ಅರಕಲಗೂಡು (ಹಾಸನ): ತಾಲೂಕಿನ ಕಸಬಾ ಬಳಿಯ ಯಲಗತ್ತವಳ್ಳಿ ನಾಲೆಯಲ್ಲಿ ಸುಮಾರು 50 ವರ್ಷದ ಅಪರಿಚಿತ ಮಹಿಳೆಯ ಶವ ಪತ್ತೆಯಾಗಿದೆ. ಸ್ಥಳಕ್ಕೆ ಅರಕಲಗೂಡು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮೃತದೇಹ ಗುರುತು ಹಿಡಿಯಲಾಗದಷ್ಟರ ಮಟ್ಟಿಗೆ ಕೊಳೆತ್ತಿದೆ. ಯಾರಿಗಾದರೂ ಮಹಿಳೆಯ ಗುರುತು ಪತ್ತೆಯಾದರೆ ಪೊಲೀಸರಿಗೆ ಮಾಹಿತಿ ನೀಡುವಂತೆ ತಿಳಿಸಿದ್ದಾರೆ. ಸದ್ಯ ಮೃತ ಮಹಿಳೆಯ ಗುರುತು ಪತ್ತೆಯಾಗಿಲ್ಲ.