ಕೊಟ್ಟರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.