ETV Bharat / state

ಸಂಜೆ 6 ಗಂಟೆಯ ನಂತರ ಸಕಲೇಶಪುರ ಲಾಕ್​ಡೌನ್​​: ಶಾಸಕ ಕುಮಾರಸ್ವಾಮಿ - ಹಾಸನ ಜಿಲ್ಲಾ ಸುದ್ದಿ

ಕೊರೊನಾ ಹಾವಳಿ ಹಿನ್ನೆಲೆ ಸಕಲೇಶಪುರದಲ್ಲಿ ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೆ ಮಾತ್ರ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಿದ್ದು, ತಾಲೂಕಿನ ಜನರ ಹಿತದೃಷ್ಟಿಯಿಂದ ಸಂಜೆ 6 ಗಂಟೆ ನಂತರ ಸ್ವಯಂಪ್ರೇರಿತ ಲಾಕ್​​ಡೌನ್ ಮಾಡಲಾಗುತ್ತಿದೆ.

sakaleshapura-lock-down
ಶಾಸಕ ಎಚ್​ ಕೆ ಕುಮಾರಸ್ವಾಮಿ
author img

By

Published : Jul 25, 2020, 3:35 PM IST

ಸಕಲೇಶಪುರ: ಸೋಮವಾರದಿಂದ ತಾಲೂಕಿನಲ್ಲಿ ಅಂಗಡಿ ಮುಂಗಟ್ಟುಗಳನ್ನು ಸಂಜೆ 6 ಗಂಟೆವರೆಗೆ ತೆರೆಯಲು ಅವಕಾಶ ಕಲ್ಪಿಸಲಾಗಿದೆ ಎಂದು ಶಾಸಕ ಹೆಚ್.ಕೆ.ಕುಮಾರಸ್ವಾಮಿ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ವರ್ತಕರ ಸಭೆ ನಡೆಸಿದ ನಂತರ ಮಾತನಾಡಿದ ಅವರು, ಕೋವಿಡ್-19 ಹಿನ್ನೆಲೆ ತಾಲೂಕಿನಲ್ಲಿ ವರ್ತಕರು ಬೆಳಿಗ್ಗೆ 7 ಗಂಟೆಯಿಂದ ಮಧ್ಯಾಹ್ನ 3 ಗಂಟೆವರೆಗ ಮಾತ್ರ ಅಂಗಡಿಗಳನ್ನು ತೆರೆದು ನಂತರ ಲಾಕ್​​ಡೌನ್ ಮಾಡಲು ಸಮ್ಮತಿಸಿದ್ದರು.

ಸಂಜೆ 6ಗಂಟೆಯ ನಂತರ ಸಕಲೇಶಪುರ ಲಾಕ್​ಡೌನ್

ಆದರೆ ಇದೀಗ ಸರ್ಕಾರ ಅಂಗಡಿಗಳನ್ನು ಸಂಪೂರ್ಣವಾಗಿ ತೆರೆಯಲು ಅವಕಾಶ ನೀಡಿರುವ ಹಿನ್ನೆಲೆ ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೆ ಮಾತ್ರ ಅಂಗಡಿಗಳನ್ನು ತೆರೆಯಲಾಗುತ್ತದೆ. ತಾಲೂಕಿನ ಜನರ ಹಿತದೃಷ್ಟಿಯಿಂದ ಸಂಜೆ 6 ಗಂಟೆ ನಂತರ ಸ್ವಯಂಪ್ರೇರಿತ ಲಾಕ್​​ಡೌನ್ ಮಾಡಲಾಗುತ್ತದೆ ಎಂದರು.

ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಅಂಗಡಿಗಳಿಗೆ ಗುಂಪು ಗುಂಪಾಗಿ ಹೋಗಿ ಖರೀದಿಗೆ ಮುಗಿಬೀಳಬಾರದು ಎಂದು ಎಚ್ಚರಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.