ETV Bharat / state

ವಿಚ್ಚೇದನ ಬಯಸಿ ನ್ಯಾಯಕ್ಕಾಗಿ ಮೊರೆಯಿಟ್ಟ ಮಹಿಳೆಯನ್ನು ಮಂಚಕ್ಕೆ ಕರೆದ ವಕೀಲ! - ಹೇಮಂತ್ ಕುಮಾರ್ ಎಂಬ ವಕೀಲ

ದಾಂಪತ್ಯದಲ್ಲಿ ವಿರಸ ಮೂಡಿ ಗಂಡನಿಂದ ವಿಚ್ಛೇದನ ಬಯಸಿದ ಮಹಿಳೆ ವಕೀಲರೊಬ್ಬರ ಬಳಿ ಹೋಗಿದ್ದಾಳೆ. ಈ ವೇಳೆ ಆತ ತನ್ನೊಂದಿಗೆ ಅಸಭ್ಯವಾಗಿ ವರ್ತಿಸಿದ್ದಲ್ಲದೆ ಮಂಚಕ್ಕೆ ಕರೆದಿರುವ ಬಗ್ಗೆ ಸಂತ್ರಸ್ತ ಮಹಿಳೆ ಇದೀಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.

ನ್ಯಾಯಕ್ಕಾಗಿ ಹೋದವಳನ್ನು ಮಂಚಕ್ಕೆ ಕರೆದ ವಕೀಲ
author img

By

Published : Nov 10, 2019, 9:29 PM IST

ಹಾಸನ: ದಾಂಪತ್ಯದಲ್ಲಿ ವಿರಸ ಮೂಡಿ ಪತಿಯಿಂದ ವಿಚ್ಛೇದನ ಬಯಸಿದ ಮಹಿಳೆಯನ್ನು ವಕೀಲ ಮಂಚಕ್ಕೆ ಕರೆದ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ಪಟ್ಟಣದಲ್ಲಿ ನಡೆದಿದೆ.

ಹೇಮಂತ್ ಕುಮಾರ್ ಎಂಬ ವಕೀಲನ ಮೇಲೆ ಈಗ ಓರ್ವ ಮಹಿಳೆ ಅತ್ಯಾಚಾರ ಮತ್ತು ಬ್ಲಾಕ್ ಮೇಲ್ ವಿಚಾರವಾಗಿ ಸಕಲೇಶಪುರ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.

ಸಂಸಾರದಲ್ಲಿ ಗಂಡ-ಹೆಂಡಿರ ನಡುವೆ ವಿರಸ ಮೂಡಿ ವಿಚ್ಛೇದನಕ್ಕಾಗಿ ವಕೀಲ ಹೇಮಂತ್ ಬಳಿಗೆ ಕಳೆದ ಆರು ತಿಂಗಳ ಹಿಂದೆ ಯುವತಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಳು. ಎರಡನೇ ಬಾರಿಗೆ ವಿಚ್ಛೇದನ ಪಡೆಯಲು ಬಯಸಿರುವ ಈಕೆಯನ್ನು ಹೇಗಾದರೂ ಮಾಡಿ ನನ್ನವಳನ್ನಾಗಿ ಮಾಡಿಕೊಳ್ಳಬೇಕೆಂಬ ದುರಾಸೆಯಿಂದ ಹೇಮಂತ್ ಕೇಸಿನ ವಿಚಾರವನ್ನು ನೆಪ ಮಾಡಿಕೊಂಡು ಪದೇಪದೇ ಆಕೆಗೆ ಫೋನ್ ಮಾಡುವುದು, ವಾಟ್ಸಪ್​ನಲ್ಲಿ ಮೆಸೇಜ್ ಮತ್ತು ವಿಡಿಯೋ ಕಾಲ್ ಮಾಡಿ ಆಕೆಗೆ ಹತ್ತಿರವಾಗಲು ಪ್ರಯತ್ನಿಸಿದ್ದಾನೆ. ವಿಡಿಯೋ ಕಾಲ್ ಮೂಲಕ ಆತ ಮನದಾಳದ ಬಯಕೆಯನ್ನು ಬಿಚ್ಚಿಟ್ಟಿದ್ದನಂತೆ.

