ETV Bharat / state

ನೆರೆ ಹಾನಿ ಬಗ್ಗೆ ಅಧಿಕಾರಿಗಳಿಂದ ತಪ್ಪು ಮಾಹಿತಿ; ಸಿ.ಟಿ ರವಿ,ಮಾದುಸ್ವಾಮಿ ಗರಂ - ಅಧಿಕಾರಿಗಳ ವಿರುದ್ಧ ಸಚಿವರ ಅಸಮಾಧಾನ

ಪ್ರವಾಹ ಹಾನಿ ಸಂಬಂಧ ಅಧಿಕಾರಿಗಳು ಸರಿಯಾಗಿ ಮಾಹಿತಿ ನೀಡದ್ದಕ್ಕೆ ಸಚಿವರು ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ಸಿ.ಟಿ ರವಿ,ಮಾದುಸ್ವಾಮಿ ಗರಂ!
author img

By

Published : Aug 23, 2019, 4:50 PM IST

ಹಾಸನ : ನೆರೆ ಹಾನಿ ಬಗ್ಗೆ ಮಾಹಿತಿ ಕೊಡಿ ಎಂದರೆ ಮನಸೋ ಇಚ್ಚೆ ತಪ್ಪು ಮಾಹಿತಿ ನೀಡುತ್ತಿದ್ದೀರಲ್ಲ, ನಾವೇನು ತಮಾಷೆ ನೋಡಲು ಬಂದಿದ್ದೇವೆ ಎಂದುಕೊಂಡಿದ್ದೀರಾ? ಎಂದು ಅಧಿಕಾರಿಗಳ ವಿರುದ್ಧ ಸಚಿವರಾದ ಸಿ.ಟಿ.ರವಿ ಮತ್ತು ಮಾದುಸ್ವಾಮಿ ಗರಂ ಆದ ಪ್ರಸಂಗ ನಡೆಯಿತು.

ಅತಿವೃಷ್ಟಿ ಪರಿಸ್ಥಿತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳನ್ನು ತರಾಟೆಗೆ ತಗೆದುಕೊಂಡ ಸಚಿವರು, ಜಿಲ್ಲಾಧಿಕಾರಿಯವರಿಗೆ ನೆರೆ ಹಾನಿ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ ಎಂದರೆ ಕೇಂದ್ರ ಸರ್ಕಾರ ರಾಷ್ಟ್ರೀಯ ವಿಪತ್ತು ನಿಧಿಯಿಂದ ಯಾವ ಮಾನದಂಡದ ಮೇಲೆ ನೆರವು ನೀಡುತ್ತದೆ? ಉಸ್ತುವಾರಿ ಕಾರ್ಯದರ್ಶಿಗಳೇ, ನೀವೇ ಅಧಿಕಾರಿಗಳ ಸಭೆ ನಡೆಸಿ ಸ್ಪಷ್ಟ ಮಾಹಿತಿ ನೀಡಿ ಎಂದು ಸಚಿವರು ಸೂಚಿಸಿದರು.

ಜಿಲ್ಲಾಧಿಕಾರಿ ಅಕ್ರಂಪಾಷ ನೀಡುತ್ತಿರುವ ಮಾಹಿತಿ ಪಡೆದು ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸಲು ಆಗಲ್ಲ. ಚಿಕ್ಕಮಗಳೂರು ಡಿಸಿ ಎಷ್ಟು ನಿಖರವಾಗಿ ಮಾಹಿತಿ ನೀಡಿದ್ದರು. ನಷ್ಟದ ಮಾಹಿತಿ ಸತ್ಯಾಂಶಕ್ಕೆ ಹತ್ತಿರವಾಗಿರಬೇಕಲ್ಲವೇ? ಬೆಳೆ ನಷ್ಟ ಎಷ್ಟು, ಮನೆ ಎಷ್ಟು, ಸರ್ಕಾರಿ ಆಸ್ತಿ ಎಷ್ಟು, ಸರ್ಕಾರಿ ಶಾಲೆಗಳು ಎಷ್ಟು ಹಾನಿಯಾಗಿದೆ? ಇದೆಲ್ಲಾ ಪ್ರವಾಹದಿಂದಲೇ ಸಂಭವಿಸಿದ್ದೇ? ಕಚ್ಚಾಮನೆ ಎಷ್ಟು, ಪಕ್ಕಾ ಮನೆ ಎಷ್ಟು? ಹೀಗೆ ಪ್ರತ್ಯೇಕವಾಗಿ ಮಾಹಿತಿ ನೀಡಬಾರದೆ ಎಂದು ಸಚಿವ ಮಾಧುಸ್ವಾಮಿ ಅಧಿಕಾರಿಗಳನ್ನು ಪ್ರಶ್ನಿಸಿದರು.

