ETV Bharat / state

ತಂಬಾಕು ತ್ಯಜಿಸುವಂತೆ ವಿದ್ಯಾರ್ಥಿಗಳಿಂದ ಗುಲಾಬಿ ಆಂದೋಲನ

author img

By

Published : Jan 4, 2020, 7:44 AM IST

ಬೇಲೂರು ಪಟ್ಟಣದಲ್ಲಿ ಬೀಡಿ, ಸಿಗರೇಟ್, ಗುಟ್ಕಾ ಸೇವಿಸುವವರಿಗೆ ಸ್ಥಳದಲ್ಲಿಯೇ ಗುಲಾಬಿ ಹೂ ನೀಡಿ ಅದರಿಂದಾಗುವ ದುಷ್ಪರಿಣಾಮಗಳ ಬಗ್ಗೆ ಆರೋಗ್ಯ ಇಲಾಖೆ ಅರಿವು ಮೂಡಿಸುವ ಕಾರ್ಯಕ್ರಮ ನಡೆಸಿತು.

ಗುಲಾಬಿ ಆಂದೋಲನ
ಗುಲಾಬಿ ಆಂದೋಲನ

ಹಾಸನ/ಬೇಲೂರು: ಶಾಲಾ ಆವರಣದ ಸುತ್ತಮುತ್ತ 100 ಮೀಟರ್​ ಅಂತರದಲ್ಲಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡಬಾರದು ಹಾಗೂ 18 ವರ್ಷದೊಳಗಿನ ಮಕ್ಕಳಿಗೆ ಮನೆಯಲ್ಲಿ ತಂಬಾಕು, ಬೀಡಿ, ಸಿಗರೇಟ್​​ನಂತಹ ಪದಾರ್ಥಗಳನ್ನು ಪೋಷಕರು ಮಕ್ಕಳಿಂದ ತರಿಸಿಕೊಳ್ಳಬಾರದು ಎಂದು ಆರೋಗ್ಯ ಇಲಾಖೆಯ ಕಾರ್ಯನಿರ್ವಹಣಾಧಿಕಾರಿ ಭಾರತಿ ಹೇಳಿದ್ರು.

ಕಾರ್ಯಕ್ರಮದ ಬಳಿಕ ಮಾತನಾಡಿದ ಅವರು, ಶೈಕ್ಷಣಿಕ ಸಂಸ್ಥೆಗಳ ಆವರಣದಿಂದ 100 ಮೀಟರ್​ ಅಂತರದಲ್ಲಿ ತಂಬಾಕು ಸೇವನೆ ಮತ್ತು ಮಾರಟ ಮಾಡುವುದನ್ನು ನಿಷೇಧಿಸಿ ಶಾಲಾ ಮಕ್ಕಳಿಂದಲೇ ಗುಲಾಬಿ ಆಂದೋಲನ ಕಾರ್ಯಕ್ರಮವನ್ನ ಇಲಾಖೆಗಳು ಮಾಡಿದ್ದು ಶ್ಲಾಘನೀಯ ಎಂದರು.

ವಿದ್ಯಾರ್ಥಿಗಳಿಂದ ಗುಲಾಬಿ ಆಂದೋಲನ

ಶಾಲಾ ಮಕ್ಕಳು ಇದರ ಬಗ್ಗೆ ಪೋಷಕರಿಗೆ ಜಾಗೃತಿ ಮೂಡಿಸಿ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಹೊರಹೊಮ್ಮುವಂತೆ ಮಾಡಬೇಕು. ಈಗಾಗಲೇ ಜಿಲ್ಲೆಯಾದ್ಯಂತ ಈ ಗುಲಾಬಿ ಆಂದೋಲನ ನಡೆಸಿ ಜನಜಾಗೃತಿ ಮಾಡಲಾಗುತ್ತಿದೆ ಎಂದರು.

Intro:ಹಾಸನ/ಬೇಲೂರು:
ಶಾಲಾ ಆವರಣ ಸುತ್ತಮುತ್ತ 100ಮೀ ಅಂತರದಲ್ಲಿ ತಂಬಾಕುಗಳನ್ನು ಮಾರಾಟ ಮಾಡಬಾರದು, 18 ವರ್ಷದ ಒಳಗೆ ಇರುವ ಮಕ್ಕಳಿಗೆ ಮನೆಯಲ್ಲಿ ತಂಬಾಕು, ಬೀಡಿ, ಸಿಗರೇಟ್ ಅಮಲು ಭರಿಸುವ ಪಧಾರ್ಥಗಳನ್ನು ಪೋಷಕರು ದಯವಿಟ್ಟು ಮಕ್ಕಳ ಹತ್ತಿರ ತರುವಂತೆ ಹೇಳಬಾರದು ಎಂದು ಆರೋಗ್ಯ ಇಲಾಖೆಯ ಕಾರ್ಯನಿರ್ವಹಣಾಧಿಕಾರಿ ಭಾರತಿ ಹೇಳಿದ್ರು.

ಹಾಸನ ಜಿಲ್ಲೆಯ ಬೇಲೂರು ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಬೀಡಿ,ಸಿಗರೇಟ್, ಗುಟ್ಕಾ ಹಾಕುವರಿಗೆ ಸ್ಥಳದಲ್ಲಿಯೇ ಗುಲಾಬಿ ಹೂ ನೀಡಿ ಅದರಿಂದಾಗುವ ದುಷ್ಪರಿಣಾಮಗಳ ಬಗ್ಗೆ ಆರೋಗ್ಯ ಇಲಾಖೆ ಅರಿವು ಮೂಡಿಸುವ ಕಾರ್ಯವನ್ನ ಮಾಡಿದ ಬಳಿಕ ಅವರು ಮಾತನಾಡಿದ್ರು. ರಾಜ್ಯ ತಂಬಾಕು ನಿಯಂತ್ರಣ ಘಟಕ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲ್ಲೂಕು ಆರೋಗ್ಯ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಇಂತಹುದೊಂದು ವಿಭಿನ್ನ ಕಾರ್ಯಕ್ರಮವನ್ನ ಮಾಡುವ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯವನ್ನ ಮಾಡಿದ್ರು.

ಶೈಕ್ಷಣಿಕ ಸಂಸ್ಥೆಗಳ ಆವರಣದಿಂದ 100ಮೀ ಅಂತರದಲ್ಲಿ ತಂಬಾಕು ಸೇವನೆ ಮತ್ತು ಮಾರಟ ಮಾಡುವುದನ್ನು ನಿಷೇದಿಸಿ ಶಾಲಾ ಮಕ್ಕಳಿಂದಲೇ ಗುಲಾಬಿ ಆಂದೋಲನ ಕಾರ್ಯಕ್ರಮವನ್ನ ಇಲಾಖೆಗಳು ಮಾಡಿದ್ದು ಶ್ಲಾಘನೀಯವಾದದ್ದು, ಶಾಲಾ ಮಕ್ಕಳಿಗೂ ಇದರ ಬಗ್ಗೆ ಪೋಷಕರು ತಂಬಾಕಿನ ಬಗ್ಗೆ ಜಾಗೃತಿ ಮೂಡಿಸಿ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಹೊರಹೊಮ್ಮುವಂತೆ ಮಾಡಬೇಕು. ಈಗಾಗಲೇ ಜಿಲ್ಲೆಯಾದ್ಯಂತ ಈ ಗುಲಾಬಿ ಆಂದೋಲನ ಕಾರ್ಯಕ್ರಮಗಳನ್ನು ನೆಡೆಸಿ ಜನಜಾಗೃತಿ ಜನಜಾಗೃತಿ ಮಾಡಲಾಗುತ್ತಿದೆ ಎಂದ್ರು.

ಆರೋಗ್ಯ ಇಲಾಖೆಯ ಸಂಯೋಜಕ ಹಾಲೇಶ್ ಮಾತನಾಡಿ ತಂಬಾಕು ಸೇವನೆಯಿಂದ ಆಗುವ ಅನಾಹುತಗಳ ಬಗ್ಗೆ ಶಾಲಾ ಮಕ್ಕಳಿಂದ ಜಾಗೃತಿ ಮೂಡಿಸುವ ಸಲುವಾಗಿ ಸರ್ಕಾರದ ವತಿಯಿಂದ ಈ ಗುಲಾಬಿ ಆಂದೋಲನ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ, ಅಲ್ಲದೆ ಎಲ್ಲೆಲ್ಲಿ ತಂಬಾಕು ಮಾರಾಟ ಮಾಡುತ್ತಿದ್ದಾರೆ ಹಾಗೂ ಬೀಡಿ ಸಿಗರೇಟ್ ಸೇದುವವರಿಗೆ ಈ ಒಂದು ಗುಲಾಬಿ ಹೂ ನೀಡುವ ಮೂಲಕ ದುಶ್ಚಟಗಳನ್ನು ಬಿಡಬೇಕು ಎಂದು ಅವರಲ್ಲಿ ತಿಳಿ ಹೇಳುವ ಕೆಲಸ ಮಾಡುತ್ತಿದ್ದೇವೆ. ಇದಕ್ಕೆ ತಾಲೂಕು ಶಿಕ್ಷಣ ಇಲಾಖೆ ಹಾಗೂ ತಾಲೂಕು ಆರೋಗ್ಯ ಅಧಿಕಾರಿಗಳ ಸಹಯೋಗದೊಂದಿಗೆ ಈ ಜಾಥಾ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರಾದ ವಸಂತ್ ಕುಮಾರ್, ತಾಲೂಕು ಹಿರಿಯ ಮಹಿಳಾ ಆರೋಗ್ಯ ಸಹಾಯಕಿ ಚಂದ್ರಮ್ಮ ಸೇರಿದಂತೆ ಹಲವರು ಭಾಗವಿಸಿದ್ರು.
ಇನ್ನು ಹಾಸನದಲ್ಲಿಯೂ ತಂಬಾಕು ಮಾರಾಟ ಮತ್ತು ಅದರಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಕಾಲೇಜು ವಿದ್ಯಾರ್ಥಿಗಳಿಂದ ಗುಲಾಬಿ ಆಂದೋಲನ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿಗಳ ಆವರಣದಲ್ಲಿ ಜಿ.ಪಂ.ಸಿಇಓ ಪರಮೇಶ್ ಚಾಲನೆ ನೀಡಿದ್ರು. ಬಳಿಕ ಆಂದೋಲನದಲ್ಲಿ ಭಾಗಿಯಾಗಿದ್ದ ವಿದ್ಯಾರ್ಥಿಗಳು ಜಿಲ್ಲಾಧಿಕಾರಿಗಳ ಕಛೇರಿ, ಎನ್.ಆರ್.ವೃತ್ತ, ಹೇಮಾವತಿ ಪ್ರತಿಮೆ, ಎವಿಕೆ ಕಾಲೇಜು, ಮಹಾವೀರ ವೃತ್ತ, ಎಂ.ಜಿ.ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಸಾಗಿ ಗುಡ್ಕಾ, ತಂಬಾಕು, ಬೀಡಿ, ಸಿಗರೇಟು ಸೇದುವವರಿಗೆ ಗುಲಾಬಿ ನೀಡಿ ದುಶ್ಚಟಗಳನ್ನ ಬಿಡವಂತೆ ಮನವಿ ಮಾಡಿದ್ರು.

Body:7203289

Conclusion:ಸುನೀಲ್ ಕುಂಭೇನಹಳ್ಳಿ, ಈಟಿವಿ ನ್ಯೂಸ್, ಹಾಸನ.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.