hassan lawyer story
ಮಹಿಳೆ ನೀಡಿದ ದೂರಿನ ಪ್ರತಿ

ಆದರೆ ಆಕೆ ಯಾವುದಕ್ಕೂ ಸ್ಪಂದಿಸದ ಹಿನ್ನೆಲೆಯಲ್ಲಿ ಅಕ್ಟೋಬರ್ 6ರಂದು ಕರೆಮಾಡಿ ಕೇಸಿನ ಸಂಬಂಧ ಸ್ವಲ್ಪ ಮಾತನಾಡಬೇಕು ಕಚೇರಿಗೆ ಬನ್ನಿ ಅಂತ ಕರೆಸಿಕೊಂಡಿದ್ದಾನೆ. ಕರೆಸಿಕೊಂಡವನು ಏಕಾಏಕಿ ಆಕೆಯ ಮೇಲೆ ಅತ್ಯಾಚಾರ ಮಾಡಲು ಪ್ರಯತ್ನಪಟ್ಟಿದ್ದಾನಂತೆ. ಬಳಿಕ ಆಕೆ ಕೂಗಿಕೊಂಡಾಗ, ನೋಡು ನೀನು ಒಪ್ಪಿದರೆ ಇಬ್ಬರು ಸಂತೋಷದಿಂದ ಸುಖ ಅನುಭವಿಸಬಹುದು. ಇಲ್ಲವಾದರೆ ನಿನ್ನ ಮೇಲೆ ಆಪಾದನೆ ಬರುವಂತೆ ನ್ಯಾಯಾಲಯಲ್ಲಿ ನಾನೇ ಪ್ರಕರಣ ದಾಖಲಿಸುತ್ತೇನೆ ಅಂತ ಬೆದರಿಕೆಯೊಡ್ಡಿದ್ದಾನಂತೆ. ಅಷ್ಟೇ ಅಲ್ಲದೇ ಆಕೆಯ ಮುಂದೆಯೇ ಹೇಮಂತ್ ವಿವಸ್ತ್ರನಾಗೋ ಮೂಲಕ ಅಶ್ಲೀಲವಾಗಿ ನಡೆದುಕೊಂಡಿದ್ದಾನಂತೆ.

ಕಚೇರಿಯಲ್ಲಿ ಅವನ ಅಶ್ಲೀಲತೆ ಮತ್ತು ಆಕೆಯೊಂದಿಗೆ ನಡೆದುಕೊಂಡ ರೀತಿಯನ್ನು ಸ್ವತಃ ಚಿತ್ರೀಕರಿಸಿ ಕಚೇರಿಯಲ್ಲಿ ನಡೆದ ಈ ಪ್ರಕರಣವನ್ನು ಯಾರಿಗಾದ್ರೂ ಹೇಳಿದ್ರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ನಂತೆ. ಜೊತೆಗೆ ನವಂಬರ್ 4ರಂದು ಕೂಡ ನಗರದ ರಸ್ತೆಯೊಂದರಲ್ಲಿ ಆಕೆಯೊಂದಿಗೆ ಅಸಭ್ಯವಾಗಿ ನಡೆದುಕೊಂಡು ಕಿರುಕುಳ ನೀಡುತ್ತಿದ್ದಾನೆ ಅಂತ ಆಕೆ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.

ಈ ಸಂಬಂಧ ಪೊಲೀಸರು ದೂರು ದಾಖಲಿಸಿಕೊಂಡು, ತನಿಖೆ ಮುಂದುವರಿಸಿದ್ದಾರೆ.

Intro:Body:

ಹಾಸನ: ಉಂಡ ಎಲೆಯನ್ನು ಎತ್ತೋ ಗುಂಡ ಎಂದರೆ ನೀನೇ ನನ್ನ ಗಂಡ ಎಂದನಂತೆ.  ಆಗಾಗಿದೆ ಈಕೆಯ ಪರಿಸ್ಥಿತಿ. 

