ETV Bharat / state

ಅರಣ್ಯಾಧಿಕಾರಿ ಅರುಣ್ ವಿರುದ್ಧದ ತನಿಖೆ ಅಂತಿಮ ಘಟ್ಟಕ್ಕೆ ತಲುಪಿದೆ: ಅನುಪಮ

ಅರಣ್ಯಾಧಿಕಾರಿ ಅರುಣ್ ವಿರುದ್ಧದ ನಿಖೆ ಪೂರ್ಣಗೊಳ್ಳುತ್ತಿದ್ದು, ಇನ್ನೂ ಮೂರ್ನಾಲ್ಕು ದಿನಗಳಲ್ಲಿ ಅಂತಿಮ ಘಟ್ಟ ತಲುಪಲಿದೆ ಎಂದು ಸಾಮಾಜಿಕ ಅರಣ್ಯ ಜಿಲ್ಲಾ ಅಧಿಕಾರಿ ಅನುಪಮ ತಿಳಿಸಿದರು.

Social Forest Officer Anupama statement
ತಾಲ್ಲೂಕು ವಲಯ ಅರಣ್ಯಾಧಿಕಾರಿ ಕಛೇರಿ
author img

By

Published : Sep 5, 2020, 10:06 AM IST

ಅರಕಲಗೂಡು: ತಾಲೂಕು ವಲಯ ಅರಣ್ಯಾಧಿಕಾರಿ ಅರುಣ್ ವಿರುದ್ಧ ತನಿಖೆ ಅಂತಿಮ ಘಟ್ಟಕ್ಕೆ ತಲುಪಿದ್ದು, ಇನ್ನೂ ಮೂರ್ನಾಲ್ಕು ದಿನಗಳಲ್ಲಿ ಸರ್ಕಾರಕ್ಕೆ ತನಿಖೆ ವರದಿ ನೀಡಲಾಗುವುದು ಎಂದು ಸಾಮಾಜಿಕ ಅರಣ್ಯ ಜಿಲ್ಲಾ ಅಧಿಕಾರಿ ಅನುಪಮ ತಿಳಿಸಿದರು.

ಅರಣ್ಯಾಧಿಕಾರಿ ಅರುಣ್ ವಿರುದ್ಧ ತನಿಖೆ ಅಂತಿಮಘಟ್ಟಕ್ಕೆ ತಲುಪಿದೆ: ಅನುಪಮ

ಇಲಾಖೆಯ ಗುತ್ತಿಗೆ ಆಧಾರದ ಕಾಮಗಾರಿಯ ಜೊತೆಗೆ ಅರಣ್ಯ ಕಾವಲುಗಾರರ ವೇತನವನ್ನು ನಿಯಮ ಅನುಸಾರವಾಗಿ ನೀಡದೆ ಭ್ರಷ್ಟಾಚಾರ ಎಸೆಗಿದ್ದಾರೆ ಎಂದು ಸ್ಥಳೀಯ ಶಾಸಕ ಎ.ಟಿ.ರಾಮಸ್ವಾಮಿ ಆರೋಪಿಸಿ ಅಪರ ಮುಖ್ಯ ಕಾರ್ಯದರ್ಶಿ, ಅರಣ್ಯ ಪರಿಸರ ಇಲಾಖೆ, ಬೆಂಗಳೂರು ಇವರಿಗೆ ಪತ್ರ ಬರೆಯುವ ಮೂಲಕ ದೂರು ನೀಡಿದ್ದರು.

ಈ ಹಿನ್ನೆಲೆ ತನಿಖಾ ಅಧಿಕಾರಿ ಅನುಪಮ ತಾಲೂಕು ವಲಯ ಅರಣ್ಯಾಧಿಕಾರಿ ಕಚೇರಿಗೆ ಭೇಟಿ ನೀಡಿ ಕೆಲವು ಉನ್ನತಮಟ್ಟದ ದಾಖಲೆಗಳನ್ನು ವಶಪಡಿಸಿಕೊಂಡ ನಂತರ ಅರಣ್ಯ ಕಾವಲುಗಾರರ ಹೇಳಿಕೆ ಪಡೆದುಕೊಂಡರು. ನಂತರ ಮಾತನಾಡಿದ ಅವರು, ತನಿಖೆ ಪೂರ್ಣಗೊಳ್ಳುತ್ತಿದ್ದು, ಇನ್ನು ಮೂರ್ನಾಲ್ಕು ದಿನಗಳಲ್ಲಿ ಅಂತಿಮ ಘಟ್ಟ ತಲುಪುತ್ತದೆ. ನಂತರ ತನಿಖಾ ವರದಿಯನ್ನು ಸರ್ಕಾರಕ್ಕೆ ಕಳುಹಿಸಿಕೊಡಲಾಗುವುದು ಎಂದು ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.