ETV Bharat / state

ಬ್ರಿಟಿಷರೆದುರು ಸಿಡಿಲ ಮರಿಯಂತೆ ಘರ್ಜಿಸಿದ್ದರು ಮೋಟೆಬೆನ್ನೂರಿನ ಹುಲಿ ಮೈಲಾರ ಮಹಾದೇವಪ್ಪ.. - Independence Day amrita mahotsava

ಬ್ರಿಟಿಷರು ಗುಂಡಿನ ಮಳೆ ಸುರಿಸುತ್ತಿದ್ದರು. ಬೆಚ್ಚದೇ, ಬೆವರದೇ, ಬೆದರದೇ ನಿಂತಿದ್ದರು ಈ ಕ್ರಾಂತಿಕಾರಿ. ಬೆನ್ನು ತೋರದೇ ಎದೆಯುಬ್ಬಿಸಿದ್ದ ಆ ಸ್ವಾತಂತ್ರ್ಯ ಸೇನಾನಿಯೇ ಮೈಲಾರ ಮಹಾದೇವಪ್ಪ.

Mailara Mahadevappa freedom fright
ಸ್ಯಾತಂತ್ರ್ಯ ಹೋರಾಟಗಾರ ಮೈಲಾರ ಮಹದೇವಪ್ಪ
author img

By

Published : Aug 9, 2022, 3:31 PM IST

ಹಾವೇರಿ: ಭಾರತ ದೇಶ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಆಚರಿಸುತ್ತಿದೆ. ಈ ಸಂಭ್ರಮಕ್ಕೆ ಕಾರಣರಾದವರು ಲೆಕ್ಕವಿಲ್ಲದಷ್ಟು ಸ್ವಾತಂತ್ರ್ಯ ಹೋರಾಟಗಾರರು. ಇಂತಹ ವೀರಪುತ್ರರ ಪೈಕಿ ಜಿಲ್ಲೆಯ ಮೈಲಾರ ಮಹಾದೇವಪ್ಪ ಕೂಡಾ ಒಬ್ಬರು. ಉಪ್ಪಿನ ಸತ್ಯಾಗ್ರಹದಲ್ಲಿ ರಾಜ್ಯವನ್ನು ಪ್ರತಿನಿಧಿಸಿದ್ದ ಇವರು ನಂತರ ಬ್ರಿಟಿಷರಿಗೆ ಸಿಂಹಸ್ವಪ್ನರಾಗಿದ್ದರು.

ಮೈಲಾರ ಮಹಾದೇವಪ್ಪ ಹೋರಾಟ: ಜಿಲ್ಲೆಯಲ್ಲಿ ಸ್ವಾತಂತ್ರ್ಯ ಹೋರಾಟದ ಕಿಚ್ಚು ಹಚ್ಚಿದವರು ಮೈಲಾರ ಮಹಾದೇವಪ್ಪ. ಇವರಿಂದ ಸ್ಫೂರ್ತಿ ಪಡೆದು ಸಾವಿರಾರು ಸ್ವಾತಂತ್ರ್ಯ ಹೋರಾಟಗಾರರು ಜಿಲ್ಲೆಯಲ್ಲಿ ಹುಟ್ಟಿಕೊಂಡಿದ್ದರು. ಇಂತಹ ಮಹಾನ್ ಚೇತನ 1943 ಏಪ್ರಿಲ್ 1ರಂದು ನಡೆದ ಬ್ರಿಟಿಷರ ಗುಂಡಿನ ದಾಳಿಗೆ ಎದೆಯೊಡ್ಡಿ ಹುತಾತ್ಮರಾದರು. ಇವರ ಪಾರ್ಥಿವ ಶರೀರವನ್ನು ಹಾವೇರಿ ಹೊರಭಾಗದಲ್ಲಿ ಅಂತ್ಯಕ್ರಿಯೆ ನಡೆಸಲಾಗಿದ್ದು, ಸರ್ಕಾರ ವೀರಸೌಧ ನಿರ್ಮಿಸಿದೆ.

ಹಿನ್ನೆಲೆ: ಬ್ಯಾಡಗಿ ತಾಲೂಕು ಮೋಟೆಬೆನ್ನೂರು ಗ್ರಾಮದಲ್ಲಿ ಮೈಲಾರ ಮಹಾದೇವಪ್ಪ 1911ರ ಜೂನ್ 8 ರಂದು ಜನಿಸಿದ್ದರು. ಮಹಾತ್ಮ ಗಾಂಧೀಜಿ ನೇತೃತ್ವದ ದಂಡಿ ಉಪ್ಪಿನ ಸತ್ಯಾಗ್ರಹಕ್ಕೆ ರಾಜ್ಯದಿಂದ ಆಯ್ಕೆಯಾಗಿದ್ದ ಏಕೈಕ ವ್ಯಕ್ತಿಯೇ ಮಹಾದೇವಪ್ಪ.

ವಿವಿಧ ಅಸಹಕಾರ ಚಳವಳಿಯಲ್ಲಿ ಭಾಗಿ: ಮಹದೇವ ಹುಟ್ಟೂರಿಗೆ ಬಂದ ನಂತರ ಬ್ರಿಟಿಷರಿಗೆ ಸಿಂಹಸ್ವಪ್ನದಂತೆ ಕಾಡಿದರು. ಅಂದಿನ ಸರ್ಕಾರಗಳ ಟಪಾಲ್ ಕಳ್ಳತನ ಸೇರಿದಂತೆ ವಿವಿಧ ಅಸಹಕಾರ ಚಳವಳಿಯಲ್ಲಿ ಇವರು ಪಾಲ್ಗೊಂಡಿದ್ದರು. 1943ರ ಏಪ್ರಿಲ್‌ 1 ರಂದು ಹೊಸರಿತ್ತಿ ವೀರಭದ್ರೇಶ್ವರ ದೇವಸ್ಥಾನದಲ್ಲಿನ ತೆರಿಗೆ ಹಣಕ್ಕೆ ಮುತ್ತಿಗೆ ಹಾಕಿದಾಗ ಬ್ರಿಟಿಷರ ಗುಂಡೇಟಿಗೆ ಇವರು ವೀರ ಮರಣವನ್ನಪ್ಪುತ್ತಾರೆ. ಇವರ ಜೊತೆ ತಿರಕಪ್ಪ ಮಡಿವಾಳರ ಮತ್ತು ವೀರಯ್ಯ ಹಿರೇಮಠ ಅವರೂ ಹುತಾತ್ಮರಾದರು.

ಉಪ್ಪಿನ ದಂಡಿ ಸತ್ಯಾಗ್ರಹದಲ್ಲಿ ಗಾಂಧೀಜಿ ಜೊತೆ ಹೆಜ್ಜೆ: ಗಾಂಧೀಜಿ ಅವರ ಉಪ್ಪಿನ ದಂಡಿ ಸತ್ಯಾಗ್ರಹದಲ್ಲಿ ಪಾಲ್ಗೊಂಡು, ನಿರಂತರ 212 ಮೈಲು ರಾಷ್ಟ್ರಪಿತನ ಜತೆ ಹೆಜ್ಜೆ ಹಾಕಿದ್ದ ಏಕೈಕ ಕನ್ನಡಿಗ ಮಹಾದೇವ ಮೈಲಾರ ಅನ್ನೋದೇ ಕನ್ನಡಿಗರಿಗೆ ಹೆಮ್ಮೆಯ ವಿಷಯ. ಮಹಾತ್ಮ ಗಾಂಧೀಜಿ ಹೋರಾಟವನ್ನು ಅನುಸರಿಸಿದ್ದ ಮೈಲಾರ ಮಹಾದೇವ, ಸುಭಾಷ್‌ಚಂದ್ರ ಬೋಸ್‌ರಂತೆ ಕ್ರಾಂತಿಕಾರಿಯೂ ಹೌದು. ಅಸಹಕಾರ ಚಳವಳಿಯ ಭಾಗವಾಗಿ ರೈಲ್ವೆ ರೋಕೋ, ಟಪಾಲ್ ಕಳ್ಳತನ ಮತ್ತು ತೆರಿಗೆ ಹಣ ಕೊಳ್ಳೆ ಹೊಡೆದರು. ಆ ಮೂಲಕ ಸ್ವಾತಂತ್ರ್ಯದ ಕಿಡಿಯನ್ನು ಎಲ್ಲೆಡೆ ಹೊತ್ತಿಸಿದರು. ಇವರ ದಾರಿಯಲ್ಲೇ ನೂರಾರು ಮಂದಿ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದರು.

