ರಾಣೆಬೆನ್ನೂರು: ಅಮೃತಸಿಟಿ ಯೋಜನೆಯ ನಿರಂತರ ಕುಡಿಯುವ ನೀರು ಸರಬರಾಜು ಯೋಜನೆಗೆ, ಶಾಸಕ ಅರುಣ ಕುಮಾರ ಪೂಜಾರ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು, ನಗರದ ಅಭಿವೃದ್ಧಿಗೆ ₹ 250 ಕೋಟಿ ವೆಚ್ಚದಲ್ಲಿ, ಕಾರ್ಯ ಯೋಜನೆಗೆ ಡಿಪಿಆರ್ ಸಿದ್ಧವಾಗಿದೆ ಎಂದರು.
ನೀರು ಸರಬರಾಜು ಯೋಜನೆಯು, ₹ 118 .60 ಕೋಟಿ ರೂ. ವೆಚ್ಚದ್ದಾಗಿದ್ದು, ತುಂಗಭದ್ರಾ ನದಿಯ ಮೂಲಕ ನೀರನ್ನು ಜಲಪೂರಣ ಮಾಡಿ, ಪ್ರತಿ ನಿತ್ಯ ನೀರು ಸರಬರಾಜು ಮಾಡಲಾಗುತ್ತದೆ ಎಂದರು. ನಗರದ ಐದು ಪ್ರಮುಖ ಪ್ರದೇಶಗಳಲ್ಲಿ ಎತ್ತರದ ಜಲಗಾರ ಟ್ಯಾಂಕ್ ನಿರ್ಮಾಣ ಮಾಡಲಾಗಿದೆ. ಈ ಟ್ಯಾಂಕ್ ಮೂಲಕ ನಗರದ ಸುಮಾರು 1 ಲಕ್ಷ ಜನರಿಗೆ ನೀರು ಒದಗಿಸಲಾಗುತ್ತದೆ. ಈಗಾಗಲೇ 16,248 ಮನೆಗಳಿಗೆ ನಲ್ಲಿ ಸಂಪರ್ಕ ಜೋಡಣೆ ಮಾಡಲಾಗಿದೆ ಎಂದರು.
ಯೋಜನೆಯ ನಿರ್ದೇಶಕ ರವೀಂದ್ರ ಮಲ್ಲಾಪೂರ, ನಗರಸಭೆ ಆಯುಕ್ತ ಡಾ. ಎನ್. ಮಹಾಂತೇಶ, ಸದಸ್ಯರಾದ ಮಲ್ಲಣ್ಣ ಅಂಗಡಿ, ಪುಟ್ಟಪ್ಪ ಮರಿಯಮ್ಮನವರ, ಮಂಜುಳಾ ಹತ್ತಿ, ಗಂಗಮ್ಮ ಹಾವನೂರ, ಪ್ರಕಾಶ ಪೂಜಾರ, ಪ್ರಭಾವತಿ ತಿಳವಳ್ಳಿ, ಡಿವೈಎಸ್ಪಿ ಟಿ.ವಿ. ಸುರೇಶ ಉಪಸ್ಥಿತರಿದ್ದರು.