ETV Bharat / state

ಪ.ಪಂ.ಕಿರಿಯ ಇಂಜಿನಿಯರ್ ವರ್ಗಾವಣೆ;ಎರಡು ಗುಂಪುಗಳ ಪ್ರತ್ಯೇಕ ಪ್ರತಿಭಟನೆ

ಪಟ್ಟಣ ಪಂಚಾಯ್ತಿ ಕಿರಿಯ ಇಂಜಿನಿಯರ್ ಕೆ.ಆರ್. ಕವಿತಾ ವರ್ಗಾವಣೆ ಸಂಬಂಧ ಪರ ಮತ್ತು ವಿರೋಧ ವ್ಯಕ್ತಪಡಿಸಿರುವ ಎರಡು ಗುಂಪುಗಳು ಮಂಗಳವಾರದಂದು ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿರುವ ಘಟನೆ ಹಾಸನದಲ್ಲಿ ನಡೆದಿದೆ.

ತಹಸೀಲ್ದಾರ್ ಶಿವರಾಜ್ ಅವರಿಗೆ ಮನವಿ ಸಲ್ಲಿಕೆ
author img

By

Published : Sep 19, 2019, 11:44 PM IST

ಹಾಸನ : ಅರಕಲಗೂಡು ಪ. ಪಂ. ಕಿರಿಯ ಇಂಜಿನಿಯರ್ ಕೆ.ಆರ್. ಕವಿತಾ ಅವರ ವರ್ಗಾವಣೆ ಸಂಬಂಧ ಪರ ಮತ್ತು ವಿರೋಧ ವ್ಯಕ್ತಪಡಿಸಿರುವ ಎರಡು ಗುಂಪುಗಳು ಮಂಗಳವಾರದಂದು ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿವೆ.

ಪ. ಪಂ. ಕಿರಿಯ ಇಂಜಿನಿಯರ್ ವರ್ಗಾವಣೆ ;ಎರಡು ಗುಂಪುಗಳಿಂದ ನಡೆಯಿತು ಪ್ರತ್ಯೇಕ ಪ್ರತಿಭಟನೆ

ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿದ ಗುಂಪುಗಳ ಪ್ರತಿಭಟನಾಕಾರರು ಮಿನಿ ವಿಧಾನಸೌಧದತ್ತ ಸಾಗಿದರು. ಈ ವೇಳೆ ಕವಿತಾ ಪರ ಘೋಷಣೆ ಮೊಳಗಿಸಿದ ಅವರು ಪಟ್ಟಣದ ಅಭಿವೃದ್ಧಿಗೆ ಶ್ರಮಿಸುತ್ತಿದ್ದವರನ್ನು ಪಟ್ಟಭದ್ರ ಹಿತಾಸಕ್ತಿಗಳು ಬೇರೆಡೆ ವರ್ಗಾವಣೆ ಮಾಡಲು ಕುತಂತ್ರ ನಡೆಸಿವೆ ಎಂದು ಆರೋಪಿಸಿದ್ರು.

ಇಂಜಿನಿಯರ್ ಅವರಿಂದಲೇ ಅನುಕೂಲ ಪಡೆದ ಕೆಲವರು ರಾಜಕೀಯ ಕುಮ್ಮಕ್ಕು ನೀಡಿ ಅವರ ವರ್ಗಾವಣೆಗೆ ಕೈ ಹಾಕಿದ್ದು ನಾಚಿಗೇಡಿನ ಸಂಗತಿ. ಪಟ್ಟಣದಲ್ಲಿ ಉತ್ತಮವಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕವಿತಾರ ವರ್ಗಾವಣೆಯನ್ನು ಸರ್ಕಾರ ರದ್ದು ಪಡಿಸಬೇಕು ಎಂದು ಆಗ್ರಹಿಸಿದರು.

Intro:ಹಾಸನ : ಅರಕಲಗೂಡು ಪಪಂ ಕಿರಿಯ ಇಂಜಿನಿಯರ್ ಕೆ.ಆರ್. ಕವಿತಾಅವರ ವರ್ಗಾವಣೆ ಸಂಬಂಧ ಪರ ಮತ್ತು ವಿರೋಧ ವ್ಯಕ್ತಪಡಿಸಿ ಮಂಗಳವಾರ ಎರಡು ಗುಂಪುಗಳು ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿದವು.

ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿದ ಗುಂಪುಗಳು ಮಿನಿ ವಿಧಾನಸೌಧದತ್ತ ಮುಂದೆ ಘೋಷಣೆ ಕೂಗಿದರು.

ಇಂಜಿನಿಯರ್ ಕವಿತಾ ಅವರ ವರ್ಗಾವಣೆ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಕವಿತಾ ಪರ ಘೋಷಣೆ ಕೂಗಿದ ಸಾರ್ವಜನಿಕರು, ಪಟ್ಟಣದ ಅಭಿವೃದ್ಧಿಗೆ ಶ್ರಮಿಸುತ್ತಿದ್ದ ಇಂಜಿನಿಯರ್ ಕೆ.ಆರ್. ಕವಿತಾ ಅವರನ್ನು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಬೇರೆಡೆಗೆ ವರ್ಗಾವಣೆ ಮಾಡಲು ಕುತಂತ್ರ ನಡೆಸಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಹುನ್ನಾರ ನಡೆಸಿದ್ದಾರೆ. ಇಂಜಿನಿಯರ್ ಅವರಿಂದಲೇ ಅನುಕೂಲ ಪಡೆದ ಕೆಲವರು ರಾಜಕೀಯಕುಮ್ಮಕ್ಕು ನೀಡಿ ಅವರ ವರ್ಗಾವಣೆಗೆ ಕೈ ಹಾಕಿದ್ದು ನಾಚಿಗೇಡಿನ ಸಂಗತಿ. ಪಟ್ಟಣದಲ್ಲಿ ಉತ್ತಮವಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕವಿತಾ ಅವರ ವರ್ಗಾವಣೆಯನ್ನು ಸರ್ಕಾರ ರದ್ದು ಪಡಿಸಬೇಕು ಎಂದು ಪ್ರತಿಭಟನಾನಿರತರು ಆಗ್ರಹಿಸಿದರು.

ಮುಖಂಡರಾದ ಬಾಣದಹಳ್ಳಿ ಗಣೇಶ್, ನಂದಕುಮಾರ್, ಎ.ಎಂ. ರಘು, ಮಧು, ಪ್ರವೀಣ್ ಮಂಜು ಮುಂತಾದವರು ಪಾಲ್ಗೊಂಡಿದ್ದರು.

ಸರ್ಕಾರಿ ಅಧಿಕಾರಿಗಳ ವರ್ಗಾವಣೆ ಸಹಜ, ಇಂಜಿನಿಯರ್ ಕವಿತಾ ಇಲ್ಲಿ ಹಲವಾರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದು ಅವರ ವರ್ಗಾವಣೆ ಸಮಂಜಸವಾಗಿದೆ. ವರ್ಗಾವಣೆ ವಿಚಾರಕ್ಕೆ ರಾಜಕೀಯ ಬಣ್ಣ ಕಲ್ಪಿಸಿ ಜಾತಿಯ ವಿಷಬೀಜ ಬಿತ್ತುತ್ತಿರುವುದು ತರವಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಮುಖಂಡರಾದ ಪ್ರಸನ್ನಕುಮಾರ್, ಪ್ರದೀಪ್‌ಕುಮಾರ್, ಶಶಿಕುಮಾರ್, ಚಿಕ್ಕ ಹೊನ್ನೇಗೌಡ, ಹೊನ್ನರಸೇಗೌಡ, ಬೀರಪ್ಪ, ಕಿಶೋರ್ ಮುಂತಾದವರು ಪಾಲ್ಗೊಂಡಿದ್ದರು.

ಎರಡು ಗುಂಪುಗಳ ಮುಖಂಡರು ತಹಸೀಲ್ದಾರ್ ಶಿವರಾಜ್ ಅವರಿಗೆ ಮನವಿ ಸಲ್ಲಿಸಿದರು. ಸಿಪಿಐ ದೀಪಕ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂಧೊ ಬಸ್ತ್‌ಏರ್ಪಡಿಸಲಾಗಿತ್ತು.Body:- ಅರಕೆರೆ ಮೋಹನಕುಮಾರ, ಈಟಿವಿ ಭಾರತ, ಹಾಸನ.Conclusion:೦
ETV Bharat Logo

Copyright © 2024 Ushodaya Enterprises Pvt. Ltd., All Rights Reserved.