ಅರಕಲಗೂಡು: ಭಾರತೀಯ ಸೇನೆಯಿಂದ ನಿವೃತ್ತಿ ಪಡೆದು ಗ್ರಾಮಕ್ಕೆ ಬಂದ ಯೋಧರೊಬ್ಬರಿಗೆ ಗ್ರಾಮಸ್ಥರು ಅದ್ಧೂರಿ ಮೆರವಣಿಗೆ ಮಾಡಿ ಸ್ವಾಗತಿಸಿದ್ದಾರೆ.
ಭಾರತೀಯ ಸೇನೆಯಲ್ಲಿ ಸುಮಾರು 19 ವರ್ಷ ಸೇವೆ ಸಲ್ಲಿಸಿರುವ ಮೂರ್ತಿಯವರು ಸದ್ಯ ನಿವೃತ್ತಿ ಪಡೆದಿದ್ದಾರೆ. ರಾಜಸ್ಥಾನದಲ್ಲಿ ಇವರು ಸೇವೆ ಸಲ್ಲಿಸುತ್ತಿದ್ದರು. ಹೀಗಾಗಿ ಹಲವು ವರ್ಷಗಳ ಬಳಿಕ ಗ್ರಾಮಕ್ಕೆ ಆಗಮಿಸಿರುವ ಹೆಮ್ಮೆಯ ವೀರ ಯೋಧ ಮೂರ್ತಿಯವರನ್ನು ಸನ್ಮಾನ ಹಾಗೂ ಮೆರವಣಿಗೆ ಮೂಲಕ ಗ್ರಾಮಸ್ಥರು ಅದ್ಧೂರಿಯಾಗಿ ಸ್ವಾಗತ ಮಾಡಿದರು.
ಬುಧವಾರ ಗ್ರಾಮಕ್ಕೆ ಬಂದ ಯೋಧನಿಗೆ ಗ್ರಾಮಸ್ಥರು ಸನ್ಮಾನ ಮಾಡಿದ್ದಾರೆ. ಇದೇ ವೇಳೆ ತ್ರಿವರ್ಣ ಧ್ವಜ ಹಿಡಿದು ಜೈಹಿಂದ್ ಘೋಷಣೆ ಕೂಗಿದ ಗ್ರಾಮಸ್ಥರ ಪ್ರೀತಿಗೆ ಯೋಧ ಧನ್ಯವಾದ ಹೇಳಿದ್ದಾರೆ.