ETV Bharat / state

'ರಾಜ್ಯಕ್ಕೆ ಬರ ಬಂದ್ರೂ ದೇವೇಗೌಡರ ಕಣ್ಣೀರು ಬತ್ತುವುದಿಲ್ಲ'

ರಾಜ್ಯದಲ್ಲಿ ಎಲ್ಲಿ ಬರ ಬಂದರೂ, ಯಾವ ಕೆರೆ ಬತ್ತಿದರೂ ಕೂಡ ಗೌಡರ ಕಣ್ಣಲ್ಲಿ ನೀರು ಬತ್ತುವುದಿಲ್ಲ. ಚುನಾವಣೆ ಸಮೀಪಿಸಿದಾಗ ಅಥವಾ ಆಯಾ ಕಾಲಕ್ಕೆ ತಕ್ಕಂತೆ ದೇವೇಗೌಡರಿಗೆ ಕಣ್ಣೀರು ಬರುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್​​​ ಖಾರವಾಗಿಯೇ ವ್ಯಂಗ್ಯವಾಡಿದರು.

nalin kumar katil criticized devegowda at hassan
ರಾಜ್ಯಕ್ಕೆ ಬರ ಬಂದ್ರೂ ದೇವೇಗೌಡರ ಕಣ್ಣಲ್ಲಿ ನೀರು ಬತ್ತುವುದಿಲ್ಲ; ಕಟೀಲ್​​ ವ್ಯಂಗ್ಯ
author img

By

Published : Jan 13, 2021, 9:41 AM IST

ಹಾಸನ: ರಾಜ್ಯದಲ್ಲಿ ಎಲ್ಲಿ ಬರ ಬಂದರೂ, ಯಾವ ಕೆರೆ ಬತ್ತಿದರೂ ಕೂಡ ಗೌಡರ ಕಣ್ಣಲ್ಲಿನ ನೀರು ಬತ್ತುವುದಿಲ್ಲ. ಇದು ಕಾಲಕ್ಕೆ ತಕ್ಕಂತೆ ಬರುವಂತಹ ಕಣ್ಣೀರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಖಾರವಾಗಿಯೇ ವ್ಯಂಗ್ಯವಾಡಿದರು.

ಹಾಸನ ಹೊರವಲಯದ ಖಾಸಗಿ ರೆಸಾರ್ಟ್​​ನಲ್ಲಿ ನಿನ್ನೆ ಹಮ್ಮಿಕೊಂಡಿದ್ದ ಜನಸೇವಕ ಕಾರ್ಯಕ್ರಮದ ಭಾಷಣದಲ್ಲಿ ಮಾತನಾಡಿದ ಅವರು, ಚುನಾವಣೆ ಸಮೀಪಿಸಿದಾಗ ಅಥವಾ ಆಯಾ ಕಾಲಕ್ಕೆ ತಕ್ಕಂತೆ ದೇವೇಗೌಡರಿಗೆ ಕಣ್ಣೀರು ಬರುತ್ತದೆ. ಈಗಲಾದರೂ ಜನರು ಬದಲಾಗಬೇಕು. ಯಾಕೆಂದರೆ ಈಗ ದೇಶ ಮತ್ತು ರಾಜ್ಯದಲ್ಲಿ ಪರಿವರ್ತನೆಯ ಸಮಯ ಬಂದಿದೆ ಎಂದರು.

ಜನಸೇವಕ ಕಾರ್ಯಕ್ರಮ

ರಾಜ್ಯದಲ್ಲಷ್ಟೇ ಅಲ್ಲದೆ ದೇಶದಲ್ಲಿ ಕಾಂಗ್ರೆಸ್​ಗೆ ಶಾಪ ತಟ್ಟಿದೆ. ಗಾಂಧಿ ಶಾಪ, ಗೋಹತ್ಯೆ ವಿಷಯದ ಶಾಪ, ಅಂಬೇಡ್ಕರ್ ಶಾಪಗಳೇ ದೇಶದಲ್ಲಿ ಕಾಂಗ್ರೆಸ್ ಪತನವಾಗುತ್ತಿರುವುದುಕ್ಕೆ ಕಾರಣ. ಸ್ವಾತಂತ್ರ್ಯ ಬಂದ ಬಳಿಕ ಗಾಂಧೀಜಿಯವರ ಚಿಂತನೆಯನ್ನು ಉಳಿಸಲಿಲ್ಲ. ಅಲ್ಲದೆ ಅಂಬೇಡ್ಕರ್ ಶವಸಂಸ್ಕಾರಕ್ಕೂ ಕಾಂಗ್ರೆಸ್ ದೆಹಲಿಯಲ್ಲಿ ಅವಕಾಶ ನೀಡಲಿಲ್ಲ. ಇದರ ಜೊತೆಗೆ ಕಾಂಗ್ರೆಸ್​ನ ಪ್ರಥಮ ಚಿಹ್ನೆ ಆಕಳು ಮತ್ತು ಗೋವು. ಆದರೆ ನಂತರದ ದಿನಗಳಲ್ಲಿ ಕಾಂಗ್ರೆಸ್ ಗೋಹತ್ಯೆಗೆ ಪ್ರೋತ್ಸಾಹ ನೀಡಿತು. ಹೀಗಾಗಿ ಮೂರು ಶಾಪಗಳು ಕಾಂಗ್ರೆಸ್ ಪತನಕ್ಕೆ ಕಾರಣವಾಗಿವೆ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.

ಈ ಸುದ್ದಿಯನ್ನೂ ಓದಿ: ಪುಣೆಯಿಂದ ಬೆಳಗಾವಿ ವಿಭಾಗ ಮಟ್ಟಕ್ಕೆ ಕೋವಿಶೀಲ್ಡ್ ಲಸಿಕೆ ಆಗಮನ: ಆರತಿ ಬೆಳಗಿ ಸ್ವಾಗತಿಸಿದ ಮಹಿಳಾ ಸಿಬ್ಬಂದಿ

ಸಬ್ಕಾ ಸಾಥ್ ಸಬ್ಕಾ ವಿಕಾಸ್ ಎನ್ನುವ ಘೋಷವಾಕ್ಯವನ್ನು ಮೋದಿ ಪಾಲಿಸಿದ್ದಾರೆ. ಈ ನಿಟ್ಟಿನಲ್ಲಿ ಮುಂದಿನ ಎಲ್ಲಾ ಚುನಾವಣೆಗಳಲ್ಲೂ ಹಾಸನದಲ್ಲಿ ಬಿಜೆಪಿಯ ಕಮಲ ಅರಳಲೇಬೇಕು ಎಂದು ಕಾರ್ಯಕರ್ತರಿಗೆ ಕರೆ ಕೊಟ್ಟರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.