ಹಾಸನ: ಜಾತಿವಾರು, ಮತೀಯವಾರು ದೇಶ ವಿಭಜನೆ ಆಗದಂತೆ ಎಲ್ಲರಲ್ಲೂ ದೇಶಾಭಿಮಾನ ಮೂಡಿಸಲು ಪ್ರತೀ ಮನೆಯಲ್ಲೂ ಒಬ್ಬ ಸ್ವಯಂ ಸೇವಕನನ್ನು ತಯಾರು ಮಾಡುವುದು ಅನಿವಾರ್ಯ ಎಂದು ಎಪಿಎಂಸಿ ಮಾಜಿ ಅಧ್ಯಕ್ಷ ದೇಶಾಣಿ ಆನಂದ್ ಅಭಿಪ್ರಾಯಟ್ಟರು.
ರಾಷ್ಟ್ರೀಯ ಸ್ವಯಂಸೇವಕ ಸಂಘ ಉದಯಿಸಿ 94 ವರ್ಷ ಕಳೆದ ಹಿನ್ನೆಲೆಯಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂಘದ ಧ್ಯೇಯೋದ್ದೇಶಗಳನ್ನು ಹೆಚ್ಚೆಚ್ಚು ಪಸರಿಸುವ ಗುರಿ ಇಟ್ಟುಕೊಳ್ಳಬೇಕು. ರಾಷ್ಟ್ರ ಉಳಿಸುವ ನಿಟ್ಟಿನಲ್ಲಿ ಆರ್‌ಎಸ್‌ಎಸ್ ಸ್ವಯಂ ಪ್ರೇರಿತರಾಗಿ ಸೇರುವುದು ಸೂಕ್ತ ಎಂದು ತಿಳಿಸಿದರು.
ಆರ್‌ಎಸ್‌ಎಸ್ ಪ್ರಮುಖ್ ಕೃಷ್ಣ ಪ್ರಸಾದ್ ಮಾತನಾಡಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರಿಗೆ ಸ್ವಾರ್ಥದ ಬದುಕು ಇರುವುದಿಲ್ಲ. ದೇಶ ಮೊದಲು ಉಳಿದದ್ದು ನಂತರ ಎಂಬ ಧ್ಯೇಯಕ್ಕೆ ಬದ್ಧರಾಗಿರುತ್ತಾರೆ ಎಂದು ಹೇಳಿದರು.
ಸಭಾ ಕಾರ್ಯಕ್ರಮಕ್ಕೂ ಮುನ್ನ ನಗರದ ಪ್ರವಾಸಿ ಮಂದಿರದಿಂದ ಹುಳಿಯಾರು ರಸ್ತೆ, ಶ್ಯಾನಭೋಗರ ಬೀದಿ, ವಾಚನಾಲಯ ರಸ್ತೆ, ಟಿ.ಹೆಚ್.ರಸ್ತೆ ಮಾರ್ಗವಾಗಿ, ಬಿಎಸ್‌ಎನ್‌ಎಲ್ ರಸ್ತೆ ಮೂಲಕ ಲಕ್ಷ್ಮೀಪುರದ ಶ್ರೀ ಆದಿಚುಂಚನಗಿರಿ ಶಾಲೆವರೆಗೂ ಪಥಸಂಚಲನ ನಡೆಯಿತು.