ಹಾವೇರಿ: ರಾಜ್ಯದಲ್ಲಿ 224 ಕ್ಷೇತ್ರಗಳಲ್ಲಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಜರುಗಿದ್ದು, ಅದು ಮಾರ್ಚ್ 25 ರಂದು ದಾವಣಗೆರೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಮಹಾ ಸಂಗಮಗೊಳ್ಳಲಿದೆ. ಅಂದು ವಿರೂಟ್ ಸ್ವರೂಪದ ದರ್ಶನ ಸಮಾವೇಶದಲ್ಲಿ ಆಗಲಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಹೇಳಿದರು.
ಹಾವೇರಿ ಜಿಲ್ಲೆ ಶಿಗ್ಗಾಂವಿ ಹಮ್ಮಿಕೊಂಡಿದ್ದ ಬಿಜೆಪಿ ಜನಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಳ್ಳುವ ಮುನ್ನ ಅವರು ಮಾತನಾಡಿದರು.ಮಧ್ಯ ಕರ್ನಾಟಕದಲ್ಲಿ ನಡೆಯಲಿರುವ ಬಿಜೆಪಿ ಮಹಾಸಂಗಮ ಸಮಾವೇಶದಲ್ಲಿ ಲಕ್ಷಾಂತರ ಜನರು ಸೇರಲಿದ್ದಾರೆ. ಜನ ಸಂಕಲ್ಪ ಯಾತ್ರೆಯಲ್ಲಿ ನಮ್ಮ ರೀತಿ, ನೇತೃತ್ವ, ಜನರಿಗೆ ಇರುವ ನಿಯತ್ತು, ಡಬಲ್ ಎಂಜಿನ್ ಸರ್ಕಾರ ದೇಶ ಹಾಗೂ ಕರ್ನಾಟಕಕ್ಕೆ ಜನಪಯೋಗಿ ಕೆಲಸ ಮಾಡಿದೆ ಎನ್ನು ರೀಪೋರ್ಟ್ ಕಾರ್ಡ್ ನೀಡಿದ್ದೇವೆ. ದೇಶ ಮೊದಲು ಎನ್ನುವುದು ಬಿಜೆಪಿ ತತ್ವವಾಗಿದೆ ಎಂದು ತಿಳಿಸಿದರು.
ಮಾಜಿ ಸಿಎಂ ಬಿಎಸ್ ವೈ ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ಅವರ ಆಡಳಿತದಲ್ಲಿ ನಡೆದ ಅಭಿವೃದ್ಧಿ ಸಾಧನೆ ಜನರ ಮುಂದಿಟ್ಟು ವೋಟು ಕೇಳುತ್ತೇವೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದವರದ್ದು ಅಧಿಕಾರ, ಜಾತಿ ಹಾಗೂ ಕುಟುಂಬ ಮೊದಲು ಎನ್ನುವ ನೀತಿ ಎಂದು ಆರೋಪಿಸಿದರು.
ಅರ್ಹರಿಗೆ ಸರ್ಕಾರದ ಯೋಜನೆ ಸಿಗುವಂತೆ ಆಡಳಿತ ನೀಡಿದ್ದೇವೆ. ಹಿಂದೆ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಯೋಜನೆಗಳನ್ನು ಜಾರಿಗೆ ತಂದಿತ್ತೂ,ಆದರೆ ಅವು ಜಾತಿ ಕೇಂದ್ರಿತ ಆಗಿದ್ದವು. ಕಾಂಗ್ರೆಸ್ನವರಿಗೆ ಜಿಲೇಬಿ ಅಲರ್ಜಿ ಇತ್ತು. ಜಿಲೇಬಿ ಎಂದರೆ ಏನೂ ನಿಮಗೆ ಗೊತ್ತಿದೆ ಎಂದ ಅವರು, ಬಿಜೆಪಿ ನೇತೃತ್ವ ಇರುವ ಕೇಂದ್ರದಲ್ಲಿ ಪ್ರಧಾನಿ,ರಾಜ್ಯದಲ್ಲಿ ಬಿಎಸ್ವೈ,ಬಸವರಾಜ ಬೊಮ್ಮಾಯಿ ನೇತಾರರು. ಜನಮನ್ನಣೆ ಪಡೆದಿರುವಂತ ನೇತೃತ್ವ ನಮ್ಮದು ಎಂದು ಹೇಳಿದರು.
ನಮ್ಮದು ಬಡವರಿಗಾಗಿ ನಿಯತ್ತು , ದಲಿತರಿಗಾಗಿ ನಮ್ಮ ನಿಯತ್ತು. ಬಡವರಿಗೆ ಶೌಚಾಲಯ ,ಗ್ಯಾಸ್ ಕನೆಕ್ಸ್ನ್, ದಲಿತರಿಗೆ ಮೀಸಲಾತಿ ಹೆಚ್ಚಳ ಮಾಡಿದ್ದು, ರೈತ ಪರ ನಮ್ಮ ನಿಯತ್ತು, ಕಿಸಾನ್ ಸಮ್ಮಾನ,ಫಸಲು ಭಿಮಾ ಯೋಜನೆ ಜಾರಿಗೆ ತಂದೇವು. ರೈತ ವಿದ್ಯಾನಿಧಿ ಜಾರಿಗೆ ತಂದಿದ್ದೇವೆ ಎಂದು ಸಿ ಟಿ ರವಿ ಅಭಿಪ್ರಾಯ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ವರುಣಾದಿಂದ ಸ್ಪರ್ಧೆ ವಿಚಾರ ಕುರಿತಂತೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಮಾತನಾಡಿದ ಅವರು, ನನಗೆ ಯಾವುದೇ ಮಾಹಿತಿ ಇಲ್ಲ. ಏನಾದ್ರೂ ಹೇಳಿದ್ರೇ ತಪ್ಪು ತಿಳಿದುಕೊಳ್ತಾರೆ. ಒಂದಂತೂ ಸ್ಪಷ್ಟ ಆಯಿತು. ಬಾದಾಮಿ, ಚಾಮುಂಡೇಶ್ವರಿ, ಕೋಲಾರ ಯಾವುದೂ ಸ್ಪಷ್ಟತೆ ಇಲ್ಲ. ಅನ್ನೋದು ಗೊತ್ತಾಯ್ತು ಎಂದು ಸಿ.ಟಿ ರವಿ ಹೇಳಿದರು.
ಚುನಾವಣೆ ಸಂದರ್ಭದಲ್ಲಿ ಮಾತ್ರ ಐಟಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ದಾಳಿ ಮಾಡುತ್ತಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಎಲ್ಲ ಕಾಲದಲ್ಲೂ ಐಟಿ ದಾಳಿ ಮಾಡುತ್ತಿರುತ್ತವೆ. ರಾಜಕೀಯ ನಾಯಕರ ಮನೆ ಮೇಲೆ ದಾಳಿ ನಡೆದಾಗ ಮಾತ್ರ ಸುದ್ದಿಯಾಗುತ್ತವೆ. ಹಿಂದೆಯೂ ಜೆಡಿಎಸ್ ,ಕಾಂಗ್ರೆಸ್ ನಾಯಕರ ಮನೆ ಮೇಲೂ ದಾಳಿ ನಡೆದಿವೆ. ಅದೂ ಸುದ್ದಿ ಆಗಲಿಲ್ಲ ಅಷ್ಟೇ ಎಂದು ಅಭಿಮತ ತಿಳಿಸಿದರು.
ಇದನ್ನೂಓದಿ:ಮೈಸೂರಿನಲ್ಲಿ ಮಾ 26 ರಂದು ಜೆಡಿಎಸ್ ಶಕ್ತಿ ಪ್ರದರ್ಶನ: ನಾಲ್ಕು ಕಿ.ಮೀಗೆ ಸೀಮಿತಗೊಂಡ ರೋಡ್ ಶೋ