ಅಧಿಕಾರಿಗಳ ಕಾರ್ಯವೈಖರಿ ವಿರುದ್ಧ ಸಿ.ಟಿ ರವಿ, ಮಾದುಸ್ವಾಮಿ ಗರಂ

ಶಾಸಕ ಕೆ.ಎಂ.ಶಿವಲಿಂಗೇಗೌಡ ಮಾತನಾಡಿ, ಬಹಳಷ್ಟು ವರ್ಷದಿಂದ ಸರ್ಕಾರಿ ಶಾಲೆ ಕಟ್ಟಡ ದುರಸ್ತಿ ಆಗಿರಲಿಲ್ಲ. ಕಟ್ಟಡಗಳು ಮಳೆಗೆ ಬಿದ್ದು ಹೋಗಿದೆ ಎಂದರು.

ಸಕಲೇಶಪುರ ಕ್ಷೇತ್ರದ ಶಾಸಕ ಎಚ್.ಕೆ.ಕುಮಾರಸ್ವಾಮಿ, ಸಕಲೇಶಪುರ ತಾಲೂಕು ಐಗೂರು ಗ್ರಾಪಂ ವ್ಯಾಪ್ತಿಯಲ್ಲಿ ವಿದ್ಯುತ್ ಇಲ್ಲದೆ ಜನತೆ ತೊಂದರೆ ಅನುಭವಿಸುತ್ತಿದ್ದಾರೆ. ನೀವು ನೋಡಿದ್ರೆ ವಿದ್ಯುತ್ ಕೊಟ್ಟಿದ್ದೇವೆ ಎನ್ನುತ್ತಿದ್ದೀರಲ್ಲ. ಸಿಬ್ಬಂದಿಗಳೇ ಇಲ್ಲ, ಎಲ್ಲಿಂದ ಸಮಸ್ಯೆ ಬಗೆಹರಿಸುತ್ತೀರಿ ಎಂದು ಸಚಿವರ ಪ್ರಶ್ನೆಗೆ ಧ್ವನಿಗೂಡಿಸುತ್ತಲೇ ಸೆಸ್ಕ್ ಅಧಿಕಾರಿಗಳ ಕಾರ್ಯವೈಖರಿ ವಿರುದ್ಧ ಅಸಮಾಧಾನ ತೋಡಿಕೊಂಡರು.