ಜೀವನದಲ್ಲಿ ಜಿಗುಪ್ಸೆ ಹೊಂದಿ ಪತಿಯಿಂದ ವಿಚ್ಛೇದನ ಬಯಸಿ ವಿವಾಹಿತ ಮಹಿಳೆ ವಕೀಲನೋರ್ವನ ಬಳಿ ನ್ಯಾಯಾಕ್ಕಾಗಿ ಹೋದ್ರೆ ಆಕೆಯ ಶೀಲವನ್ನೇ ಅಪಹರಣ ಮಾಡಲು ಹೋದ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ಪಟ್ಟಣದಲ್ಲಿ ನಡೆದಿದೆ. 

ಹೇಮಂತ್ ಕುಮಾರ್ ಎಂಬ ವಕೀಲನ ಮೇಲೆ ಈಗ ಓರ್ವ ಮಹಿಳೆ ಅತ್ಯಾಚಾರ ಮತ್ತು ಬ್ಲಾಕ್ ಮೇಲ್ ವಿಚಾರವಾಗಿ ಸಕಲೇಶಪುರ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. 

ದೇವ ಮಂದಿರದಲ್ಲಿ ದೇವರು ಕಾಣಲಿಲ್ಲ ನ್ಯಾಯ ಮಂದಿರದಲ್ಲಿ ನ್ಯಾಯವು ಸಿಗಲೇ ಇಲ್ಲ ಎಂಬಂತೆ,  ಸಂಸಾರದಲ್ಲಿ ಗಂಡ-ಹೆಂಡಿರ ನಡುವೆ ವಿರಸ ಮೂಡಿ ವಿಚ್ಛೇದನಕ್ಕಾಗಿ ವಕೀಲ ಹೇಮಂತ್ ಬಳಿಗೆ ಕಳೆದ ಆರು ತಿಂಗಳ ಹಿಂದೆ ಹೋಗಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಳು. 

ನೋಡಕ್ಕೆ ಸ್ವಲ್ಪ ಸುಂದರಿಯಾಗಿದ್ದು, ಎರಡನೇ ಬಾರಿಗೆ ವಿಚ್ಛೇದನ ಪಡೆಯಲು ಬಯಸಿರುವ ಇವಳನ್ನ  ಹೇಗಾದರೂ ಮಾಡಿ ನನ್ನವಳಾಗಿ ಮಾಡಿಕೊಳ್ಳಬೇಕೆಂಬ ದುರಾಸೆಯಿಂದ ಹೇಮಂತ್ ಕೇಸಿನ ವಿಚಾರವನ್ನು ನೆಪಮಾಡಿಕೊಂಡು ಪದೇಪದೇ ಆಕೆಗೆ ಫೋನ್ ಮಾಡುವುದು,  ವಾಟ್ಸಪ್ ನಲ್ಲಿ ಮೆಸೇಜ್ ಮಾಡುವುದು ಮತ್ತು ವಿಡಿಯೋ ಕಾಲ್ ಮಾಡಿ ಅವನಿಗೆ ಹತ್ತಿರವಾಗಲು ಪ್ರಯತ್ನಿಸಿದ್ದ. ವಿಡಿಯೋ ಕಾಲ್ ಮೂಲಕ ಆತ ಮನದಾಳದ ಬಯಕೆಯನ್ನ ಬಿಚ್ಚಿಟ್ಟಿದ್ದನಂತೆ. 

ಆದರೆ ಆಕೆ ಯಾವುದಕ್ಕೂ ಸ್ಪಂದಿಸದ ಹಿನ್ನೆಲೆಯಲ್ಲಿ ಅಕ್ಟೋಬರ್ 6ರಂದು ಕರೆಮಾಡಿ ಕೇಸಿನ ಸಂಬಂಧ ಸ್ವಲ್ಪ ಮಾತನಾಡಬೇಕು ಕಛೇರಿಗೆ ಬನ್ನಿ ಅಂತ ಕರೆಸಿಕೊಂಡಿದ್ದಾನೆ. 

