ಹಾಸನ : ಜಿಲ್ಲೆಯಲ್ಲಿ ಮತ್ತೆ ಮೂರು ಹೊಸ ಕೋವಿಡ್-19 ಪ್ರಕರಣ ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 33ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ತಿಳಿಸಿದ್ದಾರೆ.
ಹೊಸದಾಗಿ ಪತ್ತೆಯಾದ ಪ್ರಕರಣಗಳೂ ಸಹ ಮುಂಬೈ ಮೂಲದಿಂದಲೇ ಬಂದಿವೆ. ಮಹಾರಾಷ್ಟ್ರದಿಂದ ಆಗಮಿಸಿದವರನ್ನು ಗಡಿಯಲ್ಲಿಯೇ ಗುರುತಿಸಿ ಕ್ವಾರಂಟೈನ್‍ನಲ್ಲಿ ಇರಿಸಲಾಗಿದ್ದು, ಅವರಲ್ಲಿ ಹೊಳೆ ನರಸೀಪುರ ತಾಲೂಕಿನ ಒಂದೇ ಕುಟುಂಬದ ಮೂವರಿಗೆ ಸೋಂಕು ಧೃಡಪಟ್ಟಿದೆ ಎಂದರು.
P, 1310 - ಹದಿನೇಳು ವರ್ಷದ ಮಹಿಳೆ, P, 1311 - ಹದಿಮೂರು ವರ್ಷದ ಬಾಲಕ , P 1312 - ಮೂವತ್ತೆಂಟು ವರ್ಷದ ಮಹಿಳೆ, ಎಲ್ಲರೂ ಹೊಳೆನರಸೀಪುರ ತಾಲೂಕಿನ ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದು, ಮುಂಬೈನಿಂದ ಒಟ್ಟಿಗೆ ಇನ್ನೋವಾ ವಾಹನದಲ್ಲಿ ಬಂದಿದ್ದಾರೆ. ಇವರೊಂದಿಗೆ ಪ್ರಯಾಣ ಮಾಡಿದ ಮತ್ತೊಬ್ಬರ ವರದಿ ನಿರೀಕ್ಷಿಸಲಾಗಿದೆ ಎಂದು ತಿಳಿಸಿದರು. ಮಹಾರಾಷ್ಟ್ರದಿಂದ ವಿವಿಧ ವಾಹನಗಳಲ್ಲಿ ಸೇವಾ ಸಿಂಧು ಆ್ಯಪ್ ಮೂಲಕ ಅನುಮತಿ ಪಡೆದು ಜಿಲ್ಲೆಗೆ ಅಗಮಿಸಿದವರನ್ನು ಪತ್ತೆಮಾಡಿ ಕ್ವಾರಂಟೈನ್ ಮಾಡಲಾಗಿದೆ. ಈವರೆಗೆ ಹೊರದೇಶ ಹಾಗೂ ಹೊರ ರಾಜ್ಯದಿಂದ ಆಗಮಿಸಿದ 2512 ಮಂದಿ ಹಾಗೂ 109 ವಿದೇಶಿಗರು, ಶೀತ ,ಜ್ವರ ಉಸಿರಾಟದ ಸಮಸ್ಯೆ ಇದ್ದ 1686 ಮಂದಿ ಹಾಗೂ 572 ಇತರೆ ಸೇರಿದಂತೆ ಈವರೆಗೆ 4,940 ಮಂದಿಯನ್ನು ಕೋವಿಡ್ ತಪಾಸಣೆಗೆ ಒಳಪಡಿಸಲಾಗಿದೆ ಎಂದರು.
ಇನ್ನೂ 366 ಮಂದಿ ಶಂಕಿತರ ಪರೀಕ್ಷಾ ವರದಿ ಬಾಕಿ ಇದ್ದು, ಸೋಂಕಿತರ ಸಂಖ್ಯೆ ಹೆಚ್ಚುವ ನಿರೀಕ್ಷೆ ಇದೆ. ಎಲ್ಲ ಸೋಂಕಿತರನ್ನು ಹಾಸನದ ಕೋವಿಡ್ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದು, ಎಲ್ಲರೂ ಆರೋಗ್ಯವಾಗಿದ್ದಾರೆ ಎಂದು ತಿಳಿಸಿದ್ದಾರೆ.
ಹಾಸನದಲ್ಲಿ ಮತ್ತೆ ಮೂರು ಪಾಸಿಟಿವ್ ಈಗ 57 ಮಂದಿ ಆಸ್ಪತ್ರೆ ಕ್ವಾರಂಟೈನ್‍ನಲ್ಲಿದ್ದು 956 ಮಂದಿಯನ್ನು ವಿವಿಧ ತಾಲೂಕುಗಳ ಸಾಂಸ್ಥಿಕ ಕ್ವಾರಂಟೈನ್‍ನಲ್ಲಿ ಇರಿಸಲಾಗಿದೆ. 87 ಮಂದಿ ಗೃಹ ಕ್ವಾರಂಟೈನ್‍ನಲ್ಲಿ ಇದ್ದು ,492 ಮಂದಿ 28 ದಿನಗಳ ಕ್ವಾರಂಟೈನ್ ಅವಧಿ ಮುಗಿಸಿದ್ದಾರೆ. 1439 ಮಂದಿಯನ್ನು ಆಸ್ಪತ್ರೆಯಲ್ಲಿ ತಪಾಸಣೆ ಮಾಡಿ ಬಿಡುಗಡೆ ಮಾಡಲಾಗಿದೆ ಎಂದು ವಿವರಿಸಿದರು.