ಹಾಸನ; ರಾಜ್ಯದ ಆಡಳಿತ ವಿಚಾರದಲ್ಲಿ ಮಾಧ್ಯಮದ ಆಕರ್ಷಣೆಗಾಗಿ ಕೋಡಿ ಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಸುಮ್ಮನೆ ಮನಸ್ಸಿಗೆ ಬಂದಿದನ್ನು ಮಾತನಾಡಿದ್ದಾರೆ ಎಂದು ಕ್ಷೇತ್ರದ ಶಾಸಕ ಪ್ರೀತಮ್ ಜೆ. ಗೌಡ ಬೇಸರ ವ್ಯಕ್ತಪಡಿಸಿದ್ದಾರೆ.
ನಗರದ ಗಂಧದ ಕೋಠಿ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮುಂದಿನ 15 ವರ್ಷಗಳ ಕಾಲ ರಾಷ್ಟ್ರದಲ್ಲಿ ಬಿಜೆಪಿಯೇ ಆಡಳಿತ ಮಾಡುತ್ತದೆ ಎಂದು ನಾನು ಭವಿಷ್ಯ ನುಡಿದಿದ್ದೆಲ್ಲಾ ಹಿಂದೆ ಸತ್ಯವಾಗಿದೆ. ಹಾಗೇ ಈ ಬಾರಿ ಬಿಜೆಪಿ ಬರುತ್ತದೆ . ನಾನು ಗೆಲ್ಲುತ್ತೇನೆ ಎಂದು ಹೇಳಿದ್ದೇ, ಅದು ಕೂಡಾ ಈಗ ಸತ್ಯವಾಗಿದೆ. ಮುಂದೆ ಸರ್ಕಾರ ನಮ್ಮದೆ ಬರುತ್ತದೆ ಎಂದು ಹೇಳಿದ್ದೇನೆ. ನನ್ನ ಭವಿಷ್ಯವಾಣಿಯನ್ನು ಪ್ರಚಾರ ಮಾಡಿ ಎಂದಿದ್ದಾರೆ ಎಂದು ಪ್ರೀತಂ ಗೌಡ ಹೇಳಿದ್ದಾರೆ.
ಅವರು ಹಿಂದೆ ಮಳೆ ಬರುತ್ತಿದೆ ಎಂದಿದ್ದಾರೆಯೇ ಹೊರತು, ನಾಳೆ ಬರುತ್ತದೆ ಎಂದು ಯಾವ ಸ್ವಾಮೀಜಿ ಹೇಳಿರುವುದನ್ನು ನಾನು ಕೇಳಿಲ್ಲ ಅವರನ್ನು ನಂಬುವುದಿಲ್ಲ ಎಂದು ಹೇಳುವುದಿಲ್ಲ. ಇಲ್ಲಿಯವರೆಗೆ ಯಾವ ಕಡೆ ಗಾಳಿ ಬರುತ್ತದೆ ಆ ಕಡೆ ತೂರುವಂತಹ ಭವಿಷ್ಯವನ್ನು ಅವರು ಹೇಳಿರುವುದನ್ನು ಗಮನಿಸಿದ್ದೇವೆ. ಅವರ ಬಗ್ಗೆ ನನಗೆ ವೈಯಕ್ತಿಕವಾಗಿ ಗೌರವವಿದೆ. ಆದರೇ ರಾಜ್ಯದ ವಿಷಯದಲ್ಲಿ ಸುಮ್ಮನೆ ಮೀಡಿಯಾ ಆಕರ್ಷಣೆಗೆ ಮನಸ್ಸಿಗೆ ಬಂದಿರುವುದನ್ನು ಮಾತನಾಡಿದ್ದಾರೆ. ದೇವರು ಅವರಿಗೆ ಒಳ್ಳೆ ಬುದ್ದಿ ಕೊಡಲಿ ಎಂದು ವಿನಂತಿಸಿಕೊಂಡರು.
ಜನರ ಆರ್ಶಿರ್ವಾದದಿಂದ ಶಾಸಕನಾಗಿದ್ದೇನೆ. ಸಂದರ್ಭ ಬಂದಾಗ ಅವಕಾಶ ನನಗೆ ಸಿಕ್ಕಿದರೂ ಸಿಗಬಹುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಮಧ್ಯಂತರ ಚುನಾವಣೆಗೆ ಸಿದ್ದರಾಮಯ್ಯ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ತಿಂಗಳು ಲೆಕ್ಕ ಆದ್ರೆ 48 ರಿಂದ 50 ತಿಂಗಳಲ್ಲಿ ಬರಲಿದೆ. ವರ್ಷದ ಲೆಕ್ಕದಲ್ಲಿ ಆದ್ರೆ 4 ವರ್ಷದ ನಂತರ ಬರಲಿದೆ. ಕಾರ್ಯಕರ್ತರಲ್ಲಿ ಹುಮ್ಮಸ್ಸು ತರುವ ಉದ್ದೇಶದಿಂದ ಹೀಗೆ ಹೇಳಿರಬಹುದು .ನಾವೇನು 50 ವರ್ಷ ಅಧಿಕಾರಕ್ಕೆ ಅಂಟಿ ಕೂರಲ್ಲ. ಒಳ್ಳೆಯ ಕೆಲಸ ಮಾಡಿದ್ದರೆ ಖಂಡಿತ ಜನ ಹಾರೈಸುತ್ತಾರೆ ಎಂದರು.