ETV Bharat / state

ಹಾವೇರಿ: 27 ಅಂಗನವಾಡಿ ಕೇಂದ್ರಗಳು ಮನೆಯಲ್ಲಿ ನಿರ್ವಹಣೆ - Anganawadi workers

ಅಂಗನವಾಡಿ ಕೇಂದ್ರಗಳ ಸಮಸ್ಯೆ, ಮಕ್ಕಳು ಮತ್ತು ಸಿಬ್ಬಂದಿಗೆ ಸಂಬಂಧಿಸಿದಂತೆ ಉಂಟಾಗಿರುವ ಸಮಸ್ಯೆಗಳನ್ನು ಕೂಡಲೇ ಬಗೆಹರಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಪರಶುರಾಮ್ ವೈ.ಶೆಟ್ಟಪ್ಪನವರ್ ಭರವಸೆ ನೀಡಿದರು.

anganawadi-centers-problems
ಅಂಗನವಾಡಿ ಕೇಂದ್ರ
author img

By

Published : Aug 24, 2020, 5:58 PM IST

ಹಾವೇರಿ: ಜಿಲ್ಲೆಯಲ್ಲಿ 1,918 ಅಂಗನವಾಡಿಗಳಿದ್ದು, ಅದರಲ್ಲಿ 27 ಮನೆಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಮಕ್ಕಳಲ್ಲಿ ಅಪೌಷ್ಟಿಕತೆ ಸಮಸ್ಯೆ ಇಲ್ಲ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಪರಶುರಾಮ್ ವೈ.ಶೆಟ್ಟಪ್ಪನವರ್ ತಿಳಿಸಿದ್ದಾರೆ.

ಅಂಗನವಾಡಿ ಕೇಂದ್ರಗಳಲ್ಲಿ 1,26,933 ಮಕ್ಕಳು ಪ್ರವೇಶ ಪಡೆದಿದ್ದು, 19,842 ಗರ್ಭಿಣಿಯರು, 12,883 ಬಾಣಂತಿಯರು ನೋಂದಾಯಿಸಿಕೊಂಡಿದ್ದಾರೆ. ಅಪೌಷ್ಟಿಕತೆಯಿಂದ ಮಕ್ಕಳ ಸಾವು ಸಂಭವಿಸಿಲ್ಲ. ಕೇಂದ್ರಗಳ ಸ್ಥಿತಿಗತಿ ಕುರಿತು ಜಿಪಿಎಸ್ ತಂತ್ರಜ್ಞಾನದ ಮೂಲಕ ಮಾಹಿತಿ ಪಡೆಯುತ್ತಿದ್ದೇವೆ. ಪ್ರತಿ ತಿಂಗಳು ಮಕ್ಕಳ ತೂಕ ಪರೀಕ್ಷೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ಸ್ಟೀರೋಮೀಟರ್, ಇನ್​ಫ್ಯಾಂಟ್ ಮೀಟರ್, ಡಿಜಿಟಲ್ ವೇಯಿಂಗ್ ಸ್ಕೇಲ್ ಹಾಗೂ ಸಾಲ್ಟ್​​ಮೀಟರ್ ಬಳಸಿ ಮಕ್ಕಳ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ. ಈಗಾಗಲೇ 1,22,076 ಮಕ್ಕಳ ತಪಾಸಣೆ ಮಾಡಲಾಗಿದ್ದು, ಅದರಲ್ಲಿ 99,225 ಮಕ್ಕಳು ಆರೋಗ್ಯವಾಗಿದ್ದಾರೆ. 22,184 ಮಕ್ಕಳು ಸಾಧಾರಣ ಮತ್ತು 667 ಮಕ್ಕಳು ತೀವ್ರ ಅಪೌಷ್ಟಿಕಯಿಂದ ಬಳಲುತ್ತಿದ್ದಾರೆ. 4015 ಮಕ್ಕಳು ವಯಸ್ಸಿಗೆ ತಕ್ಕಂತೆ ತೂಕವಿಲ್ಲ ಎಂದು ಮಾಹಿತಿ ನೀಡಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಪರಶುರಾಮ್ ವೈ.ಶೆಟ್ಟಪ್ಪನವರ್

ಜಿಲ್ಲೆಯಲ್ಲಿ ಪೋಷಣ ಅಭಿಯಾನದಡಿ ಮೊಬೈಲ್ ಸಹ ನೀಡಲಾಗಿದ್ದು, ಕಾರ್ಯನಿರ್ವಹಿಸುವುದು ತಮಗೆ ಹೆಚ್ಚು ಅನುಕೂಲಕರ ಎನ್ನುತ್ತಿದ್ದಾರೆ ಅಧಿಕಾರಿಗಳು. ಅಂಗನವಾಡಿ ಕಾರ್ಯಕರ್ತೆಯರ ವಿಚಾರಕ್ಕೆ ಬಂದರೆ ಪ್ರಸ್ತುತ ಕೊರೊನಾ ಕಾರಣ ಕಾರ್ಯಕರ್ತೆಯರು ತೀವ್ರ ಸಂಕಷ್ಟದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಬಾಣಂತಿ-ಗರ್ಭಿಣಿಯರಿಗೆ ಆಹಾರ ಪೂರೈಕೆಯಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದಾರೆ. ಅಲ್ಲದೆ, ಮಕ್ಕಳ ಲಸಿಕೆ ಸಹ ನೀಡುತ್ತಿರುವ ಅವರಿಗೆ ಪಿಪಿಇ ಕಿಟ್ ಸೇರಿದಂತೆ ವಿವಿಧ ಸೌಕರ್ಯಗಳನ್ನು ನೀಡಬೇಕಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.