ETV Bharat / state

ವೈನ್ ಶಾಪ್ ಬೀಗ ಒಡೆದ ಕಳ್ಳರ ಬಂಧನ: 6.60 ಲಕ್ಷ ಮೌಲ್ಯದ ಮದ್ಯ ವಶ

ವೈನ್ ಶಾಪ್ ಬೀಗ ಒಡೆದು ಲಕ್ಷಾಂತರ ರೂಪಾಯಿ ಮೌಲ್ಯದ ಮದ್ಯ ಕಳ್ಳತನ ನಡೆಸಿದ್ದ ಆರೋಪಿಗಳನ್ನು ತಾಲೂಕಿನ ಗ್ರಾಮಾಂತರ ಠಾಣೆ ಪೋಲಿಸರು ಬಂಧಿಸಿದ್ದಾರೆ ಎಂದು ಜಿಲ್ಲಾ ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿ ನಂದಿನಿ ಹೇಳಿಕೆ ನೀಡಿದ್ದಾರೆ.

Wine shop robbers arrested: Rs 6.60 lakh worth of liquor seized
ವೈನ್ ಶಾಪ್ ಬೀಗ ಒಡೆದ ಕಳ್ಳರ ಬಂಧನ: 6.60 ಲಕ್ಷ ಮೌಲ್ಯದ ಮದ್ಯ ವಶ
author img

By

Published : Jul 11, 2020, 8:18 PM IST

Updated : Jul 11, 2020, 10:40 PM IST

ಸಕಲೇಶಪುರ (ಹಾಸನ): ವೈನ್ ಶಾಪ್ ಬೀಗ ಒಡೆದು ಲಕ್ಷಾಂತರ ರೂಪಾಯಿ ಮೌಲ್ಯದ ಮದ್ಯ ಕಳ್ಳತನ ನಡೆಸಿದ್ದ ಆರೋಪಿಗಳನ್ನು ತಾಲೂಕಿನ ಗ್ರಾಮಾಂತರ ಠಾಣೆ ಪೋಲಿಸರು ಬಂಧಿಸಿದ್ದಾರೆ ಎಂದು ಜಿಲ್ಲಾ ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿ ನಂದಿನಿ ಹೇಳಿಕೆ ನೀಡಿದ್ದಾರೆ.

ವೈನ್ ಶಾಪ್ ಬೀಗ ಒಡೆದ ಕಳ್ಳರ ಬಂಧನ: 6.60 ಲಕ್ಷ ಮೌಲ್ಯದ ಮದ್ಯ ವಶ

ಪಟ್ಟಣದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿ, ಕಳ್ಳತನ ಸಂಬಂಧ ಆಲೂರು ತಾಲೂಕು ಹುಣಸೆ ಗ್ರಾಮದ ಮೋಹನ್ (31) ಹಾಗೂ ಚಂದ್ರು (42) ಎಂಬ ಆರೋಪಿಗಳನ್ನು ಬಂಧಿಸಲಾಗಿದೆ. ಇವರಿಬ್ಬರು ತಾಲೂಕಿನ ಹೆತ್ತೂರು ಹೋಬಳಿ ಹಿರಿಯೂರು ಕೂಡಿಗೆ ಗ್ರಾಮದ ಖುಷಿ ವೈನ್ ಶಾಪ್‌ನಲ್ಲಿ ಕಳೆದೊಂದು ತಿಂಗಳ ಹಿಂದೆ ಅಂದರೆ ಲೌಕಡೌನ್ ವೇಳೆ ಜನಸಂಚಾರ ಇಲ್ಲದಿರುವುದನ್ನು ಗಮನಿಸಿ ವೈನ್ ಶಾಪ್ ಬೀಗ ಒಡೆದು ಸುಮಾರು 6.60 ಲಕ್ಷ ರೂ. ಮೌಲ್ಯದ ವಿವಿಧ ಕಂಪನಿಗಳ ಮದ್ಯ ಕಳ್ಳತನ ನಡೆಸಿದ್ದರು.

ಕಳ್ಳತನ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಶ್ರೀನಿವಾಸ್‌ಗೌಡ, ಉಪಅಧೀಕ್ಷಕ ಗೋಪಿ, ವೃತ್ತನಿರೀಕ್ಷಕ ಗಿರೀಶ್ ಹಾಗೂ ಗ್ರಾಮಾಂತರ ಠಾಣೆ ಪಿಎಸ್‌ಐ ಚಂದ್ರಶೇಖರ್ ಜೊತೆಗೆ ಪೋಲಿಸ್ ಸಿಬ್ಬಂದಿಗಳಾದ ಸತೀಶ, ನಾಗರಾಜ, ಅಶೋಕ್, ನಾಗರಾಜ್, ಶಿವಪ್ರಕಾಶ್, ಲೋಕೇಶ್, ಸುನಿಲ್, ಪೃಥ್ವಿ, ಮಧು, ಧರ್ಮೇಂದ್ರ ಇವರುಗಳ ತಂಡ ಆರೋಪಿಗಳನ್ನು ಪತ್ತೆ ಹಚ್ಚಿ ಕಳ್ಳತನ ನಡೆಸಲಾಗಿದ್ದ ಮದ್ಯ, ಕೃತ್ಯಕ್ಕೆ ಬಳಸಲಾಗಿದ್ದ ಕಾರು ಹಾಗೂ ರಾಡ್‌ನ್ನು ವಶಕ್ಕೆ ಪಡೆದಿದೆ ಎಂದು ತಿಳಿಸಿದರು.

Last Updated : Jul 11, 2020, 10:40 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.