ಹಾಸನ: 'ಕೊಟ್ಟಾರೆ ಕೊಡುಶಿವನೆ ಕುಡುಕನಲ್ಲದ ಗಂಡನ....' ಎಂಬ ಹಾಡನ್ನು ನೀವು ಕೇಳೇ ಇರ್ತೀರಾ. ಆದರೆ, ಪ್ರತಿನಿತ್ಯ ಕುಡಿದು ಗಲಾಟೆ ಮಾಡುತ್ತಿದ್ದ ಎಂಬ ಕಾರಣಕ್ಕೆ ಪತಿಯನ್ನು ಕೊಲೆಗೈದು 'ಸಹಜ ಸಾವು' ಎಂದು ಬಿಂಬಿಸಿದ್ದ ಪತ್ನಿಯನ್ನು ಬಂಧಿಸುವಲ್ಲಿ ಹೊಳೆನರಸೀಪುರ ಪೊಲೀಸರು ಯಶಸ್ವಿಯಾಗಿದ್ದಾರೆ.
ಕುಡುಕ ಪತಿಯನ್ನು ಕೊಲೆ ಮಾಡಿ ನಂತರ ಸಹಜ ಸಾವು ಎಂದು ಬಿಂಬಿಸಿದ್ದ ಪತ್ನಿ ಸುಕನ್ಯ ಕೊನೆಗೂ ಪೊಲೀಸರ ಅತಿಥಿಯಾಗಿದ್ದಾಳೆ.
ಫೆಬ್ರವರಿ 27ರ ರಾತ್ರಿ ಸುಕನ್ಯ ಕಂಠಪೂರ್ತಿ ಕುಡಿದು ಬಂದ ಪತಿ ರೇವಣ್ಣನ ಜತೆ ಜಗಳಕ್ಕಿಳಿದಿದ್ದಾಳೆ. ಜಗಳ ತಾರಕಕ್ಕೇರಿದ ಬಳಿಕ ಪತಿಯ ಮರ್ಮಾಂಗಕ್ಕೂ ಒದ್ದಿದ್ದಾಳೆ. ಪರಿಣಾಮ ಪತಿ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ. ಬೆಳಗ್ಗೆ ಹೃದಯಾಘಾತದಿಂದ ತನ್ನ ಗಂಡ ಸಾವಿಗೀಡಾಗಿದ್ದಾನೆಂದು ಹೇಳಿದ್ದಾಳೆ. ಇವರಿಬ್ಬರ ಈ ನಿತ್ಯದ ಜಗಳಕ್ಕೆ ಇಬ್ಬರಿಗೂ ಇದ್ದ ಅಕ್ರಮ ಸಂಬಂಧವೂ ಕಾರಣ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಎಡಗೈಯಲ್ಲಿ ಊಟ ಮಾಡಿದಳೆಂದು ತಾಳಿ ಕಟ್ಟಿದವಳನ್ನೇ ಬಿಟ್ಟು ಹೊರಟ ವರ.. ಮುಂದಕ್ಕೆ ಹಿಂಗಾಯ್ತು..
ಪ್ರೀತಿಸಿ ಮದುವೆಯಾಗಿದ್ದರು: ಸುಕನ್ಯಾ ಮತ್ತು ರೇವಣ್ಣ 8 ವರ್ಷದ ಹಿಂದೆ ಪ್ರೀತಿಸಿ ಮದುವೆ ಆಗಿದ್ದರು. ಹೀಗಿದ್ದರೂ ರೇವಣ್ಣ ಇನ್ನೊಂದು ಮಹಿಳೆಯ ಜತೆ ಅಕ್ರಮ ಸಂಬಂಧ ಹೊಂದಿದ್ದ. ಮತ್ತು ಇದೇ ಕಾರಣಕ್ಕೆ ಕೆಲ ವರ್ಷ ಮನೆ ಬಿಟ್ಟು ಹೋಗಿದ್ದನಂತೆ. ಆ ವೇಳೆ ರೇವಣ್ಣ ಪತ್ನಿ ಕೂಡ ಇನ್ನೋರ್ವನ ಜತೆ ಅಕ್ರಮ ಸಂಬಂಧ ಹೊಂದಿದ್ದಳು ಎನ್ನಲಾಗುತ್ತಿದೆ. ಅನೇಕ ದಿನಗಳ ಬಳಿಕ ರೇವಣ್ಣ ಮರಳಿ ಮನೆಗೆ ಬಂದಾಗ ಸುಕನ್ಯ- ರೇವಣ್ಣ ನಡುವೆ ಗಲಾಟೆ ಆರಂಭವಾಗಿವೆ.
ಈ ಸಂಬಂಧ ಹೊಳೆನರಸೀಪುರದ ಹಳ್ಳಿ ಮೈಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.