ಹಾಸನ : ಮದುವೆಯಾಗಿ ತಿಂಗಳು ಉರುಳುವ ಮೊದಲೇ ಅನುಮಾನಾಸ್ಪದವಾಗಿ ಮಹಿಳೆ ಸಾವಿಗೀಡಾಗಿದ್ದಾಳೆ. ವರದಕ್ಷಿಣೆ ಕಿರುಕುಳಕ್ಕೆ ಮಗಳನ್ನ ಬಲಿ ಪಡೆದಿದ್ದಾರೆಂದು ಆರೋಪಿಸಿ ಪೋಷಕರು ಆಸ್ಪತ್ರೆಯ ಮುಂದೆ ಪ್ರತಿಭಟನೆ ನಡೆಸಿದ್ದಾರೆ.
ಫಿಜಾ ಖಾನಂ (22) ಎಂಬುವರು ಮೃತಪಟ್ಟ ಮಹಿಳೆ. ಮಗಳು ಸ್ನಾನಕ್ಕೆ ಹೋದಾಗ ಗ್ಯಾಸ್ ಗೀಸರ್ ಆನ್ ಮಾಡಿ, ಬಾಗಿಲು ಮುಚ್ಚಿ ಕೊಲೆ ಮಾಡಲಾಗಿದೆ ಎಂದು ಫಿಜಾ ಖಾನಂ ಪೋಷಕರು ಆರೋಪಿಸಿದ್ದಾರೆ.
ಡಿಸೆಂಬರ್ 2ರಂದು ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ಹೊಳಲಗೋಡು ಗ್ರಾಮದ ಯುವತಿ ಫಿಜಾ ಖಾನಂ ಹಾಗೂ ಹಾಸನದ ಶಾಗಿಲ್ ಅಹಮದ್ ಅವಿರಿಬ್ಬರಿಗೂ ಮದುವೆಯಾಗಿತ್ತು. ಮದುವೆಯಾಗಿ 19ನೇ ದಿನವೇ ನವ ವಿವಾಹಿತೆ ಫಿಜಾ ಖಾನಂ ಸಾವಿಗೀಡಾಗಿದ್ದಾರೆ.
ಇದನ್ನೂ ಓದಿ: ವಿದ್ಯುತ್ಲೈನ್ ಕಾಮಗಾರಿಗೆ ವಿರೋಧ: ದಾವಣಗೆರೆಯಲ್ಲಿ ವಿಷ ಸೇವಿಸಿ ತಾಯಿ ಮಗ ಆತ್ಮಹತ್ಯೆಗೆ ಯತ್ನ
ಹಾಸನದ ಪೆನ್ಷನ್ ಮೊಹಲ್ಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ವರದಕ್ಷಿಣೆ ಕಿರುಕುಳ ಆರೋಪದಲ್ಲಿ ಕೇಸ್ ಅಳಿಯ ಶಾಗಿಲ್ ಅಹಮದ್ ಸೇರಿದಂತೆ ಆತನ ಸಹೋದರರು ಮತ್ತು ಶಾಗಿಲ್ ತಾಯಿಯ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡಿರುವ ಪೆನ್ಷನ್ ಮೊಹಲ್ಲಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.