ಹಾಸನ: ಜಿಲ್ಲೆಯಲ್ಲಿ ನೆತ್ತರು ಹರಿದಿದ್ದು ಜನರು ಬೆಚ್ಚಿಬಿದ್ದಿದ್ದಾರೆ. ಹಣಕಾಸು ವಿಚಾರವಾಗಿ ನಡೆದ ಜಗಳ ತಾರಕಕ್ಕೇರಿ ವ್ಯಕ್ತಿಯೊಬ್ಬರಿಗೆ ಚೂರಿಯಿಂದ ಇರಿದಿರುವ ಘಟನೆ ಜಿಲ್ಲೆಯ ಸಕಲೇಶಪುರದಲ್ಲಿ ನಡೆದಿದೆ.
ಬಾಳೆಗದ್ದೆ ನಿವಾಸಿ ವಾಸಿಂ ಪಾಷಾ ಹಲ್ಲೆಗೊಳಗಾದ ವ್ಯಕ್ತಿ. ವಾಸಿಂ ಪಾಷಾನಿಂದ ಸಕಲೇಶಪುರದ ಮಾಜಿ ಪುರಸಭಾ ಅಧ್ಯಕ್ಷ ಸೈಯದ್ ಮುಫಿಜ್ 50 ಸಾವಿರ ಹಣ ಪಡೆದಿದ್ದ. ಪಡೆದ ಹಣವನ್ನು ವಾಪಸ್ ನೀಡದೆ ಸೈಯದ್ ಸತಾಯಿಸುತ್ತಿದ್ದ. ಜೊತೆಗೆ ಶುಕ್ರವಾರ ಹಣ ಕೇಳಲು ಫೋನ್ ಮಾಡಿದಾಗ ಅವಾಚ್ಯ ಶಬ್ದಗಳಿಂದ ಬೈದು ನಿಂದಿಸಿದ್ದ ಎನ್ನಲಾಗ್ತಿದೆ.
ಇದನ್ನು ಪ್ರಶ್ನಿಸಿದ್ದ ವಾಸಿಂ ಮೇಲೆ ನಿನ್ನೆ ಸಂಜೆ ಸೈಯದ್ ಬೆಂಬಲಿಗರು ಹಲ್ಲೆ ನಡೆಸಿ ಚಾಕುವಿನಿಂದ ಇರಿದು ತಪ್ಪಿಸಿಕೊಳ್ಳಲು ಮುಂದಾದಾಗ ಸೈಯದ್ ಮುಫಿಜ್, ಹೀರಾ ಹಾಗೂ ಸಲ್ಮಾನ್ ಎಂಬ ಮೂರು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ಪ್ರಕರಣದ ಪ್ರಕರಣದ ಸೂತ್ರಧಾರ ಮಲ್ನಾಡ್ ಮೆಹಬೂಬ್ ತಲೆಮರೆಸಿಕೊಂಡಿದ್ದಾನೆ. ಕಳೆದ ಎರಡು ವರ್ಷಗಳ ಹಿಂದಿನ ಚುನಾವಣಾ ಸಂದರ್ಭದಲ್ಲಿ ಇವರುಗಳನ್ನು ರೌಡಿಶೀಟರ್ಗಳೆಂದು ಪರಿಗಣಿಸಿ ಜಿಲ್ಲೆಯಿಂದ ಗಡಿಪಾರು ಮಾಡಲಾಗಿತ್ತು. ಕೆಲವು ಷರತ್ತುಗಳೊಂದಿಗೆ ಜಾಮೀನಿನ ಮೇಲೆ ಹೊರಬಂದಿದ್ದ ಇವರುಗಳು ಮತ್ತೆ ತಮ್ಮ ಅಟ್ಟಹಾಸ ಮುಂದುವರಿಸಿದ್ದಾರೆ. ಈ ಸಂಬಂಧ ಸಕಲೇಶಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನು ಓದಿ: ಬೆಂಗಳೂರಲ್ಲಿ ಭೀಕರ ಅಪಘಾತ: ನಿರ್ದೇಶಕ ಸೂರ್ಯೋದಯ ಪುತ್ರ ವಿಧಿವಶ