Intro:ಹಾಸನ : ವಿದ್ಯುತ್ ಇಲ್ಲ, ಸಂಪರ್ಕ ಕಲ್ಪಿಸಿಲ್ಲ, ಹಾನಿ ಬಗ್ಗೆ ಮಾಹಿತಿಕೊಡಿ ಎಂದರೆ ಮನಸ್ಸೋಇಚ್ಛೆ ತಪ್ಪು ಮಾಹಿತಿ ನೀಡುತ್ತಿದ್ದೀರಲ್ಲ ನಾವೇನು ತಮಾಷೆ ನೋಡಲು ಬಂದಿದ್ದೇವೆ ಎಂದುಕೊಂಡಿದ್ದೀರಾ, ಜಿಲ್ಲಾಧಿಕಾರಿ ಬಳಿಯೂ ಸ್ಪಷ್ಟ ಮಾಹಿತಿ ಇಲ್ಲ ಎಂದರೆ ಕೇಂದ್ರ ಸರಕಾರ ರಾಷ್ಟ್ರೀಯ ವಿಪತ್ತು ನಿಧಿಯಿಂದ ಯಾವಮಾನ ದಂಡದ ಮೇಲೆ ನೆರವು ನೀಡುತ್ತದೆ? ಉಸ್ತುವಾರಿ ಕಾರ್ಯದರ್ಶಿಗಳೇ ನೀವೆ ಅಧಿಕಾರಿಗಳ ಸಭೆ ನಡೆಸಿ ಸ್ಪಷ್ಟ ಮಾಹಿತಿ ನೀಡಿ ಎಂದು ಸಚಿವ ಮಾಧುಸ್ವಾಮಿ ಹಾಗೂ ಸಿ.ಟಿ.ರವಿ ಸೂಚಿಸಿದರು.
Body:ಸಂಪುಟ ದರ್ಜೆ ಸಚಿವರ ಅಧ್ಯಕ್ಷತೆಯಲ್ಲಿ ಜಿಪಂನ ಹೊಯ್ಸಳ ಸಭಾಂಗಣದಲ್ಲಿ ಪ್ರವಾಹ, ಅತಿವೃಷ್ಟಿ ಪರಿಸ್ಥಿತಿ ಪರಿಶೀಲನಾ ಸಭೆಯಲ್ಲಿ ಸೆಸ್ಕ್,ಕೃಷಿ, ತೋಟಗಾರಿಕೆ ಅಧಿಕಾರಿಗಳು ನೀಡಿದ ಮಾಹಿತಿ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿ ಅಕ್ರಂಪಾಷ ನೀಡುತ್ತಿರುವ ಮಾಹಿತಿ ಪಡೆದು ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸಲು ಆಗಲ್ಲ, ಚಿಕ್ಕಮಗಳೂರು ಡಿಸಿ ಎಷ್ಟು ನಿಖರವಾಗಿ ಮಾಹಿತಿ ನೀಡಿದ್ದರು, ನಷ್ಟದ ಮಾಹಿತಿ ಸತ್ಯಾಂಶಕ್ಕೆ ಹತ್ತಿರವಾಗಿರಬೇಕಲ್ಲವೇ? ಬೆಳೆ ಎಷ್ಟು, ಮನೆ ಎಷ್ಟು, ಸರಕಾರಿ ಆಸ್ತಿ ಎಷ್ಟು, ಸರಕಾರಿ ಶಾಲೆಗಳು ಎಷ್ಟು ಹಾನಿಯಾಗಿದೆ ಇದೆಲ್ಲ ಪ್ರವಾಹದಿಂದಲೇ ಆಗಿದ್ದೇ? ಕಚ್ಚಾಮನೆ ಎಷ್ಟು, ಪಕ್ಕ ಮನೆ ಎಷ್ಟು ಹೀಗೆ ಪ್ರತ್ಯೇಕವಾಗಿ ಮಾಹಿತಿ ನೀಡಬಾರದೆ ಎಂದು ಸಚಿವ ಮಾಧುಸ್ವಾಮಿ ಪ್ರಶ್ನಿಸಿದರು.
ಮಧ್ಯೆ ಪ್ರವೇಶಿಸಿದ ಶಾಸಕ ಕೆ.ಎಂ.ಶಿವಲಿಂಗೇಗೌಡ ಬಹಳಷ್ಟು ವರ್ಷದಿಂದ ಸರಕಾರಿ ಶಾಲೆಕಟ್ಟಡ ದುರಸ್ತಿ ಆಗಿರಲಿಲ್ಲ, ಮಳೆಗೆ ಬಿದ್ದುಹೋಗಿದೆ ಎಂದರು.
