ETV Bharat / state

ಅಪಹರಣವಾದ ಸದಸ್ಯರನ್ನು ಶೀಘ್ರ ಹುಡುಕಿಕೊಡಿ... ಪೊಲೀಸರಿಗೆ ಹೆಚ್​​​.ಕೆ ಕುಮಾರಸ್ವಾಮಿ ಮನವಿ - sakaleshpura taluk election

ಸಕಲೇಶಪುರ ತಾಲೂಕು ಪಂಚಾಯಿತಿ ಅಧ್ಯಕ್ಷೆ ಶ್ವೇತಾ ಮತ್ತು ಇತರರು ಸೇರಿ ಜುಲೈ 2ರಂದು ಐಗೂರು ಕ್ಷೇತ್ರದ ಜೆಡಿಎಸ್ ಸದಸ್ಯ ಶಿವಪ್ಪ ಎಂಬುವರನ್ನು ಅಪಹರಿಸಿದ್ದಾರೆ. ಶೀಘ್ರವೇ ಅವರನ್ನು ಹುಡುಕಿ ಕೊಟ್ಟು, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಮುಂದಾಗಬೇಕೆಂದು ಪೊಲೀಸ್​ ಇಲಾಖೆಗೆ ಮನವಿ ಮಾಡಿದರು.

search for kidnapped members, HK Kumaraswamy appeals to police
ಅಪಹರಣವಾದ ಸದಸ್ಯರನ್ನು ಶೀಘ್ರ ಹುಡುಕಿಕೊಡಿ....ಪೊಲೀಸರಿಗೆ ಹೆಚ್​​​.ಕೆ ಕುಮಾರಸ್ವಾಮಿ ಮನವಿ
author img

By

Published : Jul 8, 2020, 12:07 AM IST

ಹಾಸನ: ಸಕಲೇಶಪುರ ತಾಲೂಕು ಪಂಚಾಯಿತಿ ಸದಸ್ಯರೊಬ್ಬರ ಅಪಹರಣವಾಗಿದ್ದು, ಪೊಲೀಸರು ಈ ಪ್ರಕರಣದ ತನಿಖೆ ನಡೆಸಿ, ಕೂಡಲೇ ಅಪಹರಣಕ್ಕೊಳಗಾದವರನ್ನು ಹುಡುಕಿ ಕೊಡಬೇಕೆಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಕೆ. ಕುಮಾರಸ್ವಾಮಿ ಒತ್ತಾಯಿಸಿದರು.

ಅಪಹರಣವಾದ ಸದಸ್ಯರನ್ನು ಶೀಘ್ರ ಹುಡುಕಿಕೊಡಿ....ಪೊಲೀಸರಿಗೆ ಹೆಚ್​​​.ಕೆ ಕುಮಾರಸ್ವಾಮಿ ಮನವಿ

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಕಲೇಶಪುರ ತಾಲೂಕು ಪಂಚಾಯಿತಿ ಅಧ್ಯಕ್ಷೆ ಶ್ವೇತಾ ಮತ್ತು ಇತರರು ಸೇರಿ ಜುಲೈ 2 ರಂದು ಐಗೂರು ಕ್ಷೇತ್ರದ ಜೆಡಿಎಸ್ ಸದಸ್ಯ ಶಿವಪ್ಪ ಎಂಬುವರನ್ನು ಅಪಹರಿಸಿದ್ದಾರೆ. ಕೆಲ ದಿನಗಳ ಹಿಂದೆ ಜೆಡಿಎಸ್ ಪಕ್ಷದ 4 ಜನ ಸದಸ್ಯರು ಮತ್ತು ಕಾಂಗ್ರೆಸ್ ಪಕ್ಷದ 4 ಜನ ಸದಸ್ಯರು ಸೇರಿ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಮಾಡಲು ನಿರ್ಧರಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ನೀಡಿದ್ದು, ಜುಲೈ 10ಕ್ಕೆ ಅವಿಶ್ವಾಸ ನಿರ್ಣಯ ಮಂಡಿಸಲು ದಿನಾಂಕ ನಿಗದಿ ಮಾಡಲಾಗಿದೆ.

ಈ ಹಿನ್ನೆಲೆಯಲ್ಲಿ ಕೂಡಲೇ ಅಪಹೃತ ಶಿವಪ್ಪನನ್ನು ಹುಡುಕಿಕೊಡಬೇಕು ಎಂದು ಆಗ್ರಹಿಸಿದರು. ತಾಲೂಕು ಪಂಚಾಯಿತಿಯಲ್ಲಿ ಒಟ್ಟು 11 ಸದಸ್ಯ ಸ್ಥಾನವಿದ್ದು, 4 ಜೆಡಿಎಸ್, 5 ಕಾಂಗ್ರೆಸ್ ಹಾಗೂ 2 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಪಡೆದಿದೆ. ಬಿಜೆಪಿಯ ಶ್ವೇತಾ ಅವರನ್ನು ಎರಡೂವರೆ ವರ್ಷದವರೆಗೆ ಮಾತ್ರ ಒಡಂಬಡಿಕೆಯ ಆಧಾರದಲ್ಲಿ ಅಧ್ಯಕ್ಷೆಯನ್ನಾಗಿ ಮಾಡಲಾಗಿತ್ತು. ಅವಿಶ್ವಾಸ ನಿರ್ಣಯ ಮಂಡನೆಗೆ 8 ಜನ ಸದಸ್ಯರ ಬಹುಮತ ಬೇಕಾಗಿದೆ. ಹಾಗಾಗಿ ಈ ಅಪಹರಣವಾಗಿದೆ.

ಈ ಬಗ್ಗೆ ಸಕಲೇಶಪುರ ಪೊಲೀಸ್ ಠಾಣೆಯಲ್ಲಿ ಅಧ್ಯಕ್ಷೆ ಶ್ವೇತಾ ಹಾಗೂ ಅವರ ಪತಿ ಪ್ರಸನ್ನ, ಸಹಚರರಾದ ರವಿ, ಆಕಾಶ್ ಮತ್ತು ವಿಜಯ್ ವಿರುದ್ಧ ದೂರು ಕೊಡಲಾಗಿದೆ. ಆದರೆ ಶ್ವೇತಾ ಅವರನ್ನೇ ಅಪಹರಣ ಮಾಡಿದ್ದಾರೆ ಎಂದು ನಮ್ಮ ವಿರುದ್ಧ ಬಿಜೆಪಿಯವರೂ ದೂರು ನೀಡಿದ್ದಾರೆ. ಈ ದೂರನ್ನು ಸೂಕ್ತ ರೀತಿ ಪರಿಶೀಲಿಸಿ ಕೈಬಿಡಬೇಕೆಂದು ಶಾಸಕರು ಒತ್ತಾಯಿಸಿದರು.

ಸಭೆಯಲ್ಲಿ ಸಕಲೇಶಪುರ ಜಿಲ್ಲಾ ಪಂಚಾಯಿತಿ ಸದಸ್ಯೆ ಉಜ್ಮಾ ರಿಜ್ವಿ, ತಾಲೂಕು ಪಂಚಾಯಿತಿ ಸದಸ್ಯೆ ಚೈತ್ರಾ, ಐಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚಂದ್ರಮತಿ, ಸದಸ್ಯ ಶಿವಪ್ಪ ಅವರ ಪತ್ನಿ ನೀಲಾ ಇತರರು ಉಪಸ್ಥಿತರಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.