ಹಾವೇರಿ: ಕಳೆದ ವರ್ಷ ದೋಣಿ ದುರಂತದಲ್ಲಿ ಸಾವನ್ನಪ್ಪಿದ ಒಂಬತ್ತು ಜನರ ಕುಟುಂಬಗಳಿಗೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಪರಿಹಾರ ಹಣದ ಚೆಕ್ ವಿತರಿಸಿದರು.
ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೊಮ್ಮಾಯಿ ಒಬ್ಬ ಸದಸ್ಯರಿಗೆ 3 ಲಕ್ಷದಂತೆ 9 ಸದಸ್ಯರ ಕುಟುಂಬಕ್ಕೆ 27 ಲಕ್ಷ ರೂಪಾಯಿ ಪರಿಹಾರ ಹಣದ ಚೆಕ್ ವಿತರಿಸಿದರು. ಈ ಸಂದರ್ಭದಲ್ಲಿ ಹಾವೇರಿ ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ಉಪಸ್ಥಿತರಿದ್ದರು. ಕಳೆದ ಜನವರಿ 21 ರಂದು ಕಾರವಾರದ ಕೂರ್ಮಗಡದಲ್ಲಿ ಸಂಭವಿಸಿದ ದೋಣಿ ದುರಂತದಲ್ಲಿ ಹಾವೇರಿ ಜಿಲ್ಲೆ ಶಿಗ್ಗಾವಿ ತಾಲೂಕಿನ ಹೊಸೂರು ಗ್ರಾಮದ ಒಂದೇ ಕುಟುಂಬದ 9 ಸದಸ್ಯರು ಸಾವನ್ನಪ್ಪಿದ್ದರು.
ಅಂದಿನ ಮೈತ್ರಿ ಸರ್ಕಾರ ಅಂದೇ ಮೃತ ಕುಟುಂಬಕ್ಕೆ ಪರಿಹಾರ ಘೋಷಣೆ ಮಾಡಿತ್ತು. ಮೃತ ಕುಟುಂಬದ ಸದಸ್ಯರ ಸಂಬಂಧಿಗಳಿಗೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಪರಿಹಾರದ ಹಣದ ಚೆಕ್ ವಿತರಿಸಿದರು.