ಸಚಿವ ಸಿ.ಟಿ.ರವಿ ಮಾತನಾಡಿ, ಅಸಮರ್ಪಕ ಮಾಹಿತಿ ಹಿನ್ನೆಲೆಯಲ್ಲಿ ಅಧಿಕಾರಿಗಳ ಪ್ರತ್ಯೇಕ ವಿಶೇಷ ತಂಡ ರಚಿಸಿ ಮಾಹಿತಿ ತರಿಸಿಕೊಳ್ಳೋಣ ಎಂದು ಸಲಹೆ ನೀಡಿದರು.
ಜಿಲ್ಲೆಯಲ್ಲಿ ಆ.೫ರಿಂದ ಮಳೆಯಾಗಿದೆ.
ಪಿಡ್ಬ್ಯುಡಿ ಕಾರ್ಯಪಾಲಕ ಅಭಿಯಂತ ಮಂಜುನಾಥ್ ಮಾತನಾಡಿ,ಸಕಲೇಶಪುರ ತಾಲೂಕಿನಲ್ಲಿ ಐದು ಸೇತುವೆ, ೧೯೫ ಕಿಮೀ ರಸ್ತೆ ಹಾನಿಯಾಗಿ ೧೧೫ ಕೋಟಿ ನಷ್ಟವಾಗಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಮಳೆ, ಪ್ರವಾಹದಿಂದ ೪,೬೬೬ ವಿದ್ಯುತ್ ಕಂಬ ಧರೆಗುರುಳಿದೆ, ೩೨ ಟಿಸಿಗಳು ಕೆಟ್ಟುಹೋಗಿದೆ. ಸಕಲೇಶಪುರ ಭಾಗದ ಕೆಲವು ಪ್ರದೇಶಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ ಎಂದು ಸೆಸ್ಕ್ ಕಾರ್ಯಪಾಲಕ ಅಭಿಯಂತ ಸುಚೇತನ್ ಮಾಹಿತಿ ನೀಡಿದರು.ಅಲ್ಲದೆ ಜನತೆಗೆ ತೊಂದರೆ ಆಗದಂತೆ ವಿದ್ಯುತ್ ಹಾಗೂ ಕುಡಿಯುವ ನೀರಿನ ಯೋಜನೆಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಪ್ರಥಮ ಆದ್ಯತೆ ನೀಡುತ್ತಿರುವುದಾಗಿ ತಿಳಿಸಿದರು.
ಸೆಸ್ಕ್ ಅಭಿಯಂತರಿಗೆ ತರಾಟೆ
ಪಿಡ್ಬ್ಯುಡಿ ಎಂಜಿನಿಯರ್‌ಗಳು ನೋಡಿದ್ರೆ ಎರಡು ಗ್ರಾಮ ಹೊರತುಪಡಿಸಿ ಉಳಿದೆಲ್ಲೆಡೆ ಸಂಪರ್ಕ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡುತ್ತಾರೆ, ನೀವು ನೋಡಿದ್ರೆ ಸಂಪರ್ಕ ಇಲ್ಲದೆ ಗ್ರಾಮಕ್ಕೆ ಹೋಗಲು ಆಗಲ್ಲ ಎನ್ನುತ್ತಿದ್ದೀರಿ ಒಂದು ಕಡೆ ಮಳೆ, ಮತ್ತೊಂದು ಕಡೆ ವಿದ್ಯುತ್ ಇಲ್ಲದೆ ಜನ ಬದುಕುವುದಾದರೂ ಹೇಗೆ ಎಂದು ಸೆಸ್ಕ್ ಅಧೀಕ್ಷಕ ಎಂಜಿನಿಯರ್ ಸುಚೇತನ್ ಅವರನ್ನು ಸಚಿವ ಮಾಧುಸ್ವಾಮಿ ತರಾಟೆಗೆ ತೆಗೆದುಕೊಂಡರು.
ಶಾಸಕರ ಧ್ವನಿ