ಕರೆಸಿಕೊಂಡವರು ಏಕಾಏಕಿ ಆಕೆಯ ಮೇಲೆ ಅತ್ಯಾಚಾರ ಮಾಡಲು ಪ್ರಯತ್ನಪಟ್ಟಿದ್ದು ಆಕೆ ಕೂಗಿಕೊಂಡಾಗ,  ನೋಡು ನೀನು ಒಪ್ಪಿದರೆ ಇಬ್ಬರು ಸಂತೋಷದಿಂದ ಸುಖವನ್ನು ಅನುಭವಿಸಬಹುದು ಇಲ್ಲವಾದರೆ ನಿನ್ನ ಮೇಲೆ ಆಪಾದನೆ ಬರುವಂತೆ ನ್ಯಾಯಾಲಯಲ್ಲಿ ನಾನೇ ನಿನ್ನ ಮೇಲೆ ಪ್ರಕರಣ ದಾಖಲಿಸುತ್ತೇನೆ ಅಂತ ಬೆದರಿಕೆಯೊಡ್ಡಿದ್ದಾನೆ. ಅಷ್ಟೇ ಅಲ್ಲ ನಿನಗಿಂತ ಹಲವು ಸುಂದರಿಯರು ನನ್ನ ಎಲ್ಲ ಬಯಕೆಗಳನ್ನು ಈಡೇರಿಸಿದ್ದಾರೆ. ಅಂತ ಆಕೆಯ ಮುಂದೆಯೇ ಹೇಮಂತ್ ವಿವಸ್ತ್ರನಾಗೋ ಮೂಲಕ ಅಶ್ಲೀಲವಾಗಿ ನಡೆದುಕೊಂಡಿದ್ದಾನೆ. 

ಕಚೇರಿಯಲ್ಲಿ ಅವನ ಅಶ್ಲೀಲತೆ ಮತ್ತು ಆಕೆಯೊಂದಿಗೆ ನಡೆದುಕೊಂಡ ರೀತಿಯನ್ನು ಸ್ವತಃ ಚಿತ್ರೀಕರಿಸಿ ಕಛೇರಿಯಲ್ಲಿ ನಡೆದ ಈ ಪ್ರಕರಣವನ್ನು ಯಾರಿಗಾದ್ರೂ ಹೇಳಿದ್ರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ನಂತೆ.  ಜೊತೆಗೆ ನವಂಬರ್ 4ರಂದು ಕೂಡ ನಗರದ ರಸ್ತೆಯೊಂದರಲ್ಲಿ ಆಕೆಯೊಂದಿಗೆ ಅಸಭ್ಯವಾಗಿ ನಡೆದುಕೊಂಡು ಕಿರುಕುಳ ನೀಡುತ್ತಿದ್ದಾನೆ ಅಂತ ಆಕೆ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. 

ಕಷ್ಟ ಬಂದಾಗ ನಾವು ದೇವರ ಬಳಿ ಹೋಗ್ತಿವಿ. ಜೀವನದಲ್ಲಿ ಸಮಸ್ಯೆ ಬಂದರೆ ಅದನ್ನು ಪರಿಹಾರ ಮಾಡಿಕೊಳ್ಳುವುದಕ್ಕೆ ನ್ಯಾಯಾಲಯದ ಮುಂದೆ ಹೋಗುತ್ತೇವೆ. ಈಕೆ ಮಾಡಿದ್ದು ಅದೇ ತನ್ನ ಪತಿಯಿಂದ ವಿಚ್ಚೇಧನ ಪಡೆಯಲು ವಕೀಲರ ಬಳಿ ಹೋಗಿ ಮತ್ತೊಂದು ಸಮಸ್ಯೆಯ ಸುಳಿಯಲ್ಲಿ ಸಿಲುಕಿದ್ದಾಳೆ. ನ್ಯಾಯಕೊಡಿಸಬೇಕಾದ ನ್ಯಾಯವಾದಿಯೇ ಈಗ ಕಚಕಟೆಯಲ್ಲಿ ನಿಂತಿರೋದು ದುರಂತವೇ ಸರಿ. . . . 

ಈ ಸಂಬಂಧ ಪೊಲೀಸರು ದೂರು ದಾಖಲಿಸಿಕೊಂಡು ಆತನ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ. 

*ಸುನೀಲ್ ಕುಂಭೇನಹಳ್ಳಿ, ಈಟಿವಿ ನ್ಯೂಸ್, ಹಾಸನ*.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.