ಹಾವೇರಿ: ಜಿಲ್ಲಾಡಳಿತ ಬಿಡುಗಡೆ ಮಾಡಿದ ಹೆಲ್ತ್ ಬುಲೆಟಿನ್ನಲ್ಲಿ ಇಂದು 146 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಅಪರ ಜಿಲ್ಲಾಧಿಕಾರಿ ಯೋಗಿಶ್ವರ ಮಿಶ್ರಾ ತಿಳಿಸಿದರು. ರಾಣೆಬೆನ್ನೂರು ತಾಲೂಕಿನಲ್ಲಿ 56, ಹಾವೇರಿ ತಾಲೂಕು 27, ಶಿಗ್ಗಾಂವಿ ತಾಲೂಕು 20, ಹಿರೇಕೇರೂರು ತಾಲೂಕಿನಲ್ಲಿ 17, ಬ್ಯಾಡಗಿ ತಾಲೂಕು 15, ಸವಣೂರು ತಾಲೂಕು 11 ಜನರಿಗೆ ಸೋಂಕು ತಗುಲಿದೆ.
ಒಟ್ಟು 1186ಕ್ಕೆ ಸೋಂಕಿತರ ಸಂಖ್ಯೆ ಏರಿಕೆಯಾಗಿದೆ. ಇನ್ನೂ ಸೋಂಕಿನಿಂದ ಜಿಲ್ಲೆಯಲ್ಲಿ ಮೃತಪಟ್ಟವರ ಸಂಖ್ಯೆ 28ಕ್ಕೆ ತಲುಪಿದೆ. ಇಲ್ಲಿನ ಬಸವೇಶ್ವರ ನಗರದ 18ನೇ ಕ್ರಾಸ್ ನಿವಾಸಿ ತೀವ್ರ ಉಸಿರಾಟದ ಸಮಸ್ಯೆಯಿಂದ ಜುಲೈ 27ರಂದು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದು, ಕೋವಿಡ್19 ನಿಯಮದಂತೆ ಜಿಲ್ಲಾಡಳಿತ ಅಂತ್ಯಕ್ರಿಯೆ ನಡೆಸಿದೆ.