ಆಲೂರು, ಸಕಲೇಶಪುರ ಕ್ಷೇತ್ರದ ಶಾಸಕ ಎಚ್.ಕೆ.ಕುಮಾರಸ್ವಾಮಿ ಮಾತನಾಡಿ,ಸಕಲೇಶಪುರ ತಾಲೂಕು ಐಗೂರು ಗ್ರಾಪಂ ವ್ಯಾಪ್ತಿಯಲ್ಲಿ ವಿದ್ಯುತ್ ಇಲ್ಲದೆ ಜನತೆ ತೊಂದರೆ ಅನುಭವಿಸುತ್ತಿದ್ದಾರೆ ನೀವು ನೋಡಿದ್ರೆ ವಿದ್ಯುತ್ ಕೊಟ್ಟಿದ್ದೇವೆ ಎನ್ನುತ್ತಿದ್ದೀರಲ್ಲ ಸಿಬ್ಬಂದಿಗಳೇ ಇಲ್ಲ ಎಲ್ಲಿಂದ ಸಮಸ್ಯೆ ಬಗೆಹರಿಸುತ್ತೀರಿ ಎಂದು ಸಚಿವರ ಪ್ರಶ್ನೆಗೆ ಧ್ವನಿಗೂಡಿಸುತ್ತಲೇ ಸೆಸ್ಕ್ ಅಧಿಕಾರಿಗಳ ಕಾರ್ಯವೈಖರಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಪ್ರವಾಹ, ಅತಿವೃಷ್ಟಿ ಸಂದರ್ಭ ಯುದ್ಧೋಪಾದಿಯಲ್ಲಿ ಕೆಲಸವಾಗಬೇಕು, ಸೆಸ್ಕ್ ಎಇಇ, ಜೆಇ, ೧೫ ಉಪ ವಿಭಾಗ, ಐದು ಜನ, ಸಿಬ್ಬಂದಿಗಳು, ೬೨ ಸೆಕ್ಷನ್ ಆಫೀಸರ್‌ಗಳನ್ನು ಇಟ್ಟುಕೊಂಡು ಕೆಲಸ ಮಾಡಲು ಆಗಲಿಲ್ಲ ಎಂದರೆ ಏನು ಕೆಲ್ಸ ಮಾಡುತ್ತೀರಿ ಎಂದು ಸೆಸ್ಕ್ ಅಧೀಕ್ಷಕ ಸುಚೇತನ್ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಎಷ್ಟು ಲೈನ್‌ಮನ್‌ಗಳು ಇದ್ದಾರೆ ಮಾಹಿತಿ ಕೊಡ್ರಿ ಎಂದರೆ ತರಿಸಬೇಕು ಎನ್ನುತ್ತೀರಲ್ಲ ನೀವು ಅಧೀಕ್ಷಕ ಎಂಜಿನಿಯರ್ ಎಂದು ತರಾಟೆಗೆ ತೆಗೆದುಕೊಂಡರು.
Conclusion:ಕೃಷಿ ಇಲಾಖೆ ಉಪ ನಿರ್ದೇಶಕ ಮಧುಸೂಧನ್ ಮಾತನಾಡಿ, ಸಕಲೇಶಪುರದಲ್ಲಿ ೧೩೯೫ ಹೆಕ್ಟೇರ್‌ನ ಬೆಳೆನಾಶವಾಗಿದೆ ಎಂದು ವಿವರ ನೀಡುತ್ತಿದ್ದಂತೆ ಶಾಸಕ ಪ್ರೀತಂ ಜೆ.ಗೌಡ ಮಧ್ಯೆ ಪ್ರವೇಶಿಸಿ ಕೃಷಿ ಇಲಾಖೆಯಲ್ಲಿ ಅಧಿಕಾರಿಗಳು, ಸಿಬ್ಬಂದಿಗಳೇ ಇಲ್ಲ ಸಮೀಕ್ಷೆ ಯಾರು ಮಾಡಿದ್ದು? ಅಸಮರ್ಪಕ ಮಾಹಿತಿ ಇದು ಎಂದು ಆಕ್ಷೇಪ ವ್ಯಕ್ತಪಡಿಸಿದರು.

- ಅರಕೆರೆ ಮೋಹನಕುಮಾರ, ಈಟಿವಿ ಭಾರತ, ಹಾಸನ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.