ಹಾವೇರಿ: ಮಾಜಿ ಶಾಸಕ ಯು.ಬಿ.ಬಣಕಾರ್ ಮತ್ತು ನಾನು ಒಳ್ಳೆಯ ಬ್ಯಾಟ್ಸ್ಮನ್ಗಳು ಎಂದು ಜನ ತೋರಿಸಿಕೊಟ್ಟಿದ್ದಾರೆ ಎಂದು ಹಿರೇಕೆರೂರು ಕ್ಷೇತ್ರದ ವಿಜೇತ ಅಭ್ಯರ್ಥಿ ಬಿ.ಸಿ.ಪಾಟೀಲ್ ಹೇಳಿದ್ದಾರೆ.
ಹಾವೇರಿ ಸಮೀಪದ ದೇವಗಿರಿ ಮತ ಎಣಿಕೆ ಕೇಂದ್ರದಲ್ಲಿ ಮಾತನಾಡಿದ ಅವರು, ಮತದಾರರಿಗೆ ಅಭಿನಂದನೆ ಸಲ್ಲಿಸಿದರು. ನಮಗೆ ಸ್ಪೀಕರ್ ಅನರ್ಹ ಪಟ್ಟ ಕಟ್ಟಿದ್ದರು. ಜನತಾ ನ್ಯಾಯಾಲಯ ನಮ್ಮನ್ನ ಮತ್ತೊಮ್ಮ ಅರ್ಹರನ್ನಾಗಿ ಮಾಡಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಇದೇ ವೇಳೆ ಮಾತನಾಡಿದ ಮಾಜಿ ಶಾಸಕ ಯು.ಬಿ.ಬಣಕಾರ್ ಕ್ಷೇತ್ರದಲ್ಲಿ ಮುಖಂಡರು ಒಂದಾದರೂ ಕಾರ್ಯಕರ್ತರು ಒಂದಾಗುವುದಿಲ್ಲ ಎಂಬ ಮಾತಿತ್ತು. ಆದರೆ ಹಿರೇಕೆರೂರು ಕ್ಷೇತ್ರದ ಮತದಾರರು ಈ ಮಾತನ್ನ ಸುಳ್ಳು ಮಾಡಿದ್ದಾರೆ. ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ಯು.ಬಿ.ಬಣಕಾರ್ ಹೇಳಿದರು.