ಹಾಸನ: ಮುಗೇರ ಜನಾಂಗದವರಿಗೆ ಜಾತಿ ಮತ್ತು ಆದಾಯ ದೃಢೀಕರಣ ಪತ್ರ ಕೊಡಿಸುವಂತೆ ಆಗ್ರಹಿಸಿ ಕರವೇ ಆಲೂರು ತಾಲೂಕು ಘಟಕದಿಂದ ಜಿಲ್ಲಾಧಿಕಾರಿ ಆರ್. ಗಿರೀಶ್ರವರಿಗೆ ಮನವಿ ಸಲ್ಲಿಸಲಾಯಿತು.
ಸಕಲೇಶಪುರ ತಾಲೂಕಿನಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಮುಗೇರ ಜನಾಂಗದವರು ವಾಸಿಸುತ್ತಿದ್ದು, ಸುಮಾರು ಎರಡು ವರ್ಷಗಳಿಂದ ಜಾತಿ ಮತ್ತು ಆದಾಯ ದೃಢೀಕರಣ ಪತ್ರ ನೀಡುತ್ತಿಲ್ಲ. ಇದರಿಂದಾಗಿ ಸರ್ಕಾರದಿಂದ ಸಿಗುವ ಯಾವ ಸೌಲಭ್ಯಗಳು ಮತ್ತು ಶಾಲಾ ಕಾಲೇಜುಗಳಲ್ಲಿ ಓದುತ್ತಿರುವ ಮಕ್ಕಳಿಗೆ ವಿದ್ಯಾರ್ಥಿ ವೇತನ ಸಿಗುತ್ತಿಲ್ಲ ಎಂದರು.
ಈ ಜನಾಂಗದವರು ಅತಿ ಹೆಚ್ಚು ಬಡತನದಲ್ಲಿರುವುದರಿಂದ ಜಾತಿ ಮತ್ತು ಆದಾಯ ದೃಢೀಕರಣ ಪತ್ರದ ಅವಶ್ಯಕತೆ ತುಂಬಾ ಇದ್ದು, ಈ ಕುರಿತು ಗಮನಹರಿಸಿ ಕೂಡಲೇ ಪ್ರಮಾಣ ಪತ್ರ ಕೊಡಿಸುವಂತೆ ಮನವಿ ಮಾಡಲಾಯಿತು.
ಈ ವೇಳೆ ಕರ್ನಾಟಕ ರಕ್ಷಣಾ ವೇದಿಕೆ ಹೋಬಳಿ ಅಧ್ಯಕ್ಷ ದಿನೇಶ್ ವೈದ್ಯನಾಥ್, ಸದಸ್ಯ ಜಯಣ್ಣ, ಹೆಚ್.ಎಸ್. ಪೂವಪ್ಪ, ಕೆ.ಬಿ. ಕೃಷ್ಣಪ್ಪ, ಹೆಚ್.ಕೆ. ಉಮೇಶ್ ಇತರರು ಇದ್ದರು.