ETV Bharat / state

ಕುಡಿಯೋ ನೀರಿನ ಘಟಕದ ಬಳಿ ಸ್ವಚ್ಛತೆ ಇಲ್ಲದ್ದಕ್ಕೆ ಕೃಷಿ ಸಚಿವ ಬಿ.ಸಿ.ಪಾಟೀಲ್​​ ಗರಂ

ಕುಡಿಯೋ ನೀರಿನ ಘಟಕದ ಬಳಿ ಸ್ವಚ್ಛತೆ ಇಲ್ಲದ್ದಕ್ಕೆ ಕೃಷಿ ಸಚಿವ ಬಿ.ಸಿ.ಪಾಟೀಲ್​​ ಗರಂ ಆದ ಘಟನೆ ಜಿಲ್ಲೆಯ ಹಿರೇಕೆರೂರು ತಾಲೂಕಿನ ಚನ್ನಳ್ಳಿ ಗ್ರಾಮದಲ್ಲಿ ನಡೆದಿದೆ.

BC Patiala hangry, not cleanliness water plant
ಕುಡಿಯೋ ನೀರಿನ ಘಟಕದ ಬಳಿ ಸ್ವಚ್ಛತೆ ಇಲ್ಲದ್ದಕ್ಕೆ ಕೃಷಿ ಸಚಿವ ಬಿ.ಸಿ.ಪಾಟೀಲ ಗರಂ..!
author img

By

Published : May 16, 2020, 3:37 PM IST

ಹಾವೇರಿ: ಕುಡಿಯೋ ನೀರಿನ ಘಟಕದ ಬಳಿ ಸ್ವಚ್ಛತೆ ಇಲ್ಲದ್ದನ್ನು ಕಂಡ ಕೃಷಿ ಸಚಿವ ಬಿ.ಸಿ.ಪಾಟೀಲ್​ ಗರಂ ಆದ ಘಟನೆ ಜಿಲ್ಲೆಯ ಹಿರೇಕೆರೂರು ತಾಲೂಕಿನ ಚನ್ನಳ್ಳಿ ಗ್ರಾಮದಲ್ಲಿ ನಡೆದಿದೆ.

ಸಚಿವ ಪಾಟೀಲ್ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ತೆರಳಿದ್ದ ವೇಳೆ ಈ ಘಟನೆ ನಡೆದಿದೆ. ಗ್ರಾಮದಲ್ಲಿನ ಶುದ್ಧ ಕುಡಿಯೋ ನೀರಿನ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಲ್ಲಿಯ ಅಸ್ವಚ್ಛತೆ ಕಂಡು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕುಡಿಯೋ ನೀರಿನ ನಲ್ಲಿಯ ಸುತ್ತಮುತ್ತ ಕಸ, ಧೂಳು ಇದ್ದಿದ್ದರಿಂದ ಸ್ಥಳದಲ್ಲಿದ್ದ ಅಧಿಕಾರಿಗಳನ್ನ ಸಚಿವ ಪಾಟೀಲ್ ತರಾಟೆಗೆ ತಗೆದುಕೊಂಡಿದ್ದಾರೆ.

ಪಿಡಿಒ ಏನ್ ಮಾಡ್ತಾರೆ, ಇಲಾಖೆಯಿಂದ ಕೋಟಿಗಟ್ಟಲೆ ಹಣ ಖರ್ಚು ಮಾಡ್ತೀರಿ. ಕಂಪೌಂಡ್ ನಿರ್ಮಿಸೋಕೆ ಆಗಲ್ವಾ ಎಂದು ಪಾಟೀಲ್ ಅಧಿಕಾರಿಗಳನ್ನ ಪ್ರಶ್ನಿಸಿದ್ದಾರೆ. ಇಲ್ಲಿನ ನೀರನ್ನ ಜನರು ಹೇಗೆ ಕುಡಿಯಬೇಕು? ಆದಷ್ಟು ಬೇಗ ಸ್ವಚ್ಛತೆ ಕಾಯ್ದುಕೊಳ್ಳಿ ,ಇಲ್ಲದಿದ್ದರೆ ಅಮಾನತುಗೊಳಿಸುವ ಎಚ್ಚರಿಕೆಯನ್ನ ಪಾಟೀಲ್ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.