ಹೊಳೆನರಸೀಪುರ: ಜೀವನದಲ್ಲಿ ಜುಗುಪ್ಸೆ ಹೊಂದಿದ ಯುವಕನೊಬ್ಬ ಚಲಿಸುತ್ತಿದ್ದ ರೈಲಿಗೆ ತಲೆಯೊಡ್ಡಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ ನಡೆದಿದೆ.
ಸದಾ (25) ಆತ್ಮಹತ್ಯೆ ಮಾಡಿಕೊಂಡ ಯುವಕ. ಹೊಳೆನರಸೀಪುರ ತಾಲೂಕಿನ ಪೆದ್ದನಹಳ್ಳಿ ರೈಲ್ವೆಗೇಟ್ ಬಳಿ ಘಟನೆ ನಡೆದಿದೆ.
ಆತ್ಮಹತ್ಯೆಗೂ ಮುನ್ನ ರೈಲ್ವೆ ಹಳಿಯ ಮುಂಬಾಗ ಬೈಕ್ ನಿಲ್ಲಿಸಿ ಸುಮಾರು ಒಂದು ಗಂಟೆಗಳ ಕಾಲ ಕುಳಿತಿದ್ದ ಯುವಕ, ರೈಲು ಬರುತ್ತಿದ್ದಂತೆ ಹಳಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಓದಿ: ಅರಣ್ಯ ಇಲಾಖೆ ಭರ್ಜರಿ ಕಾರ್ಯಾಚರಣೆ: ಶ್ರೀಗಂಧ ಸಾಗಾಟಗಾರರ ಬಂಧನ
ಚಿಕ್ಕಮಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಸದಾ ಮನೆಗೆ ಹೋಗುತ್ತೇನೆ ಎಂದು ಬಂದಿದ್ದಾನೆ. ಮಾನಸಿಕವಾಗಿ ನೊಂದಿದ್ದ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದು,ಮೃತನ ರುಂಡ-ಮುಂಡ ಬೇರೆ ಬೇರೆಯಾಗಿದೆ.
ಹೊಳೆನರಸೀಪುರ ಪೊಲೀಸರು ಸ್ಥಳಕ್ಕಾಗಮಿಸಿ ಬೇರೆ ಬೇರೆಯಾಗಿರುವ ರುಂಡ -ಮುಂಡಗಳನ್ನು ಸಂಗ್ರಹಿಸಿ ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಟ್ಟಿದ್ದಾರೆ. ಈ ಸಂಬಂಧ ಹೊಳೆನರಸೀಪುರ ಆರ್ಪಿಎಫ್ ಠಾಣೆಯಲ್ಲಿ ಪ್ರಕರಣ ದಾಖಲಿಸಿರುವ ಸಿಬ್ಬಂದಿ ತನಿಖೆ ಮುಂದುವರಿಸಿದ್ದಾರೆ.