ಹಾವೇರಿ: ಜಿಲ್ಲೆಯಾದ್ಯಂತ ಗುರುವಾರ ಸಡಗರ ಸಂಭ್ರಮದಿಂದ ಭಗವಾನ್ ಮಹಾವೀರ ಜಯಂತಿ ಸಡಗರ ಕಂಡುಬಂತು. ಮಹಾವೀರ ತೀರ್ಥಂಕರರ ಪಂಚಲೋಹದ ಮೂರ್ತಿಯ ಮೆರವಣಿಗೆ ಮಾಡಲಾಯಿತು. ನಗರದ ಜೈನ ಬಸದಿಯಿಂದ ಆರಂಭವಾದ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.
ಮೆರವಣಿಗೆಯಲ್ಲಿ ಕುಂಭಹೊತ್ತು ಬಂದ ಮಹಿಳೆಯರು ಮೆರವಣಿಗೆಗೆ ಮೆರುಗು ತಂದರು. ಭಗವಾನ್ ಮಹಾವೀರ ಕುರಿತ ಗೀತೆಗಳಿಗೆ ಹೆಂಗಳೆಯರು ಹೆಜ್ಜೆ ಹಾಕಿ ಸಂಭ್ರಮಿಸಿದರು. ಶ್ವೇತಾಂಬರ ಮತ್ತು ದಿಗಂಬರ ಪಂಥದ ಶ್ರಾವಕ, ಶ್ರಾವಕಿಯರು ಪಾಲ್ಗೊಂಡಿದ್ದರು.
ಮಹಾವೀರ ಮೂರ್ತಿಯ ಮೆರವಣಿಗೆಯ ನಂತರ ಜೈನ ಬಸದಿಯಲ್ಲಿ ಮಹಾವೀರ ಸ್ವಾಮಿಗೆ ಅಭಿಷೇಕ ಮಾಡಲಾಯಿತು. ಜಲ, ಶ್ರೀಗಂಧ, ಹಾಲು, ಸೇರಿದಂತೆ ವಿವಿಧ ದ್ರವ್ಯಗಳಿಂದ ಮೂರ್ತಿಗೆ ಅಭಿಷೇಕ ನಡೆಯಿತು. ಹಾವೇರಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಶ್ರಾವಕ- ಶ್ರಾವಕಿಯರು ಪಾಲ್ಗೊಂಡಿದ್ದರು.
ಇದನ್ನೂ ಓದಿ: ಕೆಲವರು ಅಂಬೇಡ್ಕರ್ ಹೆಸರೇಳಿ ಉದ್ಧಾರವಾಗಿ ಜನಾಂಗವನ್ನು ಹಾಗೆಯೇ ಇಟ್ಟಿದ್ದಾರೆ: ಸಿಎಂ