ಜೈಲಿಗೆ ಹೋಗಿದ್ದರು: ಮೈಲಾರ ಮಹದೇವ ಚಿಕ್ಕಂದಿನಲ್ಲಿಯೇ ದೇಶಾಭಿಮಾನ ಮೈಗೂಡಿಸಿಕೊಂಡಿದ್ದರು. ಆದರೆ, ತಂದೆಗೆ ಚಳವಳಿಯಲ್ಲಿ ಸೇರೋದು ಇಷ್ಟವಿರಲಿಲ್ಲ. ತಾಯಿ ಖಾದಿ ಪ್ರೇಮಿ. ಮಹಾದೇವ ಅವರಿಗದು ರಕ್ತಗತವಾಗಿ ಬಂದಿತ್ತು. ಗಾಂಧೀಜಿ ಮೇಲೆ ಅವರಿಗೆ ಇನ್ನಿಲ್ಲದ ಭಕ್ತಿ ಇದ್ದ ಕಾರಣವೇ ದಂಡಿ ಸತ್ಯಾಗ್ರಹಕ್ಕಾಗಿ ಸಾಬರಮತಿಗೆ ತೆರಳಲು ಅವರಿಗೆ ಪ್ರೇರಣೆಯಾಯ್ತು. ತವರಿಗೆ ಬಂದು ಬ್ರಿಟಿಷರ ವಿರುದ್ಧ ಸಿಡಿಲಮರಿಯಂತೆ ಘರ್ಜಿಸತೊಡಗಿದರು. ಇವರಿಂದಾಗಿಯೇ ಆ ಭಾಗದಲ್ಲಿ ಸ್ವಾತಂತ್ರ್ಯದ ಹೋರಾಟದ ಜ್ಯೋತಿ ಬೆಳಗಿತು. ವಿಶೇಷ ಅಂದ್ರೇ ಮಹಾದೇವರ ಧರ್ಮಪತ್ನಿ ಸಿದ್ದಮ್ಮ ಕೂಡ ಕಸ್ತೂರಿ ಬಾ ಅವರೊಂದಿಗೆ ಜೈಲಿಗೂ ಹೋಗಿದ್ದರು. ಅಷ್ಟರಮಟ್ಟಿಗೆ ಈ ದಂಪತಿ ಆಜಾದಿ ಚಳವಳಿಗೆ ತಮ್ಮನ್ನು ಅರ್ಪಿಸಿಕೊಂಡಿದ್ದರು.

ಜನ ಧಂಗೆ ಏಳುವ ಭೀತಿ ಆಂಗ್ಲರನ್ನು ಕಾಡಿತ್ತು: ಮಹಾದೇವ ಸೇರಿ ಮೂವರ ಹತ್ಯಾಕಾಂಡ ನಡೆಸಿದ ಬ್ರಿಟಿಷರು, ಮೂವರನ್ನೂ ಒಂದೇ ಜಾಗದಲ್ಲಿ ಅಂತ್ಯಕ್ರಿಯೆ ನಡೆಸಿದ್ದರು. ಪಾರ್ಥಿವ ಶರೀರಗಳನ್ನು ಹಸ್ತಾಂತರಿಸಿದರೆ ಕಂಪನಿ ಸರ್ಕಾರದ ವಿರುದ್ಧವೇ ಜನ ಧಂಗೆ ಏಳುವ ಭೀತಿ ಆಂಗ್ಲರಲ್ಲಿತ್ತು.

ಒಂದೇ ಸಮಾಧಿಯಲ್ಲಿ ಅಂತ್ಯಕ್ರಿಯೆ: ಮಹಾದೇವ ಹುತಾತ್ಮರಾಗುತ್ತಿದ್ದಂತೆ ಜನ ದಂಗೆ ಏಳುವ ಪರಿಸ್ಥಿತಿ ನಿರ್ಮಾಣವಾಗುತ್ತೆ. ಇದರಿಂದ ಹೆದರಿದ ಬ್ರಿಟಿಷರು ಮೈಲಾರ ಮಹಾದೇವ ಮತ್ತು ಅವರ ಜೊತೆ ಹುತಾತ್ಮರಾದ ತಿರಕಪ್ಪ ಮಡಿವಾಳರ ಮತ್ತು ವೀರಯ್ಯ ಹಿರೇಮಠ ಸೇರಿದಂತೆ ಮೂವರ ಪಾರ್ಥಿವ ಶರೀರಗಳನ್ನು ಹಾವೇರಿಯ ಹೊರವಲಯದಲ್ಲಿ ಒಂದೇ ಸಮಾಧಿಯಲ್ಲಿ ಅಂತ್ಯಕ್ರಿಯೆ ಮಾಡುತ್ತಾರೆ. ಜಿಲ್ಲಾಡಳಿತ ಇದೀಗ ಮೈಲಾರ ಮಹಾದೇವ ಟ್ರಸ್ಟ್ ರಚಿಸಿಕೊಂಡು ಅವರ ಧ್ಯೇಯಗಳನ್ನು ಜಾರಿಗೆ ತರುತ್ತಿದೆ.

ಮೈಲಾರ ಮಹಾದೇವಪ್ಪ ಅಂತ್ಯಕ್ರಿಯೆ ನಡೆದ ಸ್ಥಳದಲ್ಲಿ ವೀರಸೌಧ ನಿರ್ಮಿಸಲಾಗಿದೆ. ಮೈಲಾರ ಮಹಾದೇವರ ಸ್ಮರಣಾರ್ಥ ಮೈಲಾರ ಮಹಾದೇವಪ್ಪ ವೃತ್ತ ನಿರ್ಮಿಸಲಾಗಿದೆ. ಮೈಲಾರ ಸ್ಮರಣಾರ್ಥ ಕೇಂದ್ರ ಸರ್ಕಾರ 2018 ರಲ್ಲಿ ಅಂಚೆಚೀಟಿ ಬಿಡುಗಡೆ ಮಾಡಿದೆ. 2020 ರಲ್ಲಿ ಹಾವೇರಿ ರೈಲು ನಿಲ್ದಾಣಕ್ಕೆ ಮೈಲಾರ ಮಹಾದೇವ ರೈಲು ನಿಲ್ದಾಣ ಎಂದು ಮರುನಾಮಕರಣ ಮಾಡಲಾಗಿದೆ. ರಾಜ್ಯ ಸೇರಿದಂತೆ ವಿವಿಧ ರಾಜ್ಯಗಳ ಪಠ್ಯಪುಸ್ತಕಗಳಲ್ಲಿ ಮಹಾದೇವರ ದೇಶಪ್ರೇಮ ಹಸಿರಾಗಿ ಉಳಿದಿದೆ.

ಇದನ್ನೂ ಓದಿ: ಹರ್ ಘರ್ ತಿರಂಗಾ: ಕಾರಿಗೆ ತ್ರಿವರ್ಣ ಬಳಿಸಿದ ಸೂರತ್ ಉದ್ಯಮಿ..ದಾರಿ ಉದ್ದಕ್ಕೂ ರಾಷ್ಟ್ರಧ್ವಜ ವಿತರಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.