ಹಾಸನ: ಕೊರೊನಾ ಕಾರಣ ಈ ಸಾಲಿನ ನರ್ಸಿಂಗ್ ವಿದ್ಯಾರ್ಥಿಗಳನ್ನು ಸಾಮೂಹಿಕವಾಗಿ ಉತ್ತೀರ್ಣಗೊಳಿಸುವಂತೆ ಒತ್ತಾಯಿಸಿ ಅಖಿಲ ಕರ್ನಾಟಕ ಯುವಜನ ವಿದ್ಯಾರ್ಥಿ ಒಕ್ಕೂಟ (ವೈಎಸ್ಎಫ್) ಜಿಲ್ಲಾಧಿಕಾರಿ ಕಛೇರಿ ಮುಂದೆ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಆರ್. ಗಿರೀಶ್ಗೆ ಮನವಿ ಸಲ್ಲಿಸಿದ್ದಾರೆ.
ರಾಜೀವ್ ಗಾಂಧಿ ವಿಶ್ವವಿದ್ಯಾಲಯದ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು, ಕೋವಿಡ್ ಸಮಯದಲ್ಲಿ ಸರಿಯಾಗಿ ಪಾಠ ಮಾಡಿಲ್ಲ. ಆರ್.ಎಸ್. 5 ಪರೀಕ್ಷೆ ಪದ್ದತಿ ರದ್ದುಪಡಿಸಿ ಆರ್.ಎಸ್.4 ಪದ್ದತಿ ಜಾರಿಗೆ ತರಬೇಕು. ಪ್ರಶ್ನೆ ಪತ್ರಿಕೆಗಳನ್ನು ಈ ಹಿಂದೆ ಇರುವ ಬಹು ಆಯ್ಕೆ ಪದ್ದತಿಯಂತೆ ಜಾರಿಗೆ ತರುವಂತೆ ಒತ್ತಾಯಿಸಿದರು.
ಪ್ರಕಟಿತ ಪದ್ಧತಿ ಫಲಿತಾಂಶದಲ್ಲಿ ಆಗಿರುವ ದೋಷ ಸರಿಪಡಿಸಿ ಮರು ಫಲಿತಾಂಶವನ್ನು ಮರು ಮೌಲ್ಯಮಾಪನದೊಂದಿಗೆ ಪ್ರಕಟಿಸಬೇಕು. ನರ್ಸಿಂಗ್ ಮತ್ತು ಪರೀಕ್ಷಾ ಫಲಿತಾಂಶದ ಬಗ್ಗೆ ಯಾವುದೇ ನಿರ್ಣಯ ತೆಗೆದುಕೊಳ್ಳುವಾಗ ಕಾಲೇಜು ಹಾಗೂ ವಿದ್ಯಾರ್ಥಿಗಳ ಗಮನಕ್ಕೆ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದರು.