ETV Bharat / state

ಟ್ರಕ್ ಟರ್ಮಿನಲ್ ನಿರ್ಮಾಣಕ್ಕೆ ಕಂದಾಯ ಇಲಾಖೆ ಅಸ್ತು: ರೇವಣ್ಣ ವಿರುದ್ಧ ತೊಡೆತಟ್ಟಿ ಗೆದ್ದ ಪ್ರೀತಂ ಗೌಡ! - ರೇವಣ್ಣ ವಿರುದ್ಧ ಹೋರಾಡಿ ಗೆದ್ದ ಪ್ರೀತಂ ಗೌಡ

ಹೇಮಗಂಗೋತ್ರಿ ಸ್ನಾತಕೋತ್ತರ ಕೇಂದ್ರದ ಮುಂದೆ ನಡೆಯುತ್ತಿರುವ ಟ್ರಕ್‌ ಟರ್ಮಿನಲ್ ಕಾಮಗಾರಿಗೆ ಹೆಚ್.ಡಿ.ರೇವಣ್ಣ, ಸ್ಥಳೀಯರು, ವಿದ್ಯಾರ್ಥಿಗಳು ಭಾರಿ ವಿರೋಧ ವ್ಯಕ್ತಪಡಿಸಿದ್ದರು. ಆದರೂ ಟ್ರಕ್‌ಟರ್ಮಿನಲ್ ಕಾಮಗಾರಿ ಮಾಡಿಯೇ ಸಿದ್ಧ ಎಂದು ಶಾಸಕ ಪ್ರೀತಂಗೌಡ ಪಣತೊಟ್ಟಿದ್ದರು.

ಟ್ರಕ್ ಟರ್ಮಿನಲ್ ನಿರ್ಮಾಣಕ್ಕೆ ಕಂದಾಯ ಇಲಾಖೆ ಅಸ್ತು

author img

By

Published : May 5, 2022, 3:54 PM IST

ಹಾಸನ: ಹಾಸನದಲ್ಲಿ ಟ್ರಕ್‌ ಟರ್ಮಿನಲ್ ನಿರ್ಮಾಣ ವಿಚಾರವಾಗಿ ಮಾಜಿ ಸಚಿವ ಹೆಚ್‌.ಡಿ.ರೇವಣ್ಣ ವರ್ಸಸ್ ಶಾಸಕ ಪ್ರೀತಂಗೌಡರ ನಡುವೆ ಜಟಾಪಟಿ ತಾರಕಕ್ಕೇರಿ ಕೊನೆಗೂ ಪ್ರೀತಂಗೌಡ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಬಗ್ಗೆ ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಯಿಂದ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದು, ಹಾಸನದ ಕೆಂಚಟ್ಟಳ್ಳಿ ಗ್ರಾಮದ ಸರ್ವೆ ನಂಬರ್ 31 ರಲ್ಲಿ, 3 ಎಕರೆ 24 ಗುಂಟೆ ಸರ್ಕಾರಿ ಗೋಮಾಳವನ್ನು ಟ್ರಕ್‌ಟರ್ಮಿನಲ್ ಉದ್ದೇಶಕ್ಕೆ ಕಾಯ್ದಿರಿಸಿರುವ ಬಗ್ಗೆ ಸರ್ಕಾರ ಈಗಾಗಲೇ ಪೂರ್ವಾನುನತಿ ನೀಡಿರುವ ಬಗ್ಗೆ ಸ್ಪಷ್ಟವಾಗಿ ಉಲ್ಲೇಖಿಸಿದೆ. ಕರ್ನಾಟಕ ಭೂ ಕಂದಾಯ ಕಾಯ್ದೆ-1964ರ ಕಲಂ 71 ರಡಿ ಟ್ರಕ್ ಟರ್ಮಿನಲ್ ಉದ್ದೇಶಕ್ಕೆ ಕಾಯ್ದಿರಿಸಲು ಸರ್ಕಾರ ಪೂರ್ವಾನುಮತಿ ನೀಡಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಇದರಿಂದ ರೇವಣ್ಣ ಜಿಲ್ಲಾಡಳಿತ ಮತ್ತು ಸರ್ಕಾರದ ವಿರುದ್ಧ ಕೆಂಡಾಮಂಡಲವಾಗಿದ್ದಾರೆ.

ಟ್ರಕ್ ಟರ್ಮಿನಲ್ ನಿರ್ಮಾಣಕ್ಕೆ ಕಂದಾಯ ಇಲಾಖೆ ಅಸ್ತು: ರೇವಣ್ಣ ವಿರುದ್ಧ ತೊಡೆತಟ್ಟಿ ಗೆದ್ದ ಪ್ರೀತಂ ಗೌಡ!

ಹೇಮಗಂಗೋತ್ರಿ ಸ್ನಾತಕೋತ್ತರ ಕೇಂದ್ರದ ಮುಂದೆ ನಡೆಯುತ್ತಿರುವ ಟ್ರಕ್‌ಟರ್ಮಿನಲ್ ಕಾಮಗಾರಿಗೆ ಹೆಚ್.ಡಿ.ರೇವಣ್ಣ, ಸ್ಥಳೀಯರು, ವಿದ್ಯಾರ್ಥಿಗಳು ಭಾರಿ ವಿರೋಧ ವ್ಯಕ್ತಪಡಿಸಿದ್ದರು. ಆದರೂ ಟ್ರಕ್‌ಟರ್ಮಿನಲ್ ಕಾಮಗಾರಿ ಮಾಡಿಯೇ ಸಿದ್ಧ ಎಂದು ಶಾಸಕ ಪ್ರೀತಂಗೌಡ ಪಣತೊಟ್ಟಿದ್ದರು. ಹೀಗಾಗಿ ಸ್ಥಳೀಯರೊಂದಿಗೆ ಸ್ವತಃ ಹೋರಾಟಕ್ಕಿಳಿದಿದ್ದ ಹೆಚ್‌.ಡಿ. ರೇವಣ್ಣ, ತಾತ್ಕಾಲಿಕವಾಗಿ ಕಾಮಗಾರಿ ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದರು. ಆದರೆ ಇಂದು ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಯಿಂದ ಪತ್ರ ಬರೆದಿದ್ದು, ಜಿಲ್ಲಾಧಿಕಾರಿಗಳು ಸರ್ಕಾರದ ಆದೇಶದಂತೆ ಜಮೀನನ್ನು ಕಂದಾಯ ವ್ಯಾಪ್ತಿಯ ಸುಪರ್ದಿಯಲ್ಲೇ ಇರಿಸಿಕೊಳ್ಳತಕ್ಕದ್ದು. ಈ ಜಮೀನನ್ನು ಮುಂದೆ ಯಾವುದಾದರೂ ಸಂಸ್ಥೆ, ಇಲಾಖೆಗೆ ನೀಡಬೇಕಾದಲ್ಲಿ ಸರ್ಕಾರದ ಅನುಮತಿಗೆ ಸೂಕ್ತ ಪ್ರಸ್ತಾವನೆ ಸಲ್ಲಿಸಲು ಪತ್ರದಲ್ಲಿ ಸೂಚಿಸಲಾಗಿದೆ.

ಮುನ್ನೆಚ್ಚರಿಕಾ ಕ್ರಮವಾಗಿ ಸ್ಥಳದಲ್ಲಿ 144 ಸೆಕ್ಷನ್ ಜಾರಿಗೊಳಿಸಲಾಗಿತ್ತು. ಇದರಿಂದ ಟ್ರಕ್‌ಟರ್ಮಿನಲ್ ನಿರ್ಮಾಣದಿಂದ ಸ್ಥಳವನ್ನು ಕಂದಾಯ ಸಚಿವರು ಖುದ್ದು ಪರಿಶೀಲನೆ ನಡೆಸಲಿ ಎಂದು ಪಟ್ಟು ಹಿಡಿದಿದ್ದ ರೇವಣ್ಣ, ಅಧಿಕಾರಿಗಳು ಒಪ್ಪಿದರೆ ಅಲ್ಲಿಯೇ ಟ್ರಕ್‌ಟರ್ಮಿನಲ್ ಕಾಮಗಾರಿ ನಡೆಸಲಿ ಎಂದು ಆಕ್ರೋಶ ಹೊರಹಾಕಿದ್ದರು.

ಇದೀಗ ಕಂದಾಯ ಇಲಾಖೆಯಿಂದಲೇ ಕೆಂಚಟ್ಟಳ್ಳಿ ಗ್ರಾಮದ ಸರ್ವೆ ನಂಬರ್ 31 ರಲ್ಲಿ, 3 ಎಕರೆ 24 ಗುಂಟೆ ಸರ್ಕಾರಿ ಗೋಮಾಳವನ್ನು ಟ್ರಕ್‌ಟರ್ಮಿನಲ್ ಉದ್ದೇಶಕ್ಕೆ ಕಾಯ್ದಿರಿಸಿರುವ ಬಗ್ಗೆ ಸ್ಪಷ್ಟನೆ ನೀಡಲಾಗಿದೆ. ಇದರಿಂದ ರೇವಣ್ಣ ಅವರ ಎರಡು ಹೋರಾಟಗಳು ವಿಫಲವಾದಂತಾಗಿವೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.