ಹಾವೇರಿ: ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಸ್ಮರಣಾರ್ಥ ಹಾವೇರಿ ತಾಲೂಕಿನ ಕುಳೇನೂರು ಗ್ರಾಮದಲ್ಲಿ ಹೋರಿ ಬೆದರಿಸುವ ಸ್ಪರ್ಧೆ ಆಯೋಜಿಸುವ ಜೊತೆಗೆ ಅಪ್ಪು ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.
ಕುಳೇನೂರು ಗ್ರಾಮದಲ್ಲಿ ಪುನೀತ್ ರಾಜ್ ಕುಮಾರ್ ಅಭಿಮಾನಿಗಳ ದೊಡ್ಡ ಬಳಗವಿದೆ. ಪ್ರತಿ ವರ್ಷದಂತೆ ಈ ವರ್ಷ ಸಹ ನಿನ್ನೆ ಗ್ರಾಮದಲ್ಲಿ ದೀಪಾವಳಿ ಪ್ರಯುಕ್ತ ಹೋರಿ ಬೆದರಿಸುವ ಸ್ಪರ್ಧೆ ಆಯೋಜಿಸಲಾಗಿತ್ತು. ಕಾಕತಾಳೀಯ ಎಂಬಂತೆ ಅಪ್ಪು ಅಭಿನಯದ ಗಂಧದಗುಡಿ ಚಿತ್ರ ಇಂದು ತೆರೆ ಕಾಣಲಿದೆ.
ಈ ಹಿನ್ನೆಲೆಯಲ್ಲಿ ಚಲನಚಿತ್ರ ಯಶಸ್ವಿಯಾಗಲಿ ಎಂದು ದನ ಬೆದರಿಸುವ ಸ್ಪರ್ಧೆಯಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು. ಜೊತೆಗೆ ಸುಮಾರು 10 ನಿಮಿಷಗಳ ಕಾಲ ದನ ಬೆದರಿಸುವ ಸ್ಪರ್ಧೆ ಸಿಲ್ಲಿಸಿ, ಮೌನಾಚರಣೆ ಮಾಡಿ ಶುಭ ಕೋರಲಾಯಿತು.
ಇದನ್ನೂ ಓದಿ: ವಿಷ ಬೆರಿಸಿದ ಅನ್ನ ತಿಂದ ಜಾನುವಾರುಗಳು: 5 ಸಾವು, 7 ಗೋವುಗಳು ಅಸ್ವಸ್ಥ
ಈ ವೇಳೆ ಪುನೀತ್ ರಾಜ್ ಕುಮಾರ್ ದೈಹಿಕವಾಗಿ ಇಲ್ಲದಿರಬಹುದು ಆದರೆ ಅವರು ಮಾಡಿದ ಕಾರ್ಯಗಳು ಅಜರಾಮರ ಎಂದು ಸಾವಿರಾರು ಅಭಿಮಾನಿಗಳು ಅಪ್ಪುಗೆ ಜಯಕಾರ ಕೂಗಿದರು. ಈ ಗ್ರಾಮದ ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ಗ್ರಾಮಕ್ಕೆ ಒಂದು ಸುಸಜ್ಜಿತ ಬಸ್ ನಿಲ್ದಾಣ ನಿರ್ಮಿಸಿದ್ದಾರೆ. ಜೊತೆಗೆ ಕಲಾವಿದರನ್ನ ಕರೆಯಿಸಿ ಪುನೀತ್ ಭಾವಚಿತ್ರ ಬಿಡಿಸುವ ಮೂಲಕ ಅಪ್ಪುನನ್ನು ಸ್ಮರಿಸುತ್ತಲೇ ಇದ್ದಾರೆ.
ಇದನ್ನೂ ಓದಿ: ಅಪ್ಪು ಗಂಧದಗುಡಿ ಪ್ರಿಮಿಯರ್ ಶೋ ನೋಡಿ ಭಾವುಕರಾದ ಅಭಿಮಾನಿಗಳು