ETV Bharat / state

ಹೊಟ್ಟೆನೋವಿನಿಂದ ಬಳಲುತ್ತಿರುವ ಸಾಲುಮರದ ತಿಮ್ಮಕ್ಕ ಆಸ್ಪತ್ರೆಗೆ ದಾಖಲು - ಹಾಸನ ಖಾಸಗಿ ಆಸ್ಪತ್ರಗೆ ದಾಖಲು

ವೃಕ್ಷ ಮಾತೆ ಸಾಲು ಮರದ ತಿಮ್ಮಕ್ಕ ತೀವ್ರ ಹೊಟ್ಟೆ ನೋವಿನ ಕಾರಣ ಹಾಸನದ ಖಾಸಗಿ ನರ್ಸಿಂಗ್​​​ ಹೋಮ್​ಗೆ ದಾಖಲಾಗಿದ್ದಾರೆ. ಸದ್ಯ ಅವರ ಆರೋಗ್ಯ ಸ್ಥಿರವಾಗಿದ್ದು, ಯಾವುದೇ ಅಪಾಯ ಇಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ವೈದ್ಯರು ವಿಶೇಷ ಕಾಳಜಿ ವಹಿಸಿ ಚಿಕಿತ್ಸೆ ಮಾಡುತ್ತಿದ್ದಾರೆ ಎಂದು ಪುತ್ರ ಬಳ್ಳೂರು ಉಮೇಶ್ ಮಾಹಿತಿ ನೀಡಿದ್ದಾರೆ.

saalumarada thimmakka Admitted to private hospital in Hassan
ಹೊಟ್ಟೆನೋವಿನಿಂದ ಬಳಲುತ್ತಿರುವ ಸಾಲುಮರದ ತಿಮ್ಮಕ್ಕ ಆಸ್ಪತ್ರೆಗೆ ದಾಖಲು
author img

By

Published : May 21, 2020, 9:06 PM IST

ಹಾಸನ: ತೀವ್ರ ಹೊಟ್ಟೆನೋವಿನಿಂದ ಬಳಲುತ್ತಿರುವ ವೃಕ್ಷ ಮಾತೆ, ನಾಡೋಜ ಹಾಗೂ ಪದ್ಮಶ್ರೀ ಪುರಸ್ಕೃತೆ ಸಾಲುಮರದ ತಿಮ್ಮಕ್ಕನನ್ನು ಇಲ್ಲಿನ ಖಾಸಗಿ ನರ್ಸಿಂಗ್ ಹೋಮ್​​​ಗೆ ಗುರುವಾರ ದಾಖಲಿಸಲಾಗಿದೆ.

ತೀವ್ರ ಹೊಟ್ಟೆ ನೋವು ಹಾಗೂ ವಾಂತಿ ಆದ ಹಿನ್ನೆಲೆಯಲ್ಲಿ ಹಾಸನದ ಖಾಸಗಿ ನರ್ಸಿಂಗ್ ಹೋಮ್​​ಗೆ ದಾಖಲಿಸಲಾಗಿದ್ದು. ಯಾವುದೇ ಅಪಾಯ ಇಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

ಪುತ್ರ ಬಳ್ಳೂರು ಉಮೇಶ್ ಮಾತನಾಡಿ, ಹೊಟ್ಟೆನೋವಿನಿಂದ ಬಳಲುತ್ತಿದ್ದ ಅಜ್ಜಿಯನ್ನು ಕರೆತಂದು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಸದ್ಯ ಆರೋಗ್ಯ ಸ್ಥಿರವಾಗಿದೆ. ಆಸ್ಪತ್ರೆಯ ವೈದ್ಯೆ ಮಣಿ ದಂಪತಿ ಅವರ ಕುರಿತು ವಿಶೇಷ ಕಾಳಜಿ ವಹಿಸಿದ್ದಾರೆ ಎಂದು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.