ETV Bharat / state

ಕಾಂಪೌಂಡ್‌ನೊಳಗೆ ನುಗ್ಗಿ ಗಿಡಗಳನ್ನು ತಿಂದ ಹಸುಗಳ ಬಂಧನ; ಪೊಲೀಸ್​ ಶೌರ್ಯವೇ? ಛೇಡಿಸಿದ ಜನ - ಹಾಸನದ ಬೇಲೂರು ಪೊಲೀಸ್ ಠಾಣೆ ಸಿಬ್ಬಂದಿ ಜಾನುವಾರುಗಳನ್ನು ಬಂಧಿಸಿದ್ದಾರೆ

ಬೇಲೂರು ಪೊಲೀಸ್ ಠಾಣೆ ಕಾಂಪೌಂಡ್ ಆವರಣದೊಳಗೆ ಹಸುಗಳು ನುಗ್ಗಿ ಅಲ್ಲಿದ್ದ ಗಿಡಗಳನ್ನು ತಿಂದಿವೆ. ಇದರಿಂದ ಕೋಪಗೊಂಡ ಠಾಣಾ ಸಿಬ್ಬಂದಿ ಹಸುಗಳನ್ನು ಠಾಣೆ ಬಳಿಯಲ್ಲೇ ಕಟ್ಟಿ ಹಾಕಿದ್ದರು.

ಗಿಡಗಳನ್ನು ತಿಂದ ಜಾನುವಾರುಗಳ ಬಂಧನ: ಇದೇನು ಪೊಲೀಸ್​ ಶೌರ್ಯವೇ ಎಂದು ಛೇಡಿಸಿದ ಜನ

author img

By

Published : Jun 13, 2022, 6:36 PM IST

Updated : Jun 13, 2022, 7:06 PM IST

ಬೇಲೂರು (ಹಾಸನ): ಹಾಸನದ ಬೇಲೂರು ಪೊಲೀಸ್ ಠಾಣೆ ಸಿಬ್ಬಂದಿ ಜಾನುವಾರುಗಳನ್ನು ಬಂಧಿಸಿ ಸುದ್ದಿಯಾಗಿದ್ದಾರೆ. ಕೇಳೋಕೆ ವಿಚಿತ್ರ ಅನ್ನಿಸಿದ್ರು ಇದು ಸತ್ಯ. ಕೊನೆಗೆ, ಯಾಕಾದ್ರೂ ಈ ಕೆಲಸ ಮಾಡಿದ್ವಪ್ಪಾ ಎಂದು ಪೊಲೀಸರು ಪೇಚಿಗೂ ಸಿಲುಕಿದ್ರು.

ಬೇಲೂರು ಪೊಲೀಸ್ ಠಾಣೆ ಕಾಂಪೌಂಡ್ ಆವರಣದೊಳಗೆ ಬೇಲೂರು ನೆಹರು ನಿವಾಸಿಗಳಾದ ಸಿದ್ದಮ್ಮ ಮತ್ತು ನಿಂಗಮ್ಮರ ಹಸುಗಳು ನುಗ್ಗಿ ಅಲ್ಲಿದ್ದ ಗಿಡಗಳನ್ನು ಮೇಯ್ದಿವೆ. ಇದರಿಂದ ಕೆರಳಿದ ಠಾಣಾ ಸಿಬ್ಬಂದಿ ಸಿಪಿಐ ಯೋಗೀಶ್ ಆದೇಶದಂತೆ ಹಸುಗಳನ್ನು ಬಿಡದಂತೆ ಠಾಣೆ ಬಳಿಯಲ್ಲೇ ಕಟ್ಟಿ ಹಾಕಿದ್ದಾರೆ. ವೃದ್ಧೆಯರಿಬ್ಬರು ಹಸುಗಳನ್ನು ಬಿಡಿ ಎಂದು ಬೇಡಿಕೊಂಡರೂ ಪೊಲೀಸರು ಬಿಟ್ಟುಕೊಟ್ಟಿಲ್ಲ.

"ಹಾಲು ಕರೆಯದೆ ಹೋದ್ರೆ ಹಸುಗಳಿಗೆ ಕೆಚ್ಚಲಬಾಹು ಬರುತ್ತೆ. ನಾವು ಕೂಲಿಗೆ ಹೋಗಲು ಆಗಲ್ಲ, ಈ ಹಸುಗಳೇ ಜೀವನಾಧಾರ" ಎಂದು ಪೊಲೀಸ್ ಸಿಬ್ಬಂದಿ ಬಳಿ ಮಹಿಳೆಯರು ಬೇಡಿಕೊಂಡಿದ್ದಾರೆ. ಕೊನೆಗೆ ರಾತ್ರಿ 10:30 ರ ಹೊತ್ತಿಗೆ ಹಸುಗಳನ್ನು ಪೊಲೀಸರು ಬಿಟ್ಟು ಕಳುಹಿಸಿದ್ದಾರೆ.

ಸಾರ್ವಜನಿಕರ ಟೀಕೆ: ಕಳ್ಳರನ್ನು ಹಿಡಿಯಲು ಕೆಲವೊಮ್ಮೆ ಉದ್ದೇಶಪೂರ್ವಕವಾಗಿ ಹಿಂಜರಿಯುವ ಪೊಲೀಸರು, ಹಸುಗಳನ್ನು ಬಂಧಿಸಿ ಶೌರ್ಯ ಮೆರೆಯೋದು ಸರಿನಾ? ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಡ್ರಗ್ಸ್‌ ಪಾರ್ಟಿ: ಸಿದ್ದಾಂತ್ ಕಪೂರ್‌ ಸೇರಿ ಐವರನ್ನು ಕೋರ್ಟ್‌ಗೆ ಹಾಜರುಪಡಿಸುವ ಸಾಧ್ಯತೆ

Last Updated : Jun 13, 2022, 